ಗೆಳತಿಯ ರೋಮರಹಿತ ನೈಸು ಕೈ ಹಿಡಿದುಕೊಂಡಾಗ ನೆನಪಾದದ್ದು ಪತನಗೊಂಡ ‘ ರೋಮ್ ‘ ಸಾಮ್ರಾಜ್ಯ !

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು.

ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ ವಿಲ್ಲದ ನಯವಾದ ಕೈಯನ್ನು ನೋಡಿದಾಗ ಪಕ್ಕನೇ ನೆನಪಾದದ್ದು ರೋಮನ್ನರ ಬಗೆಗಿನ ಥಿಯರಿ !
ನಮಗೆ ಯಾಕೆ ನಮಗೆ ಯಾಕೆ ದೇವರು ರೋಮವನ್ನು ಕೊಟ್ಟಿರಬಹುದು ಜಿಲ್ಲೆಟ್, ಸುಪರ್ಮಾಕ್ಸ್ , ಟುಪಾಜ್, ಮುಂತಾದ ಬ್ಲೇಡ್ ಕಂಪನಿಗಳಿಗೆ ಬಿಸಿನೆಸ್ ಆಗಲೆಂದಾ ಅಥವಾ ತೆಗೆಯುವ ಕಂಪನಿಗಳ ಬೊಕ್ಕಸ ತುಂಬಿಸಲೆಂದಾ? ಇರಲಿಕ್ಕಿಲ್ಲ ಅಲ್ಲವಾ? ಹಾಗಾದರೆ ದೇಹದಲ್ಲಿ ರೋಮಕ್ಕೆ ಮಾಡಲು ಏನಾದರೂ ಕೆಲಸ ಇರಲೆಬೇಕು. ಯಾವುದಾದರೂ purpose ಇಟ್ಟುಕೊಳ್ಳದೇ ಯಕಶ್ಚಿತ್ ರೋಮ ಬಂದಿರಲಾರದು, ಅಲ್ಲವಾ?!

ಈ ರೋಮಗಳು ನಮ್ಮ ಮೇಲೆ ನಿಂತ ಮೊಬೈಲ್ ಟವರುಗಳಂತೆ. ರೋಮಗಳಿಗೆ ದೇಹದ ಉಷ್ಣತೆಯನ್ನು ರೆಗ್ಯುಲೇಟ್ ಮಾಡಬಲ್ಲ ಶಕ್ತಿಯಿದೆ. ಕೂದಲಿನ ಬುಡದಲ್ಲಿನ ಗ್ರಂಥಿಗಳು ಚಳಿಗಾಲದಲ್ಲಿ ಉಬ್ಬಿ ನಿಂತು ದೇಹವನ್ನು ಬಿಸಿಯಾಗಿಡಲು ಕಿಂಚಿತ್ತಾದರೂ ಸಹಾಯಮಾಡುತ್ತವೆ. ರೋಮ ಸೇವೆ- ಅಳಿಲು ಸೇವೆ ಥರ! ಇವಿಷ್ಟೇ ಅಲ್ಲದೆ ರೋಮಗಳು ದೇಹ ದೇಹವನ್ನು ತಂಪಾಗಿಡಲೂ ಬಲ್ಲವು. ಇತರ ಪ್ರಾಣಿಗಳ ದೇಹಕ್ಕೆ ಕೂದಲುಗಳೇ ಹೊದಿಕೆ. ಮನುಷ್ಯ ದೇಹದ ಮೇಲೆ ಇರುವ ರೋಮಗಳೆ ಲಕ್ಷಾಂತರ ಟವರುಗಳು! ಅವು ಬೇಕಾದಾಗ ಸಿಗ್ನಲ್ ಗಳನ್ನು emit ಮಾಡಬಲ್ಲವು. ನಮ್ಮದೇಹದಲ್ಲಿ ಉತ್ಪತ್ತಿಯಾಗುವ ಸ್ಥಿರ ವಿದ್ಯುತ್ ಅನ್ನು ಡಿಸ್ಚಾರ್ಜ್ ಮಾಡುವುದು ಕೂಡ ಇವೇ ರೋಮಗಳು!

ಆದರೆ ಇಂದಿನ ಸೌಂದರ್ಯ ಪ್ರೇರಿತ ಸಮಾಜವು ರೋಮವನ್ನು ತೆಗೆದು ಬೋಳು ಬೋಳಾಗಿಸುತ್ತಿದೆ. ರೋಮ ತೆಗೆಯುವುದರಿಂದ ದೇಹದ ಅಂಗಗಳನ್ನು ಹೈಜನಿಕ್ ಆಗಿ ಇಟ್ಟುಕೊಳ್ಳಬಹುದು ಮತ್ತು ದೇಹ ವಾಸನೆ ಬರದಂತೆ ನೋಡಿಕೊಳ್ಳಬಹುದು ಎಂಬುದು ಅವರ ಇನ್ನೊಂದು ಆಶಯ.

ಅವಳು ರೋಮವನ್ನೆಲ್ಲ ತೆಗೆದುಬಿಟ್ಟರೆ ಆತನಿಗೂ ಖುಷಿಯೇ. ಲಿಫ್ಟಿನಲ್ಲಿ ಅಕಸ್ಮಾತ್ ಯಾರೂ ಇಲ್ಲದ ಸಂದರ್ಭ ದೊರೆತರೆ, ಮಳೆಬಿದ್ದ ರಾತ್ರಿಗಳಲ್ಲಿ ಜೊತೆಗೆ ಊಟ ಮುಗಿಸಿ ವಾಪಸ್ಸಾಗುವಾಗ ಗೆಳತಿಯ ಕೈಯನ್ನು ಕದ್ದು ನೈಸು ಮಾಡಲು ರೋಮ ಇಲ್ಲದಿದ್ದರೇನೇ ಚೆಂದ. ಆದರೆ ರೋಮಗಳು ಸೆಕ್ಷುಯಲ್ ಸಿ೦ಬಲ್ಲುಗಳನ್ನು ರೋಮವಿಲ್ಲದವರಿಗಿಂತ ತ್ವರಿತವಾಗಿ ಮತ್ತು ಅವರಿಗಿಂತ ಗಾಢವಾಗಿ ಬ್ರೈನ್ ಗೆ ತಲಪಿಸಬಲ್ಲವು. ಸಸ್ತನಿಗಳ ದೇಹದ ಕೂದಲುಗಳಿಂದ ಹೊರಸೂಸುವ ಫೆರೋಮೋನ್ ಎಂಬ ಸೂಪರ್ ಸೆಕ್ಸ್ ಹಾರ್ಮೋನುಗಳು ತನ್ನ ಜತೆಗಾರ ಅಥವಾ ಜತೆಗಾತಿಯನ್ನು ಕೇವಲ ವಾಸನೆಯಿಂದಲೇ attract ಮಾಡಬಲ್ಲವು ಕೂಡ. ನಮ್ಮ ಕೈಯ, ಎದೆಯ ಮತ್ತು ಗುಪ್ತಾಂಗದ ರೋಮಗಳು ವಿಚಿತ್ರ ಪರಿಮಳವನ್ನು ಬೀರಿ attraction ನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಇಂದು ನಮಗೆ ವಿರುದ್ಧ ಲಿಂಗಿಗಳನ್ನು ಅಟ್ರಾಕ್ಟ್ ಮಾಡಲು ವಿಧವಿಧದ ವಿಧಾನಗಳಿವೆ. ಆದ್ದರಿಂದ ಬೆವರಿನ ವಾಸನೆಯಿಂದ ಮುಕ್ತವಾಗಿರುವುದೇ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಇವತ್ತು ತಲೆ ಕೂದಲು, ಮೀಸೆ, ಗಡ್ಡಗಳ ಮೇಲೆ ಜನರು ತುಂಬಾ ಇನ್ವೆಸ್ಟ್ ಮಾಡುತ್ತಿದ್ದಾರೆ. ಜನರ ಉತ್ಸಾಹ ನೋಡಿ ‘ರೋಮ’ನ್ ಕಂಪನಿಗಳು ಕೂಡ ಬಂಡವಾಳ ತೊಡಗಿಸುತ್ತಿವೆ. ಗಡ್ಡ-ಮೀಸೆಗಳನ್ನು ಜನ ಹೇಗೆ trim ಮಾಡಿಕೊಳ್ಳುತ್ತಿದ್ದಾರೋ ಹಾಗೆಯೇ ಗುಪ್ತಾಂಗದ ಕೂದಲು ಕೂಡ shape-up ಮಾಡಿಕೊಳ್ಳುವುದು ಇಂದಿನ ಫ್ಯಾಷನ್ ಆಗಿದೆ. ಜನರು ತಮ್ಮಲ್ಲಿ ಗುಪ್ತವಾಗಿ ಅಡಗಿಕೊಂಡಿರುವ ಫ್ಯಾಶನ್ ಡಿಸೈನಿಂಗ್ ಕಲೆಯನ್ನು ಗುಪ್ತಾಂಗಗಳ ಮೇಲೆ ಬಳಸುತ್ತಿದ್ದಾರೆ. ಚಿತ್ರ-ವಿಚಿತ್ರ ಡಿಸೈನುಗಳು, ವರ್ಣಮಾಲೆಯ A ಯಿಂದ ಮೊದಲ್ಗೊಂಡು Z ತನಕದ ಅಕ್ಷರಗಳು-ಹೀಗೆಲ್ಲ ಗುಪ್ತಾಂಗದ ರೋಮದಲ್ಲಿ ಕೆತ್ತಿಸಿಕೊಂಡು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದಾರೆ. ಮತ್ತೊಂದು ಕಡೆ ಆ ವಿಚಿತ್ರ ಡಿಸೈನ್ ಗಳನ್ನು ತಮ್ಮsexual partner ಗಳಿಗೆ ತೋರಿಸಿ ಒಂದು ಸರ್ಪ್ರೈಸ್, ಮಗದಷ್ಟು ಫ್ಯಾಂಟಸೀ ಮೂಡಿಸಬಲ್ಲವರಾದರೆ ಅದು ಯಾಕೆ ಬೇಡ?

ಆದರೆ ರೋಮ ತೊಲಗಿಸಿಕೊಳ್ಳುವ ಮೊದಲು ಎಚ್ಚರವಿರಲಿ. ಬೇರೆಯವರು ಬಳಸಿದ ರೇಜರ್ ನ ಬಳಕೆ ಬೇಡವೇ ಬೇಡ. ಬೇರೆ ಯಾರೋ ಗಡ್ಡ shave ಮಾಡಲು ಬಳಸಿದ ಬ್ಲೇಡ್ ನ್ನು, ‘ ಏನಾಗಲ್ಲ ಬಿಡು, ನಾನು ಗಡ್ಡ ತೆಗಿತಿಲ್ಲವಲ್ಲ, ಕೆಳಗೆ ತಾನೇ ತೆಗೆಯಲು ಉಪಯೋಗಿಸುವುದಲ್ಲವಾ ‘ ಅಂತ ನಿಮಗೆ ನೀವೇ justify ಮಾಡಿಕೊಂಡು ಬಿಟ್ಟೀರಾ. ಸಮಸ್ಯೆ ಬುಡಕ್ಕೇ ಬಂದೀತು! ಒಂದುವೇಳೆ ಪರ್ಮನೆಂಟ್ ರೋಮ ನಿವಾರಣೆಗೆ ಹೊರಡುತ್ತೀರೆಂದಾದರೆ ಪ್ರೊಫೆಷನಲ್ಸ್ ನ ಸಹಾಯ-ಸಲಹೆ ಪಡೆದುಕೊಳ್ಳಿ.

ರೋಮನ್ನರಾಗೇ ಇರ್ತೀರಾ ಅಥವಾ ಅರೋಮನ್ನರಾಗ್ತೀರಾ-ಆಯ್ಕೆ ನಿಮ್ಮದು!

? ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.