Pushpa 2 Stampede Case: ಒತ್ತಡಕ್ಕೆ ಮಣಿದ ಅಲ್ಲು ಅರ್ಜುನ್;‌ ಮೃತ ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ

Pushpa 2 Stampede Case: ಸಂಧ್ಯಾ ಥಿಯೇಟರ್ ಹೊರಗೆ ನಡೆದ ಕಾಲ್ತುಳಿತದಲ್ಲಿ ಪುಷ್ಪ 2 ಚಿತ್ರ ಪ್ರದರ್ಶನದ ವೇಳೆ ಮಹಿಳೆಯೋರ್ವರು ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ. ಮಗುವನ್ನು ಆಸ್ಪತ್ರೆಯಲ್ಲಿದೆ. ಇದೀಗ ಮಗುವಿನ ಸ್ಥಿತಿ ಸುಧಾರಿಸುತ್ತಿದ್ದು, ಕುಟುಂಬದವರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಗುವಿಗೆ ಪ್ರಜ್ಞೆ ಬಂದ ನಂತರ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರನ್ನು ಭೇಟಿ ಮಾಡಿದ್ದಾರೆ.

‘ಪುಷ್ಪ 2’ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಗಾಯಗೊಂಡಿದ್ದ ಮಗುವನ್ನು ಭೇಟಿಯಾದ ನಂತರ, ಚಿತ್ರ ನಿರ್ಮಾಪಕ ಮತ್ತು ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್, ‘ವೈದ್ಯರೊಂದಿಗೆ ಮಾತನಾಡಿದ ನಂತರ, ಹುಡುಗನಿಗೆ ಹುಷಾರುಗುತ್ತಿದ್ದಾನೆ ಎಂದು ತಿಳಿದು ನಮಗೆ ತುಂಬಾ ಸಂತೋಷವಾಗಿದೆ. ಇದ ಉತ್ತಮʼ ಎಂದು ಹೇಳಿದ್ದಾರೆ.

ಇನ್ನೂ ಮುಂದುವರಿದು, ಮಗು ಮತ್ತು ಅವರ ಕುಟುಂಬಕ್ಕೆ ನಾವು 2 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲು ಅರ್ಜುನ್ ಒಂದು ಕೋಟಿ ರೂಪಾಯಿ ಕೊಟ್ಟಿದ್ದು, ನಿರ್ಮಾಪಕರು 50 ಲಕ್ಷ, ನಿರ್ದೇಶಕರು 50 ಲಕ್ಷ ಕೊಟ್ಟಿದ್ದಾರೆ. ಈ ಮೊತ್ತವನ್ನು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.

ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಮಾತನಾಡಿ- ಇಲ್ಲಿಯವರೆಗೆ, ಮಗುವಿನ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಅಲ್ಲು ಅರ್ಜುನ್, ಪುಷ್ಪಾ ನಿರ್ಮಾಪಕ ಮತ್ತು ಸುಕುಮಾರ್ ನೀಡಿದ 2 ಕೋಟಿ ರೂ.ಗಳನ್ನು ಮಗು ಮತ್ತು ಕುಟುಂಬದ ಅನುಕೂಲಕ್ಕಾಗಿ ಬಳಸಲಾಗುವುದು. ನಾಳೆ ಚಿತ್ರರಂಗದ ಸದಸ್ಯರು ಮುಖ್ಯಮಂತ್ರಿ (ಸಿಎಂ) ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ನಿರ್ಮಾಪಕರು, ನಟರು ಸಿಎಂ ಅವರನ್ನು ಖುದ್ದು ಭೇಟಿಯಾಗುವ ಸಾಧ್ಯತೆ ಇದೆ. ಚಿತ್ರರಂಗ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ಸಿಎಂ ತಮಗೆ ವಹಿಸಿದ್ದಾರೆ ಎಂದು ದಿಲ್ ರಾಜು ಹೇಳಿದರು.

Leave A Reply

Your email address will not be published.