ಬ್ರಾ ಬಿಚ್ಚಿ ಬರಿದೆದೆಯಲ್ಲಿ ಸೈಕಲ್ ಹೊಡೆದ ಮಹಿಳೆಯರು | ಅವರ ಬೇಡಿಕೆ ಕೇಳಿದ್ರೆ ನೀವು ತಕ್ಷಣ ಹೇಳ್ತೀರ ” ಹೀಗೂ ಉಂಟೇ ?! “

ಬರ್ಲಿನ್ ನಲ್ಲಿ ಒಂದು ವಿಚಿತ್ರ ಪ್ರತಿಭಟನೆ ನಡೆದಿದೆ. ನಮ್ಮಲ್ಲಿ ಅದು ವಿಚಿತ್ರ. ಪಾಶ್ಚಿಮಾತ್ಯ ದೇಶಗಳಲ್ಲಿ ಅದು ಸಾಮಾನ್ಯ ಸಂಗತಿ.

ಜರ್ಮನ್ ವಾಸಿಯಾಗಿರುವ ಫ್ರೆಂಚ್ ಮಹಿಳೆಯೊಬ್ಬಳು ಅಲ್ಲಿನ ಪಾರ್ಕೊಂದರಲ್ಲಿ ಟಾಪ್ ಬಿಚ್ಚಿ ಬ್ರಾ ಕಳಚಿಟ್ಟು ತೆರೆದೆದೆಯಲ್ಲಿ ಸೂರ್ಯನ ಶಾಖ ಹೀರುತ್ತಿದ್ದಳು. ಆಗ ಅಲ್ಲಿನ ಸಿಬ್ಬಂದಿ ಬಂದು, ಇಲ್ಲಿ ನಗ್ನತೆಗೆ ಅವಕಾಶ ಇಲ್ಲ, ಬಟ್ಟೆ ಹಾಕ್ಕೊಳ್ಳಿ ಅಂದಿದ್ದಾರೆ. ಆದರೆ ಬಟ್ಟೆ ಹಾಕಿಕೊಳ್ಳಲು ಆ ಬರಿದೆದೆಯ ಬೆಡಗಿ ಒಪ್ಪಿಲ್ಲ. ಅಷ್ಟಕ್ಕೇ ವಾಗ್ವಾದ ಹತ್ತಿಕೊಂಡಿದೆ. ಮೊದಲಿಗೆ ಅಲ್ಲಿನ ಲೋಕಲ್ ಮಹಿಳಾ ಮಣಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಕೊನೆ ಕೊನೆಗೆ ಅದು ರಾಷ್ಟ್ರವ್ಯಾಪಿ ಚಳುವಳಿಯಾಗಿ ಮುಂದುವರೆದಿದೆ.

‘ ಒಂದು ನಿಪ್ಪಲ್ ಫ್ರೀ ಇಲ್ಲ ಅಂದ್ರೆ ಯಾವುದೇ ನಿಪ್ಪಲ್ ಫ್ರೀ ಅಲ್ಲ ‘ ಅನ್ನುವ ಬ್ಯಾನರ್ ನ ಅಡಿಯಲ್ಲಿ ಎಲ್ಲರೂ ಪ್ರತಿಭಟನೆಗೆ ಇಳಿದಿದ್ದಾರೆ. ‘ ಎಲ್ಲೆಲ್ಲಿ ಪುರುಷರು ಎದೆ ತೆರೆದು ಓಡಾಡಬಹುದೋ, ಅಲ್ಲೆಲ್ಲ ನಾವೂ ಓಡಾಡುತ್ತೇವೆ. ಪುರುಷರಿಗೂ ಎರಡು ಮೊಲೆ ಇವೆ. ನಮಗೂ ಇದೆ. ಮತ್ಯಾಕೆ ನಮಗೆ ಪ್ರತ್ಯೇಕ ರೂಲ್ಸ್ ?!’ ಇದು ಅಲ್ಲಿನ ಸ್ತ್ರೀವಾದಿ ಹೋರಾಟಗಾರರ ಪ್ರಶ್ನೆ.

‘ಈಕ್ವಲ್ ಬ್ರೆಸ್ಟ್ಸ್ ಫಾರ್ ಅಲ್ ‘ ಎಲ್ಲರಿಗೂ ಸಮಾನ ಸ್ತನ ಎಂಬ ಘೋಷವಾಕ್ಯದ ಅಡಿಯಲ್ಲಿ ರಾಷ್ಟ್ರವ್ಯಾಪಿ ಆಂದೋಲನ ಸ್ಟಾರ್ಟ್ ಆಗಿದೆ. ಸ್ತ್ರೀಯರ ಸ್ತನಗಳನ್ನು ವಿಶೇಷವಾಗಿ ಪರಿಗಣಿಸಬೇಡಿ, ‘ ನಾರ್ಮಲೈಸಿಂಗ್ ಬ್ರೆಸ್ಟ್ ‘ ಎಂಬುದಷ್ಟೇ ನಮ್ಮ ಆಗ್ರಹ. ಸೆಕ್ಸ್ಯುವಲೈಸಿಂಗ್ ದ ಬ್ರೆಸ್ಟ್ ಬೇಡ ಎನ್ನುವುದು ನಮ್ಮ ಕೂಗು. ನಮ್ಮದು ಕೂಡ ಪುರುಷರ ಸ್ತನದಂತೆ ಎಂದುಕೊಳ್ಳಿ. ಇದು ಒಟ್ಟಾರೆ ಹೋರಾಟದ ಉದ್ದೇಶ.

ಅದರ ಪ್ರಯುಕ್ತ ಅಲ್ಲಿನ ಲಲನೆಯರು ಬ್ರಾ ಬಿಚ್ಚಿ ಟಾಪ್ ಲೆಸ್ ಆಗಿ ಸೈಕಲ್ ಹೊಡೆದಿದ್ದಾರೆ. ಅಲ್ಲಿನ ಪುರುಷರು ಒಂದು ಪುಕ್ಕಟೆ ಮನರಂಜನೆ ಪಡೆದುಕೊಂಡು ಮುಂದೆ ಸಾಗುತ್ತಿದ್ದಾರೆ.

Leave A Reply

Your email address will not be published.