ಸಬ್‌ಇನ್ಸ್‌ಪೆಕ್ಟರ್ ವಿರುದ್ದ ಮತ್ತೆ ದೂರು ನೀಡಿದ ನಟಿ ರಾಧಾ

ತಮಿಳು ನಟಿ ರಾಧಾ ಅವರು ಎರಡನೇ ಗಂಡ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ವಸಂತರಾಜ್ ವಿರುದ್ಧ ಎರಡನೇ ಬಾರಿ ದೂರು ನೀಡಿದ್ದಾರೆ. ಪತಿಯ ಕಿರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿದಿನ ಗಂಡ ಮನಬಂದಂತೆ ಥಳಿಸುತ್ತಾರೆ ಮತ್ತು ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಟಿ ರಾಧಾ ದೂರು ನೀಡಿದ್ದಾರೆ.

ಮೂರು ತಿಂಗಳ ಹಿಂದೆಯೂ ರಾಧಾ ಅವರು ಪತಿಯ ವಿರುದ್ದ ದೂರು ನೀಡಿದ್ದರು. ತನಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ಅನುಮಾನ ಪಡುವುದು ಹಾಗೂ ದಾಂಪತ್ಯ ನಿಷ್ಠೆಯನ್ನು ಪ್ರಶ್ನಿಸುತ್ತಾರೆ ಎಂದು ದೂರು ನೀಡಿದ್ದರು.

ಸಬ್​ ಇನ್ಸ್​ಪೆಕ್ಟರ್​ ವಸಂತರಾಜ್ ಅವರು ರಾಧಾ ಅವರ ಎರಡನೇ ಗಂಡನಾಗಿದ್ದು,ರಾಧಾ ಅವರು ಪುರುಷ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರೊಂದಿಗೆ ಓಡಾಡುವುದು ಸಬ್​ ಇನ್ಸ್​ಪೆಕ್ಟರ್​ಗೆ ಇಷ್ಟವಿರಲಿಲ್ಲ . ಈ ಕಾರಣದಿಂದಲೇ ಆತ ರಾಧಾಗೆ ಮತ್ತು ಅವರ ತಾಯಿಗೆ ಬೆದರಿಕೆ ಹಾಕಲು ಆರಂಭಿಸಿದ ಎನ್ನಲಾಗಿದೆ.

ಕೆಲವು ತಿಂಗಳ ಹಿಂದೆ ವಸಂತರಾಜ್- ರಾಧಾ ಅವರು ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನಲಾಗಿದೆ.ವಸಂತ್​ರಾಜ್​ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ರಾಧಾ ಕೂಡ ಸಿನಿಮಾ ನಿರ್ದೇಶಕರೊಬ್ಬರನ್ನು ಮದುವೆ ಆಗಿದ್ದರು. ಡಿವೋರ್ಸ್​ ಪಡೆದ ಬಳಿಕ ತನ್ನ ಮಗನೊಂದಿಗೆ ಚೆನ್ನೈನ ಸಾಲಿಗ್ರಾಮ್​ನಲ್ಲಿ ವಾಸವಿದ್ದಳು.

ಶೂಟಿಂಗ್​ ವೇಳೆ ಎಸ್​ಐ ವಸಂತ್​ರಾಜ್​ ಪರಿಚಯವಾಗಿತ್ತು. ಬಳಿಕ ಫೋನ್​ ನಂಬರ್​ ಸಹ ವಿನಿಮಯವಾಗಿತ್ತು. ಹೀಗೆ ಆಗಾಗ ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಕೊನೆಗೆ ಇದು ಪ್ರೀತಿಗೆ ತಿರುಗಿತ್ತು.

ತಿರುವಣಮಿಯುರ್​ ಪೊಲೀಸ್​ ಠಾಣೆಯಿಂದ ರಾಧಾಗಾಗಿ ವಡಪಳನಿ ಪೊಲೀಸ್​ ಠಾಣೆಗೆ ವಸಂತ್​ರಾಜ್​ ವರ್ಗಾಯಿಸಿಕೊಂಡಿದ್ದರು. ರಾಧಾ ಮತ್ತು ವಸಂತ್​ರಾಜ್​ ಚೆನ್ನಾಗಿಯೇ ಇದ್ದರು. ಆದರೆ, ಆಕೆ ವರ್ತನೆಯಿಂದಾಗಿ ನಂತರದ ದಿನಗಳಲ್ಲಿ ವಸಂತ್​ರಾಜ್​ ಮತ್ತೆ ವಡಪಳನಿ ಠಾಣೆಯಿಂದ ಎಣ್ಣೂರು ಪೊಲೀಸ್​ ಠಾಣೆಗೆ ಮತ್ತೆ ವರ್ಗಾವಣೆ ಮಾಡಿಸಿಕೊಂಡಿದ್ದರು.

Leave A Reply

Your email address will not be published.