ಪುತ್ತೂರಿನ ಶಾಲೆಯೊಂದರ ಆಟದ ಮೈದಾನವಿನ್ನು ನೇಜಿ ನಾಟಿಯ ಗದ್ದೆ!!ವಿಭಿನ್ನವಾಗಿ ಮೈದಾನವನ್ನು ಗದ್ದೆ ಮಾಡಿ ಬೇಸಾಯ ಮಾಡಿದ ಗ್ರಾಮಸ್ಥರು

ಶಾಲೆ-ಅನೇಕ ತಪ್ಪು ಸರಿಯನ್ನು ತಿದ್ದಿ, ತುಂಟ ಮಕ್ಕಳ ಚಿತ್ತವನ್ನು ಸರಿ ಬುದ್ಧಿಯತ್ತ ಕೊಂಡೊಯ್ಯುವ ದೇಗುಲ. ಇಲ್ಲಿ ಆಟದ ಮೈದಾನ, ಆಟೋಟ-ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಮೌಲ್ಯಯುತ ಶಿಕ್ಷಣ. ಕೊರೋನ ದಿಂದಾಗಿ ಶಾಲೆ ಸದ್ಯಕ್ಕೆ ತೆರೆಯುವ ಬಗೆಗೆ ಸರ್ಕಾರ ಗಮನ ಹರಿಸಿದ್ದರೂ, ಸರಿಯಾದ ದಿನವಂತೂ ನಿಗದಿಯಾಗಿಲ್ಲ. ಈ ನಡುವೆ ಮಕ್ಕಳಿಗೆ ಆಟೋಟಕ್ಕೆಂದು ಇದ್ದ ಶಾಲಾ ಆಟದ ಮೈದಾನವೀಗ ಬೇಸಾಯದ ಗದ್ದೆಯಾಗಿ ಬದಲಾಗಿದ್ದು,ಕೊರೊನ ದಿಂದಾಗಿ ಮೈದಾನದಲ್ಲಿ ಮಕ್ಕಳಿಲ್ಲದೆ ಹುಲ್ಲು ಬೆಳೆದು ಉಪಯೋಗಕ್ಕೆ ಬಾರದಂತಾಗಿದ್ದ ಆಟದ ಮೈದಾನಕ್ಕೆ ಹೊಸ ಮೆರುಗೊಂದು ಬಂದತಾಗಿದೆ.


ಹೌದು,ಇಂಥದೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದಿದೆ. ಮಹಾಮಾರಿಯಿಂದಾಗಿ ಮುಚ್ಚಲಾಗಿದ್ದ ಶಾಲೆ ಸದ್ಯಕ್ಕೆ ತೆರೆಯುವ ಸೂಚನೆಯು ಇಲ್ಲದುದರಿಂದ ಊರವರು, ಸಂಘ ಸಂಸ್ಥೆಗಳು ಜೊತೆಗೂಡಿ, ಶಾಲೆಯ ಆಟದ ಮೈದಾನವನ್ನು ಅಗೆದು ಗದ್ದೆ ಮಾಡಿದ್ದಾರೆ.


ಸುಮಾರು 80 ಸೆಂಟ್ಸ್ ಜಾಗದಲ್ಲಿ ಉಳುಮೆ ಮಾಡಲಾಗಿದ್ದು, ಉಳುಮೆಯಾದ ಗದ್ದೆಯಲ್ಲಿ ಈಗಾಗಲೇ 30 ಬಿತ್ತನೆ ಬೀಜ ಬಿತ್ತಲಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದ್ಯಸ್ಯರು ಕೂಡಾ ಕೈ ಜೋಡಿಸಿದರು.


ಒಟ್ಟಾರೆಯಾಗಿ ಆಟದ ಮೈದಾನದಲ್ಲಿ ಮಾಡಿದ ಗದ್ದೆಯಿಂದ ಉತ್ತಮ ಫಸಲು ಸಿಗುವುದು ಖಚಿತವಾಗಿದೆ. ಕಸದಿಂದ ರಸ ಎಂಬ ಮಾತನ್ನು ನಿಜ ಮಾಡಿದ ಊರವರ ಈ ಘನ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

Leave A Reply

Your email address will not be published.