ವಾಹನಗಳು ಚಲಿಸುತ್ತಿರುವಾಗಲೇ ರಸ್ತೆಗೆ ಅಡ್ಡ ಬಿದ್ದ ತೆಂಗಿನಮರ | ಕೂದಲೆಳೆ ಅಂತರದಲ್ಲಿ ದ್ವಿಚಕ್ರ ಸವಾರ ಪಾರು – ವೀಡಿಯೋ ವೈರಲ್

Share the Article

ಮಂಗಳೂರಿನ ಪದವಿನಂಗಡಿ ಬಳಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ತೆಂಗಿನ ಮರ ಉರುಳಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಬೈಕ್ ಚಾಲಕ ಬಚಾವಾದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.

https://youtube.com/shorts/V2aI99kPnpA?feature=share

ಮಂಗಳೂರು ಹೊರವಲಯದ ಪದವಿನಂಗಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಭಾರೀ ಗಾಳಿ ಮಳೆಗೆ ತೆಂಗಿನ ಮರ ಸ್ವಲ್ಪ ಸ್ವಲ್ಪವೇ ವಾಲುತ್ತಾ ಉರುಳಿ ಬಿದ್ದಿದೆ.

ಅದೃಷ್ಟವಶಾತ್ ವಾಹನ ದಟ್ಟಣೆ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಆದರೂ ಮರ ಬೀಳುವ ವೇಳೆ ರಸ್ತೆಯಲ್ಲಿ ಬಂದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆಯನ್ನು ಯಾರೋ ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ. “ಅಲೆ…ಅಲೇ ತಾರೆ ಬೂಂರ್ಡು”
ಎಂದು ವಿಡಿಯೋ ಮಾಡಿದವರು ಮಾತನಾಡುತ್ತಿರುವುದು ಕೂಡ ರೆಕಾರ್ಡ್ ಆಗಿದೆ.

Leave A Reply