ಬೆಳ್ಳಾರೆ : ನಾಪತ್ತೆಯಾಗಿದ್ದ ಯುವತಿ ಪತ್ತೆ, ಚೆನ್ನೈಗೆ ತೆರಳಿದ್ದ ಯುವತಿ ವಾಪಾಸ್ ಮನೆಗೆ

ಸುಳ್ಯ : ಬೆಳ್ಳಾರೆಗೆ ಬ್ಯೂಟಿಪಾರ್ಲರ್‌ಗೆ ಹೋಗುವುದಾಗಿ‌ ಮನೆಯಿಂದ ಹೋಗಿ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದ ಯುವತಿ ಪತ್ತೆಯಾಗಿದ್ದಾಳೆ.

ಐವರ್ನಾಡು ಗ್ರಾಮದ ಕೊಯಿಲ ನಿವಾಸಿ ಶ್ರೀಕಲಾ ಆಗಿದ್ದು ಈಕೆ ತನ್ನ ಮನೆಯಲ್ಲಿ ಬೆಳ್ಳಾರೆಯ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋದವು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು.

ಈ ಕುರಿತು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ಆಧ್ಯಾತ್ಮಿಕತೆಯ ಬಗ್ಗೆ ಒಲವು ಹೊಂದಿದ್ದ ಶ್ರೀಕಲಾ ಅವರು ಮನೆಯಲ್ಲಿ ಹೇಳದೆ ಚೆನೈ ನ ಈಶ ಆಧ್ಯಾತ್ಮಿಕ ಸಂಸ್ಥೆಗೆ ಸೇರಲು ರೈಲಿನಲ್ಲಿ ಹೋಗಿದ್ದು,ಅಲ್ಲಿ ಮನೆಯವರು ಇಲ್ಲದೆ ಸಂಸ್ಥೆಗೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದರು.

ಇದರಿಂದ ಆಕೆ ವಾಪಾಸು ಮನೆಗೆ ಬಂದಿದ್ದಾರೆ.ಆಧ್ಯಾತ್ಮಿಕ ಸಂಸ್ಥೆಗೆ ಸೇರಲು ಮನೆಯವರು ಸಮ್ಮತಿಸರು ಎಂದು ಆಕೆ ಹೇಳದೆ ಹೋಗಿರುವುದಾಗಿ ತಿಳಿಸಿದ್ದಾರೆ.

Leave A Reply

Your email address will not be published.