ಪರೀಕ್ಷೆ ಬರೆಯುವ ಮೊದಲೇ ಪಾಸಾದ ವಿಶ್ವದ ಮೊದಲ SSLC ಬ್ಯಾಚು ಪರೀಕ್ಷೆಗೆ ಕೂತಿದೆ | ನಿರ್ಭಯವಾಗಿ ಪರೀಕ್ಷೆ ಬರೆಯಿರಿ, ಅಭಿನಂದನೆಗಳು !!

ಯಾವುದೇ ಪರೀಕ್ಷೆಗಳಿಲ್ಲದೇ ತೇರ್ಗಡೆ ಹೊಂದಿದ ಎಸ್ ಎಸ್ ಎಲ್ ಸಿ ಯ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು.

 


ರಾಜ್ಯಕ್ಕೇ ಅಂಟಿದ ಮಹಾಮಾರಿ ಕೊರೋನಾ ದಿಂದಾಗಿ ಈ ಮೊದಲೇ ನಡೆಯಬೇಕಾಗಿದ್ದ ಪರೀಕ್ಷೆಗಳು, ಕಾರಣಾಂತರಗಳಿಂದ ಮುಂದೂಡಲಾಯಿತಾದರೂ ಸರ್ಕಾರ ಎಸ್ ಎಸ್ ಎಲ್ ಸಿ ಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಎಂದು ಘೋಷಣೆ ಮಾಡಿತ್ತು. ಆದರೆ ಕೆಲವೊಂದು ಗ್ರೇಡ್ ಕೊಡುವ ವಿಚಾರದಲ್ಲಿ ಅನುಕಂಪ ಮೂಡಬಾರದೆಂಬ ವಿಚಾರಕ್ಕೆ ಅನುಗುಣವಾಗಿ ಇಂದು ಪರೀಕ್ಷೆ ನಡೆಸಲಾಗುತ್ತಿದೆಯಾದರೂ ಯಾರನ್ನೂ ಫೇಲ್ ಮಾಡಲಾಗುವುದಿಲ್ಲ ಎಂಬ ಖುಷಿ ಪರೀಕ್ಷಾರ್ಥಿಗಳಿಗಿದೆ. ಇಂದು ರಾಜ್ಯದ 8.76 ಲಕ್ಷ ವಿದ್ಯಾರ್ಥಿಗಳು ಮೊದಲ ಪರೀಕ್ಷೆ ಬರೆಯಲಿದ್ದು ಬೆಳಿಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದೆ.

ತದನಂತರ ಜುಲೈ 21ರಂದು ಭಾಷಾ ಪರೀಕ್ಷೆ ನಡೆಯಲಿದ್ದು ಕೊರೋನಾ ಮಾರ್ಗಸೂಚಿಯನ್ನು ಪಾಲಿಸಲು ಈಗಾಗಲೇ ಸೂಚಿಸಲಾಗಿದ್ದು ಅದರಂತೆಯೇ ಎಲ್ಲವೂ ಕಟ್ಟುನಿಟ್ಟಾಗಿ ನಡೆಯಲಿದೆ.

ಅದಲ್ಲದೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಕೊಡುಗೆ ಕೂಡಾ ನೀಡಲಾಗಿದ್ದು,
ಕೇರಳ ಸೇರಿದಂತೆ ಗಡಿ ಪ್ರದೇಶಗಳ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.ಕೊರೋನಾ ಕಾರಣದಿಂದಾಗಿ ವಸತಿ ಶಾಲೆಗಳಲ್ಲಿ ಇದ್ದ ವಿದ್ಯಾರ್ಥಿಗಳು ಊರಿಗೆ ತೆರಳಿರುವ ಕಾರಣ ಅವರ ಊರಿನಲ್ಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಅವಕಾಶವನ್ನೂ ಸರ್ಕಾರ ಕಲ್ಪಿಸಿದೆ.
ಸದ್ಯ ಈ ಪರೀಕ್ಷೆಯು ಗ್ರೇಡ್ ನೀಡಲು ಮಾತ್ರ ಎಂಬ ಸುದ್ದಿ ಕೇಳಿಬರುತ್ತಿದ್ದೂ,ವಿದ್ಯಾರ್ಥಿಗಳು ತಾನು ಓದಿಲ್ಲ ಎಂಬ ಕಾರಣದಿಂದ ಯಾವುದೇ ಭಯಪಡದೇ, ನಿರ್ಭಿತವಾಗಿ ಪರೀಕ್ಷೆ ಕೇಂದ್ರಗಳಿಗೆ ತೆರಳಿ ಜಯಶಾಲಿಗಳಾಗಿ. ವಿಶ್ವದ ಇತಿಹಾಸದಲ್ಲೇ ಮೊದಲು, ಪರೀಕ್ಷೆ ಬರೆಯುವ ಮೊದಲೇ ಪಾಸ್ ಆಗುತ್ತಿರುವ ಪ್ರಥಮ ಬ್ಯಾಚ್ ಇದಾಗಿದ್ದು, ಎಲ್ಲಾ ಪರೀಕ್ಷಾರ್ಥಿಗಳಿಗೂ ಅಭಿನಂದನೆಗಳ ಜೊತೆಗೆ ಆಲ್ ದಿ ಬೆಸ್ಟ್.

Leave A Reply

Your email address will not be published.