ಕೊರೋನ ಎರಡನೇ ಅಲೆ ನಂತರ ದೇಶಕ್ಕೆ ಕಾಲಿಟ್ಟಿದೆ ಮಹಾಮಾರಿ ಹಕ್ಕಿಜ್ವರ | 11 ವರ್ಷದ ಬಾಲಕ ಸಾವು, ದೇಶದಲ್ಲಿ ಮೊದಲ ಬಲಿ
ಕೊರೋನಾ ಎರಡನೇ ಅಲೆಗೆ ಬಹುತೇಕ ಜನರು ತತ್ತರಿಸಿದ್ದು, ಮೂರನೇ ಅಲೆಯ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರಕ ಕಾಯಿಲೆ ಹಕ್ಕಿ ಜ್ವರ ಮತ್ತಷ್ಟು ಭೀತಿ ಹುಟ್ಟಿಸಿದೆ. ಹಕ್ಕಿಜ್ವರಕ್ಕೆ 11 ವರ್ಷದ ಬಾಲಕ ಬಲಿಯಾಗಿದ್ದು, ಇದು ಈ ವರ್ಷ ಭಾರತದಲ್ಲಿ ಹಕ್ಕಿ ಜ್ವರಕ್ಕಾದ ಮೊದಲ ಬಲಿಯಾಗಿದೆ.
ದೆಹಲಿಯಲ್ಲಿರುವ ಅಖಿಲ ಭಾರತ ವಿಜ್ಞಾನ ಸಂಸ್ಥೆ (ಏಮ್ಸ್ ಆಸ್ಪತ್ರೆ)ಗೆ ಜು.2ರಂದು ದಾಖಲಾಗಿದ್ದ 11 ವರ್ಷದ ಬಾಲಕನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಬಾಲಕನನ್ನು ಉಳಿಸಿಕೊಳ್ಳಲು ವೈದ್ಯರು ಹರಸಾಹಸ ಪಟ್ಟರಾದರೂ ಫಲಿಸಲಿಲ್ಲ. ಮಂಗಳವಾರ ಆಸ್ಪತ್ರೆಯಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮೃತ ಬಾಲಕ ನ್ಯುಮೋನಿಯಾದಿಂದಲೂ ಬಳಲುತ್ತಿದ್ದ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಕೊರೊನಾ ಟೆಸ್ಟ್ ಮಾಡಲಾಗಿತ್ತು ಹಾಗೂ ವರದಿಯು ನೆಗೆಟಿವ್ ಬಂದಿತ್ತು.
ಮನುಷ್ಯ, ಪ್ರಾಣಿ-ಪಕ್ಷಿಗಳಿಗೂ ಬಹುಬೇಗ ಹರಡುವ ಹಕ್ಕಿ ಜ್ವರ ಶೇ.60ರಷ್ಟು ಸಾವಿನ ಪ್ರಮಾಣ ಹೊಂದಿದೆ. ಹಾಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಇದೀಗ ಹಕ್ಕಿ ಜ್ವರಕ್ಕೆ 11 ವರ್ಷದ ಬಾಲಕ ಬಲಿಯಾಗಿದ್ದು, ಹಕ್ಕಿಜ್ವರದ ಬಗ್ಗೆ ಜನರಲ್ಲಿ ಆತಂಕ ಹೆಚ್ಚು ಮಾಡಿದೆ.