ನಾಳೆ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠಾಧೀಶರ ಚಾತುರ್ಮಾಸ್ಯ ವ್ರತಾರಂಭೆ ಹಾಗೂ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ

ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭೆ ಮತ್ತು ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ ನಾಳೆ ನಡೆಯಲಿದೆ.

ಶ್ರೀ ಗುರುದೇವ ಮಠದಲ್ಲಿ ನಡೆಯಲಿದ್ದು,ಶ್ರೀ ರಾಮ ದೇವರ ಮಂತ್ರಾಕ್ಷತೆಯನ್ನು ಪಡೆದು ಪುನೀತರಾಗಬೇಕಾಗಿ ಆಡಳಿತ ಸಮಿತಿ ಸದಸ್ಯರು ವಿನಂತಿಸುತ್ತಿದ್ದಾರೆ.

ಈ ಕಾರ್ಯಕ್ರಮವು ಲಕ್ಷ್ಮಿ ಪತಿ ಗೋಪಾಲಚಾರರು, ಆಗಮ ಪ್ರವೀಣ ಬೆಂಗಳೂರು ಇವರ ಉಪಸ್ಥಿತಿಯಲ್ಲಿ ಶ್ರೀ ಗುರುದೇವ ಮಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

Ad Widget


Ad Widget


Ad Widget

Ad Widget


Ad Widget

ಗುರುಪೂರ್ಣಿಮೆಯಂದು ಮೂಲ ಮಠ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಬೆಳಿಗ್ಗೆ 7-00 ಗಂಟೆಯಿಂದ 9-00 ಗಂಟೆಯವರೆಗೆ ಚಾತುರ್ಮಾಸ್ಯ ವೃತ ಸಂಕಲ್ಪ ವೈಧಿಕ ವಿಧಿವಿಧಾನಗಳು ಪ್ರಾರಂಭವಾಗಲಿದೆ. ಹಾಗೆಯೇ ಪೂರ್ವಾಹ್ನ ಗಂಟೆ 10-45ರ ಸುಮುಹೂರ್ತದಲ್ಲಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

ಪೂರ್ವಾಹ್ನ ಗಂಟೆ 11-15ಕ್ಕೆ ಸರಿಯಾಗಿ ಶ್ರೀ ದೇವರಗುಡ್ಡೆ ಗುರುದೇವ ಮಠದ ಪುರಾತನ ದೇವಾಲಯದಿಂದ ವೈಭವದ ಮೆರವಣಿಗೆ ಹಾಗೂ ಶ್ರೀಗಳವರ ಗುರುಪೂರ್ಣಿಮೆಯ ವ್ಯಾಸಪೀಠದ ಪೀಠಾರೋಹಣ, ಗುರುಪಾದುಕಾ ಪೂಜೆ, ಶ್ರೀಗಳ ಶ್ರೀಗಳವರ ಆಶೀರ್ವಚನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಚಾತುರ್ಮಾಸ್ಯ ವೃತದ ಸಮಾಪ್ತಿಯು ತಾ.12-09-2021ನೇ ಗುರುವಾರದಂದು ಮುಕ್ತಾಯಗೊಂಡು, ಅದೇ ದಿನ ಬೆಳಿಗ್ಗೆ ಶ್ರೀಗಳವರ ಸೀಮೋಲ್ಲಂಘನ ಕಾರ್ಯಕ್ರಮ, ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯಲಿರುವುದು. ತದನಂತರ ತನ್ನ ಆರಾಧ್ಯ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿರುವುದು.

ದಿ.13-09-2021ನೇ ಶುಕ್ರವಾರದಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳವರ ಪಟ್ಟಾಭಿಷೇಕದ ವರ್ಧಂತಿಯು ನಡೆಯಲಿದೆ. ಪೂರ್ವಾಹ್ನ ಗಂಟೆ 11-00ರಿಂದ 11-30ರ ವರೆಗೆ ಭಜನಾ ಕಾರ್ಯಕ್ರಮ, ಪೂವಾಹ್ನ ಗಂಟೆ 11-30ರಿಂದ 12-30ರ ವರೆಗೆ ಭಕ್ತಾಧಿಗಳ ಗುರುಪಾದುಕಾ ಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಗುರುಗಳಿಂದ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.

ಕೋವಿಡ್ ತಡೆಗಟ್ಟಲು ಸರಕಾರದ ಆದೇಶ ಪಾಲನೆಗಾಗಿ ಭಕ್ತಾದಿಗಳ ಸುರಕ್ಷತೆಗೆ ಈ ಮೇಲಿನ ದಿನಗಳಂದು ಗ್ರಾಮವಾರು ಭಕ್ತರು ಬಂದು ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕಾಗಿ ವಿನಂತಿಸಲಾಗಿದೆ.

ಕಾರ್ಯಕ್ರಮಕ್ಕೆ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾದ ಶಾಸಕ ಹರೀಶ್ ಪೂಂಜಾ ಮತ್ತಿತರ ಗಣ್ಯರು ಶುಭಹಾರೈಸಿದ್ದಾರೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: