ಸಂಪಾಜೆ ಕಾಡಾನೆ ದಾಳಿಯಿಂದ ತೆಂಗು, ಅಡಿಕೆ,ಬಾಳೆತೋಟ ನಾಶ
ಸಂಪಾಜೆ ಗ್ರಾಮದ ಪೆಲ್ತಡ್ಕ ಪದ್ಮನಾಭ ಹಾಗೂ ಶೇಷಪ್ಪ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿವೆ.
ಸ್ಥಳಕ್ಕೆ ಅರಣ್ಯ ಪಾಲಕ ಚಂದ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.. ಕೆ. ಹಮೀದ್, ಹನೀಪ್ ಎಸ್. ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲು ಸೂಚಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಸಂಪಾಜೆ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ ದಾಳಿ ಮಾಡುತ್ತಿದ್ದು ಕೂಡಲೇ ಕೃಷಿಕರ ರಕ್ಷಣೆ ಮಾಡಿ ಸೂಕ್ತ ಪರಿಹಾರ ಹಾಗೂ ಶಾಶ್ವತ ತಡೆಗೋಡೆ ವೆವಸ್ಥೆ ಮಾಡಬೇಕಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಜಿ. ಕೆ. ಹಮೀದ್ ಒತ್ತಾಯಿಸಿದ್ದಾರೆ.