ಗುತ್ತಿಗಾರು ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ (ರಿ)ಉದ್ಘಾಟನೆ ಮತ್ತು ಆಂಬುಲೆನ್ಸ್ ಖರೀದಿಗಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ರಿಂದ ಚಾಲನೆ
ಗ್ರಾಮೀಣ ಪ್ರದೇಶದ ಅಗತ್ಯಕ್ಕಾಗಿ ಆಂಬುಲೆನ್ಸ್ ಖರೀದಿ, ಮತ್ತು ಸೇವೆಗೆ ಯುವ ಸಮುದಾಯದ ಮುಂದೆ ಬಂದಿರುವುದು ಸಮಾಜಕ್ಕೆ ಮಾದರಿ ಡಾ. ನಂದಕುಮಾರ್ ಅಭಿಮತ.
ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವೆಂಕಟೇಶ್ವರ ಸಭಾ ಭವನ ಹಾಲೆಮಜಲು ಇಲ್ಲಿ ಟ್ರಸ್ಟ್ ನ ಉದ್ಘಾಟನೆಯನ್ನು ನಿವೃತ್ತ ಠಾಣಾಧಿಕಾರಿ ಸುಬ್ಬಣ್ಣ ಗೌಡ ಮಣಿಯಾನ ಮನೆ ದೀಪ ಬೆಳಗಿಸುವ ಮುಕಾಂತರ ಉದ್ಘಾಟಿಸಿ, ಮಹತ್ವದ ಯೋಜನೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚೈತ್ರ ಭಾನು,ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಪಂಚಾಯತ್ ಪಿ. ಡಿ. ಓ. ಶಾಮ್ ಪ್ರಸಾದ್, ರಾಘವೇಂದ್ರ ಬೇಕರಿ ಮಾಲಕರಾದ ಅನಿಲ್ ಕುಮಾರ್, ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ,ಮುತ್ತಪ್ಪಪೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ ವಳಲಂಬೆ ನಿವೃತ್ತ ಉಪನ್ಯಾಸಕ ದುಗ್ಗಪ್ಪ ಗೌಡ ಕುಳ್ಳಂಪಾಡಿ, ಶ್ರೀ ಮತಿ ಪುಷ್ಪ್ಪಾವತಿ ದೇವಿದಾಸ್ ಬುಡ್ಲೆಗುತ್ತು, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಕಂದ್ರಪ್ಪಾಡಿ, ಸೇವಾಭಾರತಿ ಸದಸ್ಯ ಮುಕೇಶ್ ಪಡ್ಪು, ವೀರ ಮಾರುತಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಮೂಕಮಲೆ, ಮೆಸ್ಕಾಂ ಉದ್ಯೋಗಿ ನಿರಂತ್ ದೇವಸ್ಯ, ಬಿ. ಎಂ. ಎಸ್. ಆಟೋ ಘಟಕದ ಸದಸ್ಯರುಹಾಗೂ ಟ್ರಸ್ಟ್ ನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು, ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ಹನೀಕ್ಷಾ, ಮತ್ತು ಕುಮಾರಿ ಪ್ರೀತಿಕಾ ಶಿರಾಜೆ ನೆರವೇರಿಸಿದರು.