ಫರ್ಸ್ಟ್ ಡೋಸ್ | ಮನೆಯಾಕೆಗೆ ಶುದ್ಧವಾಗಿ ಬಟ್ಟೆ ಒಗೆಯಲು ಹೇಳಿ ಕೊಟ್ಟದ್ದು ಯಾರು ? ( ಮ್ಯಾನೇಜ್ ಮೆಂಟ್ ಸ್ಟೋರೀಸ್ )

ಅದು ಭಾನುವಾರದ ಬಿಡುವಿನ ದಿನ. ಹಾಗೆಯೇ ಬೆಚ್ಚ ಕಾಪಿ ಹೀರುತ್ತಾ ಆ ದಂಪತಿ ಡೈನಿಂಗ್ ಟೇಬಲ್ ನ ಮುಂದೆ ಕುಳಿತಿದ್ದರು. ಆತನ ಮುಂದೆ ಹಬೆಯಾಡುವ ಘಮಾಘಮಿತ ಬ್ರೇಕ್ ಫಾಸ್ಟ್ ಸವಿಯಲು ಕಾಯುತ್ತಿತ್ತು. ಗಂಡನಿಗೆ ಆಕೆ ಒಂದಷ್ಟು ತಿಂಡಿಯನ್ನು ಅಕ್ಕರೆಯಿಂದ ಬಡಿಸಿದಳು.

ಆತ ತಿಂಡಿ ಸವಿಯುತ್ತಿರುವಂತೆ ಆಕೆ ಕಿಟಿಕಿಯಿಂದ ಹೊರಕ್ಕೆ ದೃಷ್ಟಿ ಸರಿಸಿದಳು. ಅವಳಿಗೆ ಅಚ್ಚರಿಯಾಯಿತು. ಏನಿದು, ಆಕೆಯ ನೆರೆಮನೆ ಯಾಕೆ ಕೊಳಕು ಬಟ್ಟೆಗಳನ್ನು ಹಾಗೆಯೇ ಒಣಗಲು ಹಾಕಿದ್ದಾಳೆ ಎಂದುಕೊಂಡಳು ಆಕೆಯ ಪತ್ನಿ. “ಒಗೆದ ಬಟ್ಟೆ ಶುಚಿಯಾಗಿಲ್ಲ. ಇನ್ನೂ ಕೊಳೆ ಹಾಗೆಯೇ ಉಳಿದಿದೆ. ಆಕೆಗೆ ಸರಿಯಾಗಿ ಬಟ್ಟೆ ಹೊಲಿಯುವುದನ್ನು ಯಾರಾದರೂ ಹೇಳಿ ಕೊಡಬೇಕಿದೆ ” ಆಕೆ ಗಂಡನತ್ತ ನೋಡಿ ನೆರೆಮನೆಯ ಆಕೆಯ ಬಗ್ಗೆ ತನ್ನ ಅಸಮಾಧಾನವನ್ನು ತೋಡಿಕೊಂಡಳು. ಗಂಡ ಮಾತ್ರ ಆಕೆ ಹೇಳಿದ್ದನ್ನು ಕೇಳಿಸಿಕೊಂಡೂ ಸುಮ್ಮನಿದ್ದ.

ಹೀಗೇ ಹಲವು ದಿನಗಳು ಕಳೆದವು. ಆ ಗಂಡ ಹೆಂಡತಿ ಪ್ರತಿಬಾರಿ ಡೈನಿಂಗ್ ಟೇಬಲ್ ನಲ್ಲಿ ಕೂತು ಆ ದಂಪತಿ ಉಣ್ಣುವಾಗ ಹೆಂಡತಿಯದು ಅದೇ ಕಂಪ್ಲೇಂಟು. ಈ ಪಕ್ಕದ ಮನೆಯಾಕೆಗೆ ಬಟ್ಟೆ ಒಗೆಯಲು ಬರೋದಿಲ್ಲ. ಇನ್ನೂ ಆಕೆ ಬಟ್ಟೆ ಒಗೆಯಲು ಕಲಿತಿಲ್ಲ. ಪತ್ನಿ ತನ್ನ ಎಂದಿನ ಸಹಜ ಅಸಹನೆಯನ್ನು ತೋಡಿಕೊಳ್ಳುತ್ತಾ ಬರುತ್ತಿದ್ದಳು. ಪ್ರತಿಸಾರಿ ಆಕೆ ಪಕ್ಕದ ಮನೆಯಾಕೆ ಬಗ್ಗೆ ಏನಾದರೂ ದೂರಿದರೂ, ಗಂಡ ಮಾತ್ರ ತಲೆಬಗ್ಗಿಸಿ ತನ್ನ ಪಾಡಿಗೆ ಸುಮ್ಮನಿರುತ್ತಿದ್ದ.

ಅದೊಂದು ದಿನ, ಒಂದು ವಿಚಿತ್ರವಾದ ಘಟನೆ ನಡೆದಿತ್ತು. ಆತನ ಪತ್ನಿ ಹಿಂದೆ ಯಾವತ್ತೂ ನೋಡದ ಒಂದು ಹೊಸ ಬದಲಾವಣೆಯನ್ನು ಗಮನಿಸಿದ್ದಳು. ” ವ್ಹಾವ್ ನೋಡಿ, ಇವತ್ತು ಬಟ್ಟೆಗಳು ಮಿರಮಿರ ಮಿನುಗುತ್ತಿವೆ. ಆಕೆಗೆ ಚೆನ್ನಾಗಿ ಬಟ್ಟೆ ಒಗೆಯಲು ಯಾರು ಹೇಳಿ ಕೊಟ್ಟಿರಬಹುದು ” ಆತನ ಪತ್ನಿ ಖುಷಿಯಿಂದ ತಲೆ ಕುಣಿಸಿ ಹೇಳಿದಳು.
ಗಂಡ ತಲೆಬಗ್ಗಿಸಿ ಮೆಲ್ಲಗೆ ಹೇಳಿದ. ” ಹನಿ, ಇವತ್ತು ನಾನು ಬೆಳಿಗ್ಗೆ ಬೇಗನೆ ಎದ್ದು, ನಮ್ಮ ಮನೆಯ ಕಿಟಕಿಯನ್ನು ಶುದ್ಧ ಮಾಡಿದ್ದೆ !!”

ಎಷ್ಟೋ ಸಲ ನಮ್ಮ ಬದುಕಿನಲ್ಲಿ ಹಾಗೆ ನಡೆಯುತ್ತದೆ. ನಾವು ಯಾವ ಕಿಟಕಿಯ ಮೂಲಕ ನೋಡುತ್ತೇವೆಯೋ, ಯಾವ ದೃಷ್ಟಿಕೋನದಿಂದ ನೋಡುತ್ತೇವೆಯೋ ಪ್ರಪಂಚ ಹಾಗೇ ಕಂಡುಬರುತ್ತದೆ. ಎಲ್ಲಕ್ಕಿಂತ ಮೊದಲಿಗೆ ನಮ್ಮ ಮನಸ್ಸಿನ ಕಿಟಕಿಗಳನ್ನು ಶುಚಿ ಗೊಳಿಸುವುದು ಇಂದಿನ ಅಗತ್ಯ.

? ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.