ಕಟೀಲು ದುರ್ಗೆಯ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿ ತಪ್ಪು ಅರಿತು ಅಡ್ಡ ಬಿದ್ದ | ಪ್ರಕರಣ ಮಾತುಕತೆ ಮೂಲಕ ಪರಿಹಾರ
ಕಟೀಲು ದುರ್ಗೆಯ ಬಗ್ಗೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ ವ್ಯಕ್ತಿ ಶ್ರೀ ಕ್ಷೇತ್ರಕ್ಕೆ ಬಂದು ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.
ಕೆಲದಿನಗಳ ಹಿಂದೆ ಬಜ್ಪೆ ನಿವಾಸಿ, ಮುಂಬೈನಲ್ಲಿ ಉದ್ಯೋಗದಲ್ಲಿರುವ 80 ವರ್ಷ ಪ್ರಾಯದ ಅಲ್ಬರ್ಟ್ ಫರ್ನಾಂಡಿಸ್ ಎಂಬುವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅಶ್ಲೀಲ ಪದ ಬಳಸಿ ದಿನೇಶ್ ಎಂಬುವರಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದು, ಈ ಬಗ್ಗೆ ದಿನೇಶ್ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಂತರ ಅಲ್ಬರ್ಟ್ ಅವರಿಗೆ ತಮ್ಮ ತಪ್ಪಿನ ಅರಿವಾಗಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಬಂದು
ಕ್ಷೇತ್ರದ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣರ ಉಪಸ್ಥಿತಿಯಲ್ಲಿ ದೇವಿ ಸನ್ನಿಧಿಯಲ್ಲಿ ತಾನು ದೇವಿಯ ಬಗ್ಗೆ ಅಶ್ಲೀಲ ಸಂದೇಶ ಕಳುಹಿಸಿದ್ದು, ತಾನು ಮಾಡಿದ ತಪ್ಪೆಂದು ಹೇಳಿ ಕ್ಷಮೆ ಯಾಚಿಸಿದ್ದಾರೆ.
ಬಳಿಕ ಬಜ್ಪೆ ಪೊಲೀಸ್ ಠಾಣೆಗೆ ಬಂದು, ತನ್ನ ತಪ್ಪಿನ ಅರಿವಾಗಿದ್ದು, ಪಶ್ಚಾತಾಪ ಪಟ್ಟಿದ್ದೇನೆ. ಮಾನಸಿಕವಾಗಿ ನೊಂದುಕೊಂಡಿರುವ ತನ್ನನ್ನು ಬಂಧಿಸಿದರೆ
ಬದುಕುಳಿಯುವುದಿಲ್ಲ ಎಂದು ಅಂಗಲಾಚಿದ್ದಾರೆ.
ಅಲ್ಪ ಅವರ ವಯಸ್ಸನ್ನು ಗಮನಿಸಿ, ದೂರು ನೀಡಿದವರು ದೂರು ಹಿಂಪಡೆದು ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಿಂದು ಸಂಘಟನೆ ಪ್ರಮುಖರು ಹಾಗೂ ಬಿಜೆಪಿ ನಾಯಕರು ಉಪಸ್ಥಿತರಿದ್ದರು.