ಮನೆ ಸಂಸ್ಕಾರದ ಮೂಲ ಕೇಂದ್ರ-ಡಾ.ಪ್ರಭಾಕರ ಭಟ್ ಕಲ್ಲಡ್ಕ
ಕಡಬ : ಸೇವಾ ಭಾರತಿ ಹಾಗೂ ವಿಶ್ವಹಿಂದೂ ಪರಿಷತ್ , ಬಜರಂಗದಳ ಕಡಬ ಪ್ರಖಂಡ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ ಮನೆ ಹಸ್ತಾಂತರ
ಕಡಬ: ಹಿಂದುಗಳು ತಮ್ಮ ಮನೆಯನ್ನು ದೇವಾಲಯದಂತೆ ಪೂಜನೀಯ ಭಾವನೆಯಿಂದ ಕಾಣುತ್ತಾರೆ . ಮನೆಯಿಂದಲೇ ಆತ್ಮಿಯತೆ, ಪ್ರೀತಿ ಸಂಸ್ಕಾರ ಬೆಳೆಯುತ್ತದೆ. ಹಾಗಾಗಿ ಮನೆ ಸಂಸ್ಕಾರದ ಮೂಲ ಕೇಂದ್ರವಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಸೇವಾ ಭಾರತಿ ಹಾಗೂ ವಿಶ್ವಹಿಂದೂ ಪರಿಷತ್ , ಬಜರಂಗದಳ ಕಡಬ ಪ್ರಖಂಡ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಕಡಬ ತಾಲೂಕು ಪೆರಾಬೆ ಗ್ರಾಮದ ನೇರೊಲ್ಪಲ್ಕೆ ಎಂಬಲ್ಲಿನ ನಿವಾಸಿ ಅರುಣ್ ಕುಮಾರ್ – ಕಮಲ ದಂಪತಿಗೆ ನಿರ್ಮಿಸಿದ “ಸೇವಾ ನಿಲಯ”ದ ಗೃಹಪ್ರವೇಶದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮನ್ನಾಳಿದ ಪರಕೀಯರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ಧಾರ್ಮಿಕ ದಬ್ಬಾಳಿಕೆ ನಡೆಸಿದರೂ ನಮ್ಮ ಸಂಸ್ಕøತಿ ಉಳಿದುಕೊಳ್ಳುವುದಕ್ಕೆ ಕಾರಣ ನಮ್ಮ ದೇವಾಲಯದಂತೆ ಭಾವಿಸುವ ಮನೆಗಳಿಂದಾಗಿ, ಸಂಸ್ಕಾರಭರಿತ ಶಿಕ್ಷಣ ಸಿಗುವುದೆ ಮನೆಯಿಂದ ಇದರ ನೇತೃತ್ವ ಮನೆಯ ತಾಯಿಗೆ ಸಲ್ಲಬೇಕು. ಮನೆ ಮನ ಸ್ವಚ್ಚವಾಗಿದ್ದರೆ ವ್ಯಕ್ತಿ ಸಂಸ್ಕಾರಭರಿತನಾಗುತ್ತಾನೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆ ಸಂಘ ಚಾಲಕ್ ಕಾಂತಪ್ಪ ಶೆಟ್ಟಿ ಕೊಡ್ಮನ್, ವಿ.ಹಂ.ಪ ಪುತ್ತೂರು ಜಿಲ್ಲೆ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಮಾತನಾಡಿ ಶುಭಹಾರೈಸಿದರು. ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಅಗತ್ತಾಡಿ , ಅರುಣ್ ಕುಮಾರ್ , ಕಮಲಾ, ಉಪಸ್ಥಿತರಿದ್ದರು. ಮನೆ ನಿರ್ಮಿಸಲು ವಿವಿಧ ರೂಪದಲ್ಲಿ ದಾನ ನೀಡದವರನ್ನು ಗೌರವಿಸಲಾಯಿತು. ಗೋಪಾಲ ಕಲ್ಲುಗುಡ್ಡೆ ವೈಯಕ್ತಿಕ ಗೀತೆ ಹಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ವೆಂಕಟ್ರಮಣ ರಾವ್ ಮಂಖುಡೆ ಪ್ರಸಾವಿಸಿ ಸ್ವಾಗತಿಸಿದರು. ವಿ.ಹಂ.ಪ ಕಡಬ ಪ್ರಖಂಡ ಅಧ್ಯಕ್ಷ ರಾಧಕೃಷ್ಣ ಕೊಲ್ಪೆ ವಂದಿಸಿದರು. ಪ್ರವೀಣ್ ಆಳ್ವ ನಿರೂಪಿಸಿದರು.