Hyderabad: ನಟ ಅಲ್ಲು ಅರ್ಜುನ್‌ಗೆ ಜಾಮೀನು ನೀಡಿ ಕೋರ್ಟ್‌ ಆದೇಶ

Hyderabad: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲು ಅರ್ಜುನ್‌ ಜಾಮೀನು ಅರ್ಜಿ ಇಂದು ವಿಚಾರಣೆ ನಡೆದಿದ್ದು, ನಾಂಪಲ್ಲಿ ಕೋರ್ಟ್‌ ನಟನಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌ ದೊರಕಿದಂತಾಗಿದೆ.

ರೆಗ್ಯುಲರ್‌ ಬೇಲ್‌ಗಾಗಿ ಅಲ್ಲು ಅರ್ಜುನ್‌ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಇಂದು ಬೇಲ್‌ ಅರ್ಜಿಯ ತೀರ್ಪನ್ನು ನಾಂಪಲ್ಲಿ ಕೋರ್ಟ್‌ ಪ್ರಕಟ ಮಾಡಿದೆ.

ಪುಷ್ಪ 2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ಸಂದರ್ಭದಲ್ಲಿ ಅಲ್ಲು ಅರ್ಜುನ್‌ ತಮ್ಮ ಫ್ಯಾಮಿಲಿ ಜೊತೆ ಸಂಧ್ಯಾ ಥಿಯೇಟರ್‌ಗೆ ಬಂದಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಕಾಲ್ತುಳಿತ ಉಂಟಾಗಿ ರೇವತಿ (39) ಎಂಬ ಮಹಿಳೆ ಸಾವಿಗೀಡಾಗಿದ್ದು, ಆಕೆಯ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಈ ಕುರಿತು ನಟ, ಥಿಯೇಟರ್‌ ಮಾಲೀಕ, ಇಬ್ಬರು ವ್ಯವಸ್ಥಾಪಕರು ಸೇರಿ ಮೂವರನ್ನು ಪೊಲೀಸರು ಬಂಧನ ಮಾಡಿದ್ದರು.

ನಟ ಅಲ್ಲು ಅರ್ಜುನ್‌ಗೆ ನಾಂಪಲ್ಲಿ ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನಂತ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

Comments are closed.