ಮಗನ ಹೆಂಡತಿ ಜಗಳವಾಡಿಕೊಂಡು ಹೋದದ್ದನ್ನೆ ಅವಕಾಶ ಮಾಡಿಕೊಂಡು ಮಗನ ಹೆಂಡತಿಯನ್ನೇ ಪಟಾಯಿಸಿ ಗುಟ್ಟಾಗಿ ಸಂಸಾರ ಮಾಡಿದ ಪಿತ ಮಹಾಶಯ !
ಲಕ್ನೋ: ಮನೆಯ ಸೊಸೆಯಾಗಿದ್ದವಳೇ ತಂದೆಯ ಎರಡನೇ ಪತ್ನಿಯಾಗಿ ಗುಟ್ಟಾಗಿ ಸಂಸಾರ ನಡೆಸುತ್ತಿರುವ ಪ್ರಕರಣವೊಂದು ಉತ್ತರ ಪ್ರದೇಶದ ಬದೌನ್ನಿಂದ ವರದಿಯಾಗಿದೆ.
ಯುವಕನಿಗೆ 2016ರಲ್ಲಿ ಮದುವೆಯಾಗಿತ್ತು. ಆತ ಮದ್ಯಪಾನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆ, ಆತನನ್ನು ಆತನ ಪತ್ನಿ ಬಿಟ್ಟುಹೋಗಿದ್ದಳು. ಪತ್ನಿ ಬಿಟ್ಟು ಹೋದ ಕೆಲಸದ ನಿಮಿತ್ತ ಆತ ತನ್ನ ತಂದೆಯ ಜತೆ ವಾಸಿಸುತ್ತಿದ್ದ. ಆತನ ಖರ್ಚಿಗೆ ಆತನ ತಂದೆಯೇ ದುಡ್ಡು ಕೊಡುತ್ತಿದ್ದರು.
ಆದ್ರೆ ಕಳೆದ ಆರು ತಿಂಗಳಿಂದ ತಂದೆಯವರು ಖರ್ಚಿಗೆ ಹಣ ನೀಡುವುದನ್ನು ನಿಲ್ಲಿಸಿದ್ದಲ್ಲದೆ, ಕೆಲಸದ ನಿಮಿತ್ತ ಬೇರೆ ಕಡೆ ವಾಸಿಸುತ್ತೇನೆ ಎಂದು ಹೊರಟು ಹೋಗಿದ್ದರು. ಅವರು ಅಲ್ಲಿಯೇ ಸಂಭಾಲ್ ಎಂಬಲ್ಲಿ ಪ್ರತ್ಯೇಕವಾಗಿ ವಾಸವಾಗಿ ಇರುತ್ತಿದ್ದದ್ದು ಪುತ್ರನ ಗಮನಕ್ಕೆ ಬಂದಿತ್ತು. ಆತನಿಗೆ ತನ್ನ ತಂದೆಯ ವ್ಯವಹಾರದ ಮೇಲೆ ಅಪನಂಬಿಕೆ ಉಂಟಾಗಿತ್ತು. ಹೀಗಾಗಿ ತಂದೆಯವರ ಜೀವನ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡುವಂತೆ ಜಿಲ್ಲಾ ಪಂಚಾಯತ್ ಗೆ ಆರ್ಟಿಐ ಮೂಲಕ ಆತ ಅರ್ಜಿ ಸಲ್ಲಿಸಿದ್ದನು.
ತನಿಖೆ ನಡೆದು ತಂದೆಯ ಬಗ್ಗೆ ಮಾಹಿತಿ ಸಂಗ್ರಹ ಆಗಿತ್ತು. ಆಗ ಮಗನಿಗೆ ಆಘಾತವಾಗುವಂತಹ ವಿಚಾರ ಹೊರ ಬಿದ್ದಿದೆ.ನಡು 2016ರಲ್ಲಿ ತಾನು ಮದುವೆಯಾಗಿದ್ದ ಯುವತಿಯ ಜತೆಗೇ ತನ್ನ ತಂದೆ ಗುಟ್ಟಾಗಿ ಸಂಸಾರ ನಡೆಸುತ್ತಿದ್ದ ಅಂಶ ಬಹಿರಂಗವಾಗಿ ಮಗನಿಗೆ ಷಾಕ್ ಆಗಿದೆ.
ಇದರಿಂದ ಕೋಪಗೊಂಡ ಯುವಕ ತಂದೆ ವಿರುದ್ಧ ಬಿಸೌಲಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಗುಟ್ಟು ಗೊತ್ತಾದ ಬಳಿಕ ಯುವತಿ ಕೂಡ ತಂದೆಯ ಜೊತೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಪೊಲೀಸರೂ ಕೂಡ ವಿವಾದವನ್ನು ರಾಜಿ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಮಗನ ಮುರಿದು ಹೋದ ದಾಂಪತ್ಯವನ್ನು ಕೂಡಿಸಲು ಪ್ರಯತ್ನಿಸುವುದನ್ನು ಬಿಟ್ಟು, ಸೊಸೆಯ ಮೇಲೆ ಕಣ್ಣು ಹಾಕಿ ಆಕೆಯನ್ನು ಬುಟ್ಟಿಗೆ ಕೆಡವಿಕೊಂಡ ಆ ಪಿತ ಮಹಾಶಯನ ಮುಖಕ್ಕೆ ಅಲ್ಲಿನ ತನಿಖಾಧಿಕಾರಿಗಳು ಗಂಟಲಾಳದಿಂದ ಕ್ಯಾಕರಿಸಿ ಉಗಿದಿದ್ದರು. ಸದ್ಯಕ್ಕೆ ಆಕೆ ತಂದೆಯ ಜತೆ ಹೋಗಲಾಗದೆ, ಮಗನಿಗೆ ಮುಖ ತೋರಿಸಲಾಗದೆ ಏನೂ ನಿರ್ಧಾರಕ್ಕೆ ಬಾರಲಾಗದೆ ದೂರವೇ ಉಳಿದಿದ್ದಾಳೆ.