ಮಂಗಳೂರು | ಬಸ್ಸಿಗೆ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್, ಸವಾರ ಗಂಭೀರ

ಮಂಗಳೂರು: ಲಾಕ್ಡೌನ್ ಡಿಸ್ ಲಾಕ್ ಆದ ಬೆನ್ನಿಗೆ ಜನರು ತಮ್ಮ ವಾಹನಗಳ ಸಮೇತ ರಸ್ತೆಗಿಳಿದ ಪರಿಣಾಮ ದೇಶದಾದ್ಯಂತ ಹಲವು ಕಡೆ ಒಂದಲ್ಲೊಂದು ವಾಹನ ಅಪಘಾತಗಳು ಜರುಗುತ್ತಿವೆ. ಇವತ್ತು ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ಒಳಕ್ಕೆ ನುಗ್ಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಬೈಕ್ ಸವಾರರಾದ, ಆಂಧ್ರ ಮೂಲದ ಶಶಿಧರ್ ರೆಡ್ಡಿ (27) ಅವರು ಗಂಭೀರ ಗಾಯಗೊಂಡಿದ್ದಾರೆ. ಸಹಸವಾರ ಶಾನು ಭಾಝ್ (31) ಎಂಬವರು ಗಾಯಗೊಂಡು ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ತಲಪಾಡಿ ಟೋಲ್ ಪ್ಲಾಝಾದ ಸಿಬ್ಬಂದಿಗಳಾಗಿದ್ದು ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ನಗರ ಹೊರವಲಯದ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ಸಂಭವಿಸಿದೆ. ಮಂಗಳೂರು ತಲಪಾಡಿ ನಡುವೆ ಸಂಚರಿಸುತ್ತಿದ್ದ ಪ್ರೈವೇಟ್ ಸಿಟಿ ಬಸ್ ಚಾಲಕ ಹೆದ್ದಾರಿಯಲ್ಲಿ ಒಮ್ಮೆಗೆ ಬಸ್ಸನ್ನು ನಿಲ್ಲಿಸಿದ್ದಾನೆ. ಆದರೆ ಅದರ ಊಹೆ ಇಲ್ಲದ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ಮುಂದೆ ಸಾಗಿದ್ದ. ಪರಿಣಾಮ ಬಸ್ಸಿನ ಹಿಂಬದಿಯಿಂದ ನುಗ್ಗಿದ ಬಸ್ಸು ಸಂಪೂರ್ಣವಾಗಿ ಒಳಗೆ ನುಗ್ಗಿದೆ.
ಇಂದು ಸುರಿದ ಧಾರಾಕಾರ ಮಳೆ ಬರುತ್ತಿದ್ದ ಕಾರಣ ಬಸ್ ಚಾಲಕ ಬ್ರೇಕ್ ಹಾಕಿರುವುದು ಬೈಕ್ ಸವಾರನ ಗಮನಕ್ಕೆ ಪರ್ಮನೆಂಟ್ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget


Ad Widget


Ad Widget

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: