ಮಂಗಳೂರು:ಉರ್ವ ಪೊಲೀಸ್ ಠಾಣೆಯಲ್ಲಿ ನಡೆಯಿತು ಪೊಲೀಸರ ಮೇಲೆಯೇ ಹಲ್ಲೆ…ಸಾಮಾಜಿಕ ಕಾರ್ಯಕರ್ತರ ಸೋಗಿನಲ್ಲಿ ಮಾತುಕತೆಗೆ ಬಂದಿದ್ದ ತಂಡಕ್ಕೆ ಇನ್ನು ಜೈಲೂಟ ಗ್ಯಾರಂಟಿ.

ಮಂಗಳೂರು. ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ಮಾತುಕತೆಗೆಂದು ಬಂದಿದ್ದ ಸಾಮಾಜಿಕ ಕಾರ್ಯಕರ್ತ ಸಹಿತ ಮೂವರು ಸೇರಿ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದ್ದು, ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ಸಹಿತ ಓರ್ವ ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದು ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:ಮಂಗಳೂರಿನ ವಸತಿ ಸಮುಚ್ಚಯವೊಂದರಲ್ಲಿ ನೀರಿನ ವ್ಯವಸ್ಥೆಯನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ವಿಚಾರಿಸಲು ತೆರಳಿದ್ದ ಬಾಲಕಿಯೋರ್ವಳ ಮೇಲೆ ಕಿರುಕುಳ ಹಾಗೂ ಹಲ್ಲೆ ನಡೆದಿದ್ದ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು.ಇದಾದ ಬಳಿಕ ಪ್ರಕರಣ ರಾಜಿಯಲ್ಲಿ ಮುಗಿದಿದ್ದು, ಈ ಸಂಬಂಧ ಠಾಣೆಯಲ್ಲಿ ದಾಖಲಾಗಿರುವ ಕೇಸನ್ನು ಇತ್ಯರ್ಥ ಮಾಡಲು ಸಾಮಾಜಿಕ ಕಾರ್ಯಕರ್ತ ಜಾನ್ ಸಿಕ್ವೆರ ಸಹಿತ ಇನ್ನಿಬ್ಬರು ಠಾಣೆಗೆ ಆಗಮಿಸಿದ್ದರು.ಈ ವೇಳೆ ಠಾಣೆಯಲ್ಲಿ ಪೊಲೀಸರೊಂದಿಗೆ ಮಾತನಾಡುವ ವಿಡಿಯೋ ತೆಗೆಯಲು ಓರ್ವ ಯತ್ನಿಸಿದ್ದು ಇದಕ್ಕೆ ಪೊಲೀಸರು ಸಮ್ಮತಿಸದೆ ವಿಡಿಯೋ ಮಾಡಬಾರದೆಂಬ ಸೂಚನೆ ನೀಡಿದರು. ಆದರೆ ಈ ಸೂಚನೆಯನ್ನು ತಿರಸ್ಕರಿಸಿದ ಸಿಕ್ವೆರ ಹಾಗೂ ತಂಡ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ಮಹಿಳಾ ಪೇದೆ ಸಹಿತ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ.


ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ನಾರಾಯಣ ಹಾಗೂ ಪೇದೆ ಪೂಜಾ ಹಿರೇಮಠ್ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಕಮಿಷನರ್ ಶಶಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಗಾಯಳುಗಳ ಕ್ಷೇಮ ವಿಚಾರಿಸಿದ್ದಾರೆ.
ಸದ್ಯ ಹಲ್ಲೆಗೈದ ಸಾಮಾಜಿಕ ಕಾರ್ಯಕರ್ತನ ಸಹಿತ ಮತ್ತಿಬ್ಬರ ಬಂಧನವಾಗಿದ್ದು, ಜೈಲೂಟ ಖಚಿತವಾಗಿದೆ.

Leave A Reply

Your email address will not be published.