ಆಡಿಯೋ ವೈರಲ್ ನಳಿನ್ ಬಗ್ಗೆ ,ಆಡಿಯೋ ಬಗ್ಗೆ ಈಶ್ವರಪ್ಪ ಹೇಳಿದ್ದೇನು…?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ತುಳುವಿನಲ್ಲಿರುವ ಆಡಿಯೋ ವೈರಲ್ ಮತ್ತು ಅದರಲ್ಲಿ ಉಲ್ಲೇಖಿತ ಶೆಟ್ಟರ್, ಈಶ್ವರಪ್ಪ ಸೈಡ್ ಲೈನ್ ಬಗ್ಗೆ ಶಿವಮೊಗ್ಗದಲ್ಲಿ ಈಶ್ವರಪ್ಪ ಪ್ರತಿಕ್ರಿಯಿಸಿದ ಅವರು.
ಯಾರು ಆಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿದೆ. ನಳಿನ್ ಕುಮಾರ್ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಯಾರೋ ಹುಚ್ಚರು ಆಡಿಯೋವನ್ನು ಸೃಷ್ಟಿ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಆಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ಅಗತ್ಯವಿಲ್ಲ. ಬದಲಾಗಿ ಆಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.
ಹಿಂದೂ ಸಮಾಜ ಹಾಗೂ ದೇಶಕ್ಕಾಗಿ ಉಸಿರಿರುವವರೆಗೆ ಹೋರಾಡುತ್ತೇನೆ. ಸಚಿವ ಸ್ಥಾನ ಹೋದರೆ ಒಂದು ಗೂಟ ಹೋದಂತೆ. ಯಾರೂ ಸಹ ಅಧಿಕಾರಕ್ಕೆ ಗೂಟ ಹೊಡೆದು ಕುಳಿತಿಲ್ಲ. ನನ್ನನ್ನು ಯಾರೂ ಏನೂ ಮಾಡಲು ಆಗದು, ನಾನು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವನು ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ನಡೆದರೂ ತಲೆ ಕೆಡಿಸಿಕೊಳ್ಳಲ್ಲಾ, ನನಗೆ ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ನಂಬಿಕೆಯಿದೆ. ಆಡಿಯೋ ಬಗ್ಗೆ ಅಧ್ಯಕ್ಷರೇ ತನಿಖೆ ನಡೆಸಲಿ ಎಂದಿದ್ದಾರೆ.