16 ಲಕ್ಷ ಕಿಲೋ ಮೀಟರ್ ವೇಗದ ಸೌರ ಗಾಳಿ ಭೂಮಿಗೆ ಅಪ್ಪಳಿಸಲು ಕ್ಷಣಗಣನೆ | ಭೂಮಿಯಲ್ಲಿ ಇವೆಲ್ಲಾ ಸೇವೆಗಳು ವ್ಯತ್ಯಯ ಸಂಭವ !
ಸುಮಾರು 16 ಲಕ್ಷ ಕಿಲೋ ಮೀಟರ್ ವೇಗದ ಸೌರ ಗಾಳಿಯು ಇಂದು ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಇದು ಜಿಪಿಎಸ್, ಮೊಬೈಲ್ ಫೋನ್ ಹಾಗೂ ಉಪಗ್ರಹ ಟಿವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಸೂರ್ಯನ ವಾತಾವರಣದಲ್ಲಿ ಉಂಟಾಗಿರುವ ಈ ಬಿರುಗಾಳಿ ಸೂರ್ಯನ ಆಯಸ್ಕಾಂತೀಯ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಾಸಾ ಹೇಳಿದೆ.
ಸೌರ ಬಿರುಗಾಳಿಯು ಭೂಮಿಯ ಹೊರಗಿನ ವಾತಾವರಣ ಬಿಸಿ ಮಾಡುತ್ತದೆ ಮತ್ತು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಗೆ ತೊಂದರೆ ಉಂಟುಮಾಡಬಹುದು. ವಿದ್ಯುತ್ ಲೈನ್ಗಳಲ್ಲಿ ಪ್ರವಾಹವು ಎಂದಿಗಿಂತ ಅಧಿಕವಾಗಿರಬಹುದು ಹಾಗೂ ಟ್ರಾನ್ಸ್ಫಾರ್ಮ್ ಗಳನ್ನು ಸಹ ಸ್ಫೋಟಿಸುತ್ತದೆ ಎಂದು ನಾಸಾ ಹೇಳಿದೆ.
ಈ ಸೌರ ಬಿರುಗಾಳಿಯು ಕೆಲ ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಇರುತ್ತದೆ. ಆದರೆ ಭೂಮಿಯ ಮೇಲ್ಮೈ ಕಾಂತಿ ಮತ್ತು ವಾತಾವರಣದಲ್ಲಿ ಇದರ ಪರಿಣಾಮವು ಹಲವು ದಿನಗಳು ಅಥವಾ ವಾರಗಳವರೆಗೆ ಇರುತ್ತದೆ ಎಂದು ನಾಸಾ ಸ್ಪಷ್ಟಪಡಿಸಿದೆ.
ಭೂಮಿಯ ಜೊತೆಗಿನ ಈ ಘರ್ಷಣೆಯಿಂದ ಸುಂದರವಾದ ಬೆಳಕು ಹೊರಹೊಮ್ಮಲಿದೆ .ಸೌರ ಚಂಡಮಾರುತದಿಂದಾಗಿ, ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರಿಗೆ ಸುಂದರವಾದ ಆಕಾಶದ ಬೆಳಕಿನ ನೋಟ ಕಾಣಬಹುದಾಗಿದೆ. ಈ ಪ್ರದೇಶಗಳಿಗೆ ಹತ್ತಿರ ವಾಸಿಸುವ ಜನರು ರಾತ್ರಿಯಲ್ಲಿ ಸುಂದರವಾದ ಬೆಳಕಿನ ನೋಟ ಕಾಣಬಹುದಾಗಿದೆ ಎಂದು ನಾಸಾ ಮಾಹಿತಿ ನೀಡಿದೆ.