Congress guarantee : ಮಹಿಳೆಯರಿಗೆ 2,000ರೂ ಅಲ್ಲ, ಬದಲಿಗೆ ಪ್ರತಿ ತಿಂಗಳು ಸಿಗುತ್ತೆ 2,500 ರೂ – ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್ !!

Congress guarantee: ಕಾಂಗ್ರೆಸ್ ನಿಂದ ಪ್ರತೀ ತಿಂಗಳು ಪ್ರತಿಯೊಂದು ಮನೆಯ ಮಹಿಳೆಗೆ 2,500 ರೂ ನೀಡಲಾಗುವುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar) ಅವರು ಘೋಷಣೆ ಹೊರಡಿಸಿದ್ದಾರೆ. ಹಾಗಂತ ಇದು ನಮ್ಮ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಕೂಡ ಮಾಡುವುದಲ್ಲ. ಬದಲಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ(Delhi Assembly Election) ಕಾಂಗ್ರೆಸ್ ಗೆದ್ದರೆ ಅಲ್ಲಿನ ಮಹಿಳೆಯರಿಗೆ ಜಾರಿಗೊಳಿಸುವ ಕಾಂಗ್ರೆಸ್ಸಿನ ಗ್ಯಾರೆಂಟಿ ಯಾಗಿದೆ.


ಹೌದು, ಕರ್ನಾಟಕದಲ್ಲಿ ಪ್ರಯೋಗಿಸಲಾದ ಕಾಂಗ್ರೆಸ್ ಗ್ಯಾರಂಟಿ(Congress Guarantee) ಯೋಜನೆಗಳು ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಯಾವುದೇ ವಿಧಾನಸಭಾ ಚುನಾವಣೆ ಬರಲಿ ಆ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಘೋಷಣೆಯ ಮೂಲಕ ಪ್ರಚಾರವನ್ನು ಆರಂಭಿಸುತ್ತಿದೆ. ಅಂತ್ಯ ಇದೀಗ ದೆಹಲಿ ವಿಧಾನಸಭಾ ಚುನಾವಣೆಯಲ್ಲಿಯೂ ಕೂಡ ಕಾಂಗ್ರೆಸ್ ಇದೆ ಅಸ್ತ್ರವನ್ನು ಬಳಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಘೋಷಿಸಿದ್ದು ಇದರಲ್ಲಿ ಡಿಕೆ ಶಿವಕುಮಾರ್ ಅವರು ಕೂಡ ಪಾಲ್ಗೊಂಡಿದ್ದರು. ಈ ವೇಳೆ ಅವರು ದೆಹಲಿಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದರೆ ಪ್ರತಿ ಮನೆಯ ಮಹಿಳೆಗೆ 2,500 ರೂ ನೀಡಲಾಗುವುದು ಎಂದು ಹೇಳಿದ್ದಾರೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ದೆಹಲಿಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ‘ಪ್ಯಾರಿ ದೀದಿ’ ಯೋಜನೆ ಜಾರಿ ಮಾಡಲಿದ್ದೇವೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೀಡುತ್ತೇವೆ‌. ಪಕ್ಷ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಮಾಡಿದ ಹಾಗೆಯೇ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು’ ಎಂದಿದ್ದಾರೆ.

ಅಂದ ಹಾಗೆ ಈಗಾಗಲೇ ಕಾಂಗ್ರೆಸ್ ಯಾವೆಲ್ಲ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಗೆದ್ದಿದೆಯೋ ಅಲ್ಲಿ ಈ ಉಚಿತ ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯರಿಗೆ 2000 ರೂಗಳನ್ನು ಗ್ಯಾರೆಂಟಿ ಯೋಜನೆ ಅಡಿ ನೀಡುತ್ತಿದೆ. ಆದರೆ ವಿಶೇಷ ಏಂಬಂತೆ ದೆಹಲಿಯಲ್ಲಿ ಮಾತ್ರ 2,500 ರೂ ಗಳನ್ನು ನೀಡಲು ಮುಂದಾಗಿದೆ.

Comments are closed.