ಮಂಗಳೂರು | ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ವಾಮಂಜೂರಿನ ಮಹಿಳೆ ಸಾವು

ಮಂಗಳೂರು: ನಗರದ ಕದ್ರಿ ಠಾಣಾ ವ್ಯಾಪ್ತಿಯ ಹರಿಪದವು ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೃತರಾದವರನ್ನು ಪ್ರಿಯಾಂಕ (31) ಎಂದು ಗುರುತಿಸಲಾಗಿದೆ.

ಕೋಟೆಕಾರಿನ ಶಕ್ತಿ ಸ್ಟೋರ್ ಮಾಲಕರ ಪುತ್ರಿಯಾಗಿರುವ ಪ್ರಿಯಾಂಕ, ಹರಿಪದವು ಬಳಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಆಲ್ಟೋ ಕಾರು ಡಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡ ಅವರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಾಮಂಜೂರಿನ ನಿವಾಸಿ ವಿನೋದ್ ರಾಜ್ ಅವರ ಪತ್ನಿಯಾಗಿರುವ ಪ್ರಿಯಾಂಕ, ಉಳ್ಳಾಲದ ಪಾಂಡ್ಯರಾಜ್ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.