ಪ್ರಪಂಚದ ಅತ್ಯಂತ ಹಿರಿಯ, 105 ವರ್ಷದ ವಿದ್ಯಾರ್ಥಿನಿ, ಕೇರಳದ ಭಾಗೀರಥಿ ಅಮ್ಮ ಇನ್ನಿಲ್ಲ !

ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸ್ಪೂರ್ತಿಯಾಗಿ ಉಳಿದಿದ್ದ ಹಿರಿಯ ಜೀವ ಇನ್ನಿಲ್ಲ. ಆಕೆ ತನ್ನ 105ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ.

ತನ್ನ 105ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದು 7ನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಳಿಸಿದ್ದ, ನಾರಿಶಕ್ತಿ ಪ್ರಶಸ್ತಿ ಪುರಸ್ಕೃತೆ, ಪ್ರಪಂಚದ ಅತ್ಯಂತ ಹಿರಿಯ ವಿದ್ಯಾರ್ಥಿನಿ, ಕೇರಳದ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯ ಪ್ರಕುಲಂನ ಶತಾಯುಷಿ ಭಾಗೀರಥಿ ಅಮ್ಮ, 2019 ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ (ಕೆಎಸ್‌ಎಲ್‌ಎಂ) ನಡೆಸಿದ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಮತ್ತು ಅನಕ್ಷರಸ್ಥರಲ್ಲಿ ಅಕ್ಷರ ಪ್ರೀತಿ ಮೂಡಿಸುವ ಸ್ಪೂರ್ತಿಯಾಗಿ ಹೊರಹೊಮ್ಮಿದ್ದರು.

Ad Widget


Ad Widget


Ad Widget

Ad Widget


Ad Widget

ಕೊಲ್ಲಂನಲ್ಲಿ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದ ಇವರು, 275 ಅಂಕಗಳಿಗೆ 205 ಅಂಕಗಳನ್ನು ಪಡೆದಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದಿದ್ದರು ಎಂಬುದು ವಿಶೇಷ. ತನ್ನ 155ನೇ ವರ್ಷದಲ್ಲಿ ಓದಿನೆಡೆಗೆ ಆಸಕ್ತಿ ಮತ್ತು ಉತ್ಸಾಹ ಮೂಡಿಸಿಕೊಂಡದ್ದೇ ದೊಡ್ಡ ಅಚ್ಚರಿ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: