ವಿಟ್ಲ | ಸಾಲೆತ್ತೂರು ವಲಯದ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ತಾಲೂಕು, ಸಾಲೆತ್ತೂರು ವಲಯದ ಪ್ರಗತಿ ಬಂದು ಹಾಗೂ ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ಸಾಲೆತ್ತೂರಿನ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿಯವರು ವಹಿಸಿದ್ದರು. ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಕೈಯ್ಯೂರು ನಾರಾಯಣ ಭಟ್ ರವರು ದೀಪ ಬೆಳಗಿಸಿ ಉಧ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ಶ್ರೀಯುತ ಚೆನ್ನಪ್ಪ ಗೌಡ, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಹಸೈನಾರ್ ಡಿ, ಸಾಲೆತ್ತೂರು ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಅರವಿಂದ್ ರೈ, ವಲಯಾಧ್ಯಕ್ಷರಾದ ಶ್ರೀಯುತ ಹರಿಪ್ರಸಾದ್, ಸ್ಥಳೀಯ ಮೂರು ಒಕ್ಕೂಟಗಳ ಅಧ್ಯಕ್ಷರುಗಳಾದ ಧನಂಜಯ ಸುವರ್ಣ, ಕೃಷ್ಣಪ್ಪಗೌಡ, ಶೇಖರ ಪೂಜಾರಿ ಭಾಗವಹಿಸಿದ್ದರು. ಸಾಂಕೇತಿಕವಾಗಿ 16 ಸಂಘಗಳಿಗೆ ಒಟ್ಟು ನಾಲ್ಕು ಲಕ್ಷ ಆರುವತ್ತೆಂಟು ಸಾವಿರ ರೂಪಾಯಿ ಲಾಭಾಂಶ ವಿತರಿಸಲಾಯಿತು.
ತಾಲೂಕು ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀಯುತ ಶಿವಪ್ರಸಾದ್ ಸ್ವಾಗತಿಸಿ, ಕೊಳ್ನಾಡು ‘ಎ ‘ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಪಿ ಜಯರಾಮ ಶೇಖ ವಂದಿಸಿದರು. ವಲಯದ ಮೇಲ್ವಿಚಾರಕರಾದ ಶ್ರೀಮತಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕ ಪರಿಶೋಧಕರಾದ ಯಶೋದ, ಹಾಗೂ ಸೇವಾಪ್ರತಿನಿಧಿಗಳಾದ ಶ್ರೀಮತಿ ಹೇಮಲತ, ಶ್ರೀಮತಿ ಕುಶಲ,ಶ್ರೀಮತಿ ಅನುರಾಧ, ಶ್ರೀಮತಿ ಲೀಲಾವತಿ ಸಹಕರಿಸಿದರು.