ಶ್ರೀಮಂತ ಚಿನ್ನದ ವ್ಯಾಪಾರಿಯ ಮಗಳ ಲವ್ ಜಿಹಾದ್ ಮದುವೆ ರದ್ದು | ಮದುವೆ ಇನ್ವಿಟೇಶನ್ ವೈರಲ್ ಹಿನ್ನೆಲೆಯಲ್ಲಿ ಉಗ್ರ ಪ್ರತಿಭಟನೆಗೆ ಇಳಿದ ಸಂಘಟನೆಗಳಿಗೆ ಸಿಕ್ಕಿದೆ ಜಯ !
ಅಂತರ್ಧರ್ಮೀಯ ವಿವಾಹವನ್ನು ಖಂಡಿಸಿ ಹಿಂದೂ ಸಮುದಾಯದ ಉಗ್ರ ಪ್ರತಿಭಟನೆಗೆ ಹೆದರಿದ ಹಿನ್ನೆಲೆಯಲ್ಲಿ ಆ ಮದುವೆ ರದ್ದಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ವರದಿಯಾಗಿದ್ದು, ಮುಸ್ಲಿಂ ವ್ಯಕ್ತಿಯೊಂದಿಗೆ 28 ವರ್ಷದ ಯುವತಿಯ ವಿವಾಹವನ್ನು ರದ್ದುಗೊಳಿಸಲಾಗಿದೆ. ಆ ಸಮುದಾಯದ ಸಂಘಟನೆಗೆ ವಧುವಿನ ತಂದೆ, ಚಿನ್ನಾಭರಣ ವ್ಯಾಪಾರಿ, ಪತ್ರ ಬರೆದಿದ್ದು “ಜು.18 ರಂದು ನಡೆಸಲು ಉದ್ದೇಶಿಸಿದ್ದ ವಿವಾಹವನ್ನು ಈಗಿನ ಪರಿಸ್ಥಿತಿಯಲ್ಲಿ ರದ್ದುಪಡಿಸಲಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ್ದಾರೆ.
ಆಕೆ 28 ವರ್ಷದ ಶ್ರೀಮಂತ ಮನೆತನದ ಯುವತಿ ರಸಿಕಾ. ಆಕೆಗೆ ಪ್ರೈವೇಟ್ ಟ್ಯೂಷನ್ ಮಾಸ್ಟರ್ ಆಗಿ ಆ ಮುಸ್ಲಿಂ ವ್ಯಕ್ತಿಯನ್ನು ನೇಮಿಸಲಾಗಿತ್ತು. ಆತ ಆಸಿಫ್. ಟ್ಯೂಷನ್ ಗೆ ಬಂದು ಪಾಠ ಹೇಳಿ ಟೊಪ್ಪಿ ಹಾಕಿಕೊಂಡು ಹೋಗುವುದನ್ನು ಬಿಟ್ಟು ಆ ಹುಡುಗಿಗೆ ಕಣ್ಣು ಹಾಕಿ ಮನೆಯವರಿಗೆ ಟೊಪ್ಪಿ ಹಾಕಿದ್ದ. ಎಲ್ಲಾ ಲವ್ ಜಿಹಾದ್ ವಂಚಕರ ಹಾಗೆ ಈತ ಕೂಡಾ ‘ಇಸ್ಲಾಂ ಧರ್ಮ ಮಾತ್ರವೇ ಶ್ರೇಷ್ಠ ‘ ಎಂಬ ಪುಂಗಿ ಬಿಟ್ಟಿದ್ದ. ಮೇಷ್ಟ್ರು ಹೇಳಿದ್ದೆಲ್ಲವು ಸತ್ಯ, ಸತ್ಯವನ್ನೇ ಮೇಷ್ಟ್ರು ಹೇಳುತ್ತಾರೆ ಎಂಬ ಭ್ರಮೆಯಲ್ಲಿ ಹುಡುಗಿ ತಲೆ ತಿರುಗಿಸಿ ಮುಂದುವರಿದಿದ್ದಳು. ಹಾಗೆ ಹುಡುಗಿಯನ್ನು ಎಬ್ಬಿಸಿಕೊಂಡು ಹೋದ ಆತ ಆಕೆಯನ್ನೂ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದಾನೆ. ಅಲ್ಲದೆ ಕುಟುಂಬಕ್ಕೋಸ್ಕರ ಅವರು ಮದುವೆಯಾಗಲು ಲಗ್ನ ಪತ್ರಿಕೆ ಹಂಚಿದ್ದಾರೆ.
ಅಂತರ್ಧರ್ಮೀಯ ವಿವಾಹದ ಲಗ್ನಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲೇ ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಹಿಂದೂ ಸಂಘಟನೆಗಳಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ. ಇದೀಗ ಆ ಯುವತಿಯ ತಂದೆ ಮದುವೆಯನ್ನು ರದ್ದುಪಡಿಸಿದ್ದಾಗಿ ತಮ್ಮ ಸಮುದಾಯದ ಹಿರಿಯರಿಗೆ ಮತ್ತು ಹಿಂದೂ ಸಮುದಾಯದ ನಾಯಕರುಗಳಿಗೆ ಪತ್ರ ಬರೆದಿದ್ದಾರೆ.
ಹಿಂದೂ ಸಂಪ್ರದಾಯದ ಪ್ರಕಾರ ಯುವತಿಗೆ ಜು.18 ರಂದು ವಿವಾಹವಾಗಬೇಕಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರಿಬ್ಬರು ಒಟ್ಟಿಗೆ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿರುವ ಯುವತಿಯ ತಂದೆ, ತಮ್ಮ ಮಗಳು ಸದ್ಯಕ್ಕೆ ತಮ್ಮೊಂದಿಗೇ ಇದ್ದಾಳೆ ಎಂದೂ ಸ್ಪಷ್ಟನೆ ನೀಡಿದ್ದಾರೆ.
ಇದೀಗ ಮದುವೆಯನ್ನು ರದ್ದುಪಡಿಸಿದ ತಂದೆಯ ನಡೆಗೆ ಹಲವಾರು ಸಂಘಟನೆಗಳು ಅಭಿನಂದಿಸಿ ವಾಟ್ಸಪ್ ಮತ್ತಿತರ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಮಹಾರಾಷ್ಟ್ರದ ನಾಸಿಕ್ ನ ಸುವರ್ಣಕಾರ್ಸ್, ಹಿಂದೂ ಏಕತಾ ಮಂಚ್, ವಿಶ್ವಹಿಂದೂ ಪರಿಷತ್-ಬಜರಂಗದಳ ಮತ್ತು ಓಬಿಸಿ ಆಂದೋಲನ ಸಮಿತಿಯ ಪ್ರಯತ್ನಕ್ಕೆ ಓರ್ವ ಹುಡುಗಿಯ ಜೀವರಕ್ಷಣೆ ಆಗಿದೆ. ತಪ್ಪಿದ್ದಲ್ಲಿ, ಇನ್ನೆರಡು ವರ್ಷಗಳಲ್ಲಿ ಆಕೆ ಒಂದೋ ಜೀವ ಕಳೆದು ಕೊಂಡಿರುತ್ತಿದ್ದಳು; ತಪ್ಪಿದಲ್ಲಿ ಇವತ್ತಿನ ಶ್ರೀಮಂತ ಹುಡುಗಿ ಯಾವುದೋ ಬಿಕಾರಿ ಬೀದಿಯ ಮೂಲೆಯಲ್ಲಿ ಮೀನು ಮಾರಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು.