ಕೊರೋನಾ ಪಾಸಿಟಿವ್ ಪರೀಕ್ಷೆ ಈಗ ಫೇಸ್ ಮಾಸ್ಕ್ ನಲ್ಲಿ ಲಭ್ಯ
ಕೊರೋನಾ ವೈರಸ್ ಪ್ರಕೋಪ ದೇಶದಲ್ಲಿ ಹೆಚ್ಚಾಗದಂತೆ ತಡೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆ (ಕೋವಿಡ್ -19), ಸಾಮಾಜಿಕ ದೂರ, ಬೆಸ-ಸಮ ನಿಯಮ ಮತ್ತು ಇದೀಗ ಮಾಸ್ಕ್ ಪರೀಕ್ಷೆಗಳಂತಹ ಪ್ರಯತ್ನಗಳು ಮುಂದುವರೆದಿವೆ.
ಕೊರೋನದ ಮೂರನೇ ಅಲೆಯ ಅಪಾಯದ ನಡುವೆಯೇ, ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲಿ ಇನ್‌ಸ್ಪೈರ್ಡ್ ಎಂಜಿನಿಯರಿಂಗ್‌ನ ಎಂಜಿನಿಯರ್‌ಗಳ ತಂಡ ಪ್ರೋಟೋಟೈಪ್ ಮಾಸ್ಕ್ ವೊಂದನ್ನು ತಯಾರಿಸಿದ್ದು, ಈ ಫೇಸ್ ಮಾಸ್ಕ್ ನಿಮ್ಮ ಉಸಿರಾಟದಲ್ಲಿ COVID-19 ಸೋಂಕನ್ನು ಪತ್ತೆಹಚ್ಚಲು ಸಹಾಯ ಮಾಡಲಿದೆ. ಈ ಪರೀಕ್ಷೆಗೆ ಸುಮಾರು 90 ನಿಮಿಷಗಳ ಕಾಲ ಸಮಯಾವಕಾಶ ಬೇಕಾಗಲಿದೆ.
ಈ ಫೇಸ್ ಬಾಸ್ಕ್ ಅನ್ನು ಬಯೋ ಸೆನ್ಸರ್ ಸ್ಟ್ಯಾಂಡರ್ಡ್ KN-95 (Bio Senser Standard KN-95) ಆಧಾರದ ಮೇಲೆ ತಯಾರಿಸಲಾಗಿದೆ. ಈ ಮಾಸ್ಕ್ ಸಹಾಯದಿಂದ ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾನೆಯೋ ಅಥವಾ ಇಲ್ಲವೋ ಎಂಬುದು ಪತ್ತೆಹಚ್ಚಲು ಸಾಧ್ಯವಾಗಲಿದೆ. ಕೇವಲ ಒಂದು ಬಟನ್ ಒತ್ತುವ ಮೂಲಕ ನೀವು ಮಾಸ್ಕ್ ನಲ್ಲಿರುವ ಸೆನ್ಸರ್ ಅನ್ನು ಸಕ್ರೀಯಗೊಳಿಸಬಹುದು ಎಂದು ಶಾಸ್ತ್ರಜ್ಞರು ಹೇಳಿದ್ದಾರೆ. ಇದರಲ್ಲಿರುವ ರೀಡರ್ ಸ್ಟ್ರಿಪ್ ಕೇವಲ 90 ನಿಮಿಷಗಳ ಒಳಗೆ ಫಲಿತಾಂಶ ನೀಡಲಿದೆ. ಇನ್ನೊಂದೆಡೆ ಈ ಮಾಸ್ಕ್ ನಲ್ಲಿ ಸಣ್ಣ ಸಣ್ಣ ಡಿಸ್ಪೊಸೆಬಲ್ ಸೆನ್ಸರ್ ಅಳವಡಿಸಲಾಗಿದ್ದು, ಇವುಗಳನ್ನು ಬೇರೆ ಫೇಸ್ ಮಾಸ್ಕ್ ಗಳಿಗೂ ಅಳವಡಿಸಬಹುದು.
ಈ ಮಾಸ್ಕ್ ಗಳ ಕುರಿತು ಹೇಳಿಕೆ ನೀಡಿರುವ ವೈಸ್ ಇನ್‌ಸ್ಟಿಟ್ಯೂಟ್ ನಲ್ಲಿನ ಓರ್ವ ರಿಸರ್ಚ್ ಸೈಂಟಿಸ್ಟ್ ಹಾಗೂ ಅಧ್ಯಯನದ ಸಹ ಲೇಖಕ ಪೀಟರ್ ಗುಯೆನ್, “ತಮ್ಮ ತಂಡ ಇಡೀ ಲ್ಯಾಬ್ ಅನ್ನು ಒಂದೇ ಮಾಸ್ಕ್ ನಲ್ಲಿ ಫಿಟ್ ಮಾಡಲು ಬಯಸುತ್ತಿದೆ. ಇದರಲ್ಲಿ ಅಳವಡಿಸಲಾಗಿರುವ ಸಿಂಥೆಟಿಕ್ ಬಯಾಲಾಜಿ ಆಧಾರಿತ ಸೆನ್ಸರ್ ಅನ್ನು ಯಾವುದೇ ಫೇಸ್ ಮಾಸ್ಕ್ ನೊಂದಿಗೆ ಬಳಸಬಹುದು. ಈ ಫೇಸ್ ಮಾಸ್ಕ್ ಬಳಸುವುದರಿಂದ ದುಬಾರಿ ಟೆಸ್ಟ್ ಗೆ ಹಣ ಪಾವತಿ ಮಾಡುವುದರಿಂದ ನೀವು ಪಾರಾಗಬಹುದು. ಫೇಸ್ ಮಾಸ್ಕ್ ಹೊರತುಪಡಿಸಿ ನಮ್ಮ ಪ್ರೊಗ್ರಾಮ್ ಯೋಗ್ಯ ಬಯೋಸೆನ್ಸರ್, ವೈರಸ್, ಬ್ಯಾಕ್ಟೀರಿಯಾ, ಟಾಕ್ಸಿನ್ ಹಾಗೂ ಕೆಮಿಕಲ್ ಏಜೆಂಟ್ ಸೇರಿದಂತೆ ಅಪಾಯಕಾರಿ ಪದಾರ್ಥಗಳನ್ನು ಪತ್ತೆಹಚ್ಚಲು ಇತರ ಬಟ್ಟೆಗಳ ಮೇಲೂ ಕೂಡ ಇದನ್ನು ಫಿಟ್ ಮಾಡಬಹುದಾಗಿದೆ” ಎಂದಿದ್ದಾರೆ.
ಇಂತಹ ಅಧ್ಯಯನಗಳು ಹಾಗೂ ಅದರ ಆವಿಷ್ಕಾರಗಳು ಕೊರೋನಾ ಹಿಮ್ಮೆಟ್ಟಿಸಲು ಸಹಾಯಕವಾಗಿದೆ. ಈ ಮಾಸ್ಕ್ ನ ಆವಿಷ್ಕಾರವು ಹೊಸ ಕೊರೋನಾ ಪಾಸಿಟಿವಿಟಿ ಪರೀಕ್ಷೆಗೆ ನಾಂದಿ ಹಾಡಿದೆ.