ಕೋರೋನಾ ಲಸಿಕೆ ಹಾಕಿಕೊಂಡ ದಿನಗಳಲ್ಲಿ ಸೆಕ್ಸ್ ಮಾಡ್ಬೋದಾ ಬೇಡವೇ | ತಜ್ಞರು ಏನಂತಾರೆ ಗೊತ್ತಾ ?!

ಈಗ ಎಲ್ಲರೂ, ಎಲ್ಲಕಡೆಯೂ ಕೋವಿಡ್‌ಗೆ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ದಿನ, ಹಾಕಿಸಿಕೊಂಡ ದಿನ ಅಥವಾ ಹಾಕಿಸಿಕೊಂಡ ಕೆಲವು ದಿನಗಳಲ್ಲಿ ‘ ಅದು ‘ ಮಾಡಬಹುದೇ ಎಂಬುದು ಎಲ್ಲರಲ್ಲಿರುವ ಸಹಜ ಕುತೂಹಲ. ಆ ಕುತೂಹಲ ಸದ್ಯದ ಮಟ್ಟಿಗೆ ತಣ್ಣಗಾಗಿಲ್ಲ ಕಾರಣ, ಹೀಗೆ ಮಾಡಿ ಹಾಗೆ ಮಾಡಬೇಡಿ ಎಂದು ಹೇಳುವ ಯಾರು ಹತ್ತಿರದಲ್ಲಿ ಕಾಣಿಸುತ್ತಿರಲಿಲ್ಲ. ಆದ್ರೆ ಈಗ ಕೆಲವೊಂದು ತಜ್ಞರು ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಕ್ಲಿನಿಕಲ್ ಟ್ರೈಲ್ ನಡೆಯುತ್ತಿರುವಾಗ :

ಕೋವಿಡ್‌ಗೆ ಸಂಬಂಧಿಸಿದ ವ್ಯಾಕ್ಸಿನ್‌ಗಳ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುವಾಗ, ವ್ಯಾಕ್ಸಿನ್‌ ಹಾಕಿಸಿಕೊಳ್ಳುವ ಪುರುಷರಿಗೂ ಮಹಿಳೆಯರಿಗೂ ಕೆಲವು ಸೂಚನೆಗಳನ್ನು ನೀಡಲಾಗಿದೆ.

ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಮೂರು ತಿಂಗಳವರೆಗೆ ಸಂಭೋಗ ನಡೆಸುವಾಗ ಕಾಂಡೋಮ್‌ ಉಪಯೋಗಿಸಬೇಕು.
ಅಷ್ಟು ಕಾಲ ಪ್ರಜನನ ಪ್ರಕ್ರಿಯೆಯನ್ನು ಅಂದರೆ ಮಗುವಿಗಾಗಿ ಸೆಕ್ಸ್ ಮಾಡುವುದನ್ನು ಮುಂದೂಡಬೇಕು.
ವ್ಯಾಕ್ಸಿನ್ ಮೊದಲ ಡೋಸ್‌ನಿಂದ ಹಿಡಿದು, ಎರಡನೇ ಡೋಸ್‌ನ ಬಳಿಕ ಮೂರು ತಿಂಗಳವರೆಗೆ ವೀರ್ಯ ದಾನ ಮಾಡಬಾರದು ಎನ್ನುವುದು ತಜ್ಞರ ಸಲಹೆ.

ವ್ಯಾಕ್ಸಿನ್‌ ಹಾಕಿಸಿಕೊಂಡಾಗ:

ವ್ಯಾಕ್ಸಿನ್ ಹಾಕಿಸಿಕೊಂಡ ದಿನ, ಹಾಗೂ ಮತ್ತಿನ ಒಂದೆರಡು ದಿನಗಳ ಸಂಗತಿ. ಆ ದಿನಗಳಲ್ಲಿ ವಾಸ್ತವವಾಗಿಯೂ ನಿಮಗೆ ಸಂಭೋಗ ನಡೆಸಲು ಸಾಧ್ಯವಾಗದು. ಯಾಕೆಂದರೆ ಕೆಲವರಿಗೆ ಆ ಸಮಯದಲ್ಲಿ ಮೈಕೈ ನೋವು, ಸಣ್ಣ ಮಟ್ಟಿಗೆ ಜ್ವರವೂ ಬರುತ್ತಿರುತ್ತದೆ.

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡನಂತರ ದೇಹದ ಬಿಳಿ ರಕ್ತ ಕಣಗಳು ಚುರುಕಾಗಿ ವ್ಯಾಕ್ಸಿನ್ ಒಳಬಂದ ಭಾಗಕ್ಕೆ ಧಾವಿಸಿ ಬಂದು ಅಲ್ಲಿರುವ ಪರಕೀಯ ಕಣಗಳ ಮೇಲೆ ಸಮರ ಹೂಡುತ್ತವೆ. ಇದರಿಂದಾಗಿ ನಿಮ್ಮ ದೇಹದ ಪ್ರತಿರೋಧ ಶಕ್ತಿಯೆಲ್ಲ ಅತ್ತ ಕಡೆಯೇ ಕೇಂದ್ರೀಕರಿಸಿ, ದೇಹದ ಎನರ್ಜಿಯೆಲ್ಲ ಆ ಕಡೆಗೇ ಇರುತ್ತದೆ. ಇದರಿಂದಾಗಿ, ಸೆಕ್ಸ್‌ನಲ್ಲಿ ಭಾಗವಹಿಸಲು ಬೇಕಾದ ಉತ್ಸಾಹ, ಉದ್ರೇಕ ಮೂಡದು. ಇದು ಒಂದು ವಾರದ ಮಟ್ಟಿಗೆ ಅಷ್ಟೇ. ಆ ನಂತರ ಮೂಡು ಮರುಕಳಿಸಬಹುದು. ಆದರೆ ಅದು ಮಾಡದೆ ಇದ್ದರೆ ಒಳಿತು. ಮಾಡಲೇ ಬೇಕೆಂದಿದ್ದರೆ ಪುರುಷನ ದೇಹದ ವೀರ್ಯ ಮಹಿಳೆಯ ದೇಹಕ್ಕೆ ಸೇರದಂತೆ ಕಾಂಡೋಮ್ ಹಾಕಿಕೊಳ್ಳಬೇಕು. ಇಲ್ಲದೆ ಹೋದರೆ ಪುರುಷನ ದೇಹದಲ್ಲಿ ಸೃಷ್ಟಿಯಾಗಿರುವ ಪ್ರತಿರೋಧದ ಕಣಗಳು ಮಹಿಳೆಯ ದೇಹ ಸೇರಬಹುದು. ವೈಸ್ ವರ್ಸಾ ಆಗಿ ಮಹಿಳೆಯ ದೇಹದಿಂದಲೂ ವೈರಸ್ ಕಣಗಳು ಪುರುಷನ ದೇಹಕ್ಕೆ ಚಲಿಸಬಹುದು. ಇದರಿಂದ ಮುಂದೆ ಹುಟ್ಟುವ ಮಗುವಿನಲ್ಲಿ ಯಾವುದಾದರೂ ನ್ಯೂನತೆಗಳು ಸೃಷ್ಟಿಯಾಗಲೂಬಹುದು ಎನ್ನುತ್ತಾರೆ ತಜ್ಞರು.
ಹೀಗಾಗಿ ಯಾವುದೇ ಸಂಭಾವ್ಯ ಅಪಾಯ ತಪ್ಪಿಸಲು ಕಾಂಡೊಮ್ ಧರಿಸಿಯೇ ಸಂಭೋಗ ನಡೆಸಲು ತಜ್ಞರು ಸಲಹೆ ನೀಡಿದ್ದಾರೆ. ಅಲ್ಲದೆ, ಕನಿಷ್ಟ 3 ತಿಂಗಳ ಕಾಲ, ಎಂದರೆ ಮೂರು ತಿಂಗಳು ಮಗು ಮಾಡುವ, ಸ್ತ್ರೀ ಗರ್ಭ ಧರಿಸದಂತೆ ನೋಡಿಕೊಳ್ಳುವುದು ಬಹು ಮುಖ್ಯ.

ಹಾಗಿದ್ದರೆ, ಪ್ರಜನನನ ಉದ್ದೇಶ ಇಲ್ಲದೆ ಇದ್ದಾಗ, ಪುರುಷ ಮತ್ತು ಮಹಿಳೆ ಇಬ್ಬರೂ ಸಿಂಗಲ್ ಡೋಸ್ ಅಥವಾ ಡಬಲ್ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ, ಆಗ ಮುಕ್ತವಾಗಿ ಸಂಭೋಗ ನಡೆಸಬಹುದೇ? ವ್ಯಾಕ್ಸಿನ್ ಹಾಕಿಸಿಕೊಂಡ ಒಂದೆರಡು ದಿನಗಳಲ್ಲಿ ಮೈಯಲ್ಲಿ ಬಿಳಿರಕ್ತಕಣಗಳ ತೀವ್ರ ಚಟುವಟಿಕೆ ಕಡಿಮೆ ಆಗುವವರೆಗೆ ಸೆಕ್ಸ್ ನಡೆಸಬಾರದು. ಆ ಬಳಿಕ ಕಾಂಡೋಮ್ ಬಳಸಿ ನಡೆಸಬಹುದು. ಅಥವಾ ಮಹಿಳೆ ಕಾಪರ್ ಟಿಯಂಥ ಗರ್ಭಧಾರಣೆ ತಡೆ ಕ್ರಮ ಬಳಸುತ್ತಿದ್ದರೆ, ಆಗಲೂ ಸುರಕ್ಷಿತ ಸೆಕ್ಸ್ ನಡೆಸಲು ಯಾವುದೇ ತಡೆಯಿಲ್ಲ.

ಇದರ ಒಟ್ಟಾರೆ ಅರ್ಥ ಇಷ್ಟೆ- ವ್ಯಾಕ್ಸಿನ್ ತೆಗೆದುಕೊಂಡ ಮೂರು ತಿಂಗಳ ಕಾಲ, ಮಗು ಬೇಕೆಂಬ ಚಿಂತನೆಯಿಂದ ಸೆಕ್ಸ್ ನಡೆಸಬೇಡಿ. ಕಾಂಟ್ರಸೆಪ್ಟಿವ್ ಬಳಸಿ  ಸಂಭೋಗಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಸರಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಹಾಗೆಯೇ ಸರಕಾರ ನೇಮಿಸಿರುವ ತಜ್ಞರ ಸಮಿತಿಯಾಗಲೀ, ಅಖಿಲ ಭಾರತ ವೈದ್ಯಕೀಯ ಸಂಸ್ಥೆಯಾಗಲೀ, ಅಂತಾರಾಷ್ಟ್ರೀಯ ವೈದ್ಯಕೀಯ ಸಂಘಟನೆಗಳಾಗಲೀ, ವಿಶ್ವ ಆರೋಗ್ಯ ಸಂಸ್ಥೆಯಾಗಲೀ ಏನೂ ಹೇಳಿಲ್ಲ. ಮೇಲಿನದು ತಜ್ಞರ ಮಾತು.

ಇದೀಗ ಮಾಸ್ಕೋದಲ್ಲಿ ಕೋವಿಡ್ ವಿರುದ್ಧ ಲಸಿಕೆ ಪಡೆದ ನಂತರ ಕನಿಷ್ಠ ಮೂರು ದಿನಗಳವರೆಗೆ ಲೈಂಗಿಕ ಕ್ರಿಯೆಯಿಂದ ದೂರವಿರಲು ರಷ್ಯಾ ಜನರಿಗೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ.

ರಷ್ಯಾದ ಸೆರಾಟೋವ್ ಪ್ರದೇಶದ ಉಪ ಆರೋಗ್ಯ ಸಚಿವ ಡಾ.ಡೆನಿಸ್ ಗ್ರೇಫರ್, ಲಸಿಕೆ ಪಡೆದ ನಂತರ ದೈಹಿಕ ಒತ್ತಡದಿಂದ ದೂರವಿರಬೇಕು. ಹೀಗಾಗಿ ಲೈಂಗಿಕತೆ ಸೇರಿದಂತೆ ದೈಹಿಕ ಒತ್ತಡಕ್ಕೆ ಸಂಬಂಧಿಸಿದ ಕ್ರಿಯೆಗಳಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.

ಲೈಂಗಿಕತೆಯು ತುಂಬಾ ಶಕ್ತಿಯುತವಾದ ಚಟುವಟಿಕೆಯಾಗಿದೆ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ ಎಂಬುದನ್ನು ನಾನು ನಂಬುತ್ತೇನೆ. ಆದ್ದರಿಂದ ಲಸಿಕೆ ಪಡೆದ ಜನರು ಲೈಂಗಿಕ ಕ್ರಿಯೆ ಸೇರಿದಂತೆ ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಸುತ್ತೇನೆ ಎಂದು ಡಾ.ಗ್ರೇಫರ್ ತಿಳಿಸಿದ್ದಾರೆ.

Leave A Reply

Your email address will not be published.