ಗೆಳತಿಯನ್ನು ಇಂಪ್ರೆಸ್ ಮಾಡಲು ರೋಸ್ ಬದಲು ಗನ್ ನೀಡಿದ ಯುವಕ | ಮರುಕ್ಷಣವೇ ಪೊಲೀಸ್ ಅತಿಥಿಯಾದ ಈ ರೋಮಿಯೋ

ಕೊಹಿಮಾ: ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಹೋದ ಯುವಕ ರೋಸ್ ನೀಡುವ ಬದಲು ಬಂದೂಕು ನೀಡಿದ್ದಾನೆ. ಆದರೆ ಪ್ರೇಯಸಿ ಮಾತ್ರ ಗನ್ ನೀಡಿದ ರೋಮಿಯೊನನ್ನು ಕಂಡು ಅಷ್ಟೇನು ಇಂಪ್ರೆಸ್ ಆಗಿಲ್ಲ. ಆದರೆ ಯುವಕ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.

ನಾಗಲ್ಯಾಂಡ್‍ನ ಪದುಂಪುಖುರಿ ಪ್ರದೇಶದ ದಿಮಾಪುರ್‍ನಲ್ಲಿ ಈ ಘಟನೆ ನಡೆದಿದೆ.ಯುವಕನನ್ನು 25 ವರ್ಷದ ಟೋರಿನ್ ತಿಖಿರ್ ಎಂದು ಗುರುತಿಸಲಾಗಿದೆ.

22 ಕ್ಯಾಲಿಬರ್ ಪಿಸ್ತೂಲ್ ಬಾಡಿಗೆ ಪಡೆದು ಪ್ರೇಯಸಿಗೆ ನೀಡುವ ಮೂಲಕ ಇಂಪ್ರೆಸ್ ಮಾಡಲು ನೋಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಿಮಾಪುರ್ ಪೊಲೀಸರು ಧಾವಿಸಿ ಯುವಕನನ್ನು ಬಂಧಿಸಿದ್ದು, ಪಿಸ್ತೂಲ್ ಹಾಗೂ 3 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದಿಮಾಪುರ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಗರ್ಲ್‍ಫ್ರೆಂಡ್ ನ್ನು ಇಂಪ್ರೆಸ್ ಮಾಡುವ ಸಲುವಾಗಿ ಪಿಸ್ತೂಲ್ ನ್ನು ಬೇರೆಯವರಿಂದ ಪಡೆದಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಈ ಕುರಿತು ಟ್ವೀಟ್ ಸಹ ಮಾಡಿರುವ ದಿಮಾಪುರ್ ಪೊಲೀಸರು, ಯುವಕ ತನ್ನ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ರೋಸ್ ಕೊಡುವ ಬದಲಿಗೆ ಗನ್ ನೀಡಿದ್ದಾನೆ. ಆದರೆ ಪ್ರಿಯತಮೆ ಅಷ್ಟೇನು ಇಂಪ್ರೆಸ್ ಆಗಿಲ್ಲ. 22 ಕ್ಯಾಲಿಬರ್ ಪಿಸ್ತೂಲ್‍ನ್ನು ಅಕ್ರಮವಾಗಿ ಹೊಂದಿದ್ದಕ್ಕೆ ಪದಂಪುಖುರಿ ಪ್ರದೇಶದಿಂದ ಒಬ್ಬನನ್ನು ಬಂಧಿಸಲಾಗಿದೆ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಗರ್ಲ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡಲು ಯುವಕರು ಬೇರೆ ಬೇರೆ ರೀತಿಯ ಪ್ರಯತ್ನಗಳನ್ನು ಮಾಡುವುದುಂಟು. ಆದರೆ ಈತ ಈ ರೀತಿಯಲ್ಲಿ ಇಂಪ್ರೆಸ್ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿರುವುದು ಮಾತ್ರ ಖೇದಕರ ಸಂಗತಿ.

Leave A Reply

Your email address will not be published.