ಉಪ್ಪಿನಂಗಡಿ ಕಾಲೇಜಿನಲ್ಲಿ ಸ್ಕಾಲರ್ಶಿಪ್ ಪರಿಶೀಲನೆಯಲ್ಲಿ ನಿರ್ಲಕ್ಷ್ಯ | ರೊಚ್ಚಿಗೆದ್ದ ಕ್ಯಾಂಪಸ್ ಫ್ರಂಟ್ ಇಂಡಿಯಾ ಉಪ್ಪಿನಂಗಡಿ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಇಲಾಖೆಗೆ ಮನವಿ
ಉಪ್ಪಿನಂಗಡಿ ಡಿಗ್ರಿ ಕಾಲೇಜಿನಲ್ಲಿ ಎನ್ಎಸ್ಪಿ ಸ್ಕಾಲರ್ಶಿಪ್ ಪರಿಶೀಲನೆಯಲ್ಲಿ ಕಾಲೇಜು ತೋರಿದ ನಿರ್ಲಕ್ಷ್ಯ ದಿಂದಾಗಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಕಳೆದುಕೊಂಡಿದ್ದು, ಕಾಲೇಜಿನ ಬೇಜವಾಬ್ದಾರಿ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಕಾಲೇಜಿನಲ್ಲಿ 180 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಎನ್ಎಸ್ಪಿ ಸ್ಕಾಲರ್ಶಿಪ್ ಹಾಕಿದ್ದು, ಯಾವುದೇ ಅರ್ಜಿ ಕಾಲೇಜಿನಲ್ಲಿ ವೆರಿಫಿಕೇಶನ್ ಆಗದೇ ಇರುವುದರಿಂದ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಕಳೆದುಕೊಂಡಿದ್ದಾರೆ. ಇದು ಕಾಲೇಜಿನ ಬೇಜವಾಬ್ದಾರಿಯಿಂದ ನಡೆದ ಘಟನೆಯಾಗಿದ್ದು, ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು, ಕ್ಯಾಂಪಸ್ ಫ್ರಂಟ್ ನಾಯಕರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡ ರಿಯಾಝ್ ಪುತ್ತೂರು, ಸಿರಾಜ್ ಮಂಗಳೂರು, ಉಪ್ಪಿನಂಗಡಿ ಏರಿಯಾಧ್ಯಕ್ಷ ರಿಝ್ವಾನ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .