ಪಂಪ್ ವೆಲ್ ರಸ್ತೆಗೆ ನಳಿನ್ ಕಟೀಲ್‌ – ಸೀಸನಲ್ ಲೇಕ್ ಎಂದು ಮರು ನಾಮಕರಣ ಮಾಡಿದ ಕಟೀಲ್ ರ ಕಿಚಾಯಿಸಿದ ಸೋಶಿಯಲ್ ಮೀಡಿಯಾದ ಮಂದಿ

ಮಂಗಳೂರು ಜುಲೈ 05: ಗೂಗಲ್ ಮ್ಯಾಪ್ ನಲ್ಲಿ ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಪ್ಲೈಓವರ್ ನ ಕೆಳಗಿನ ರಸ್ತೆಯ ಹೆಸರನ್ನು ‘ನಳಿನ್ ಕಟೀಲ್‌ ಸೀಸನಲ್ ಲೇಕ್’ ಎಂದು ಬದಲಾಯಿಸಿದ ಸುದ್ದಿ ಟ್ರೋಲಿಗರ ಕೈಗೆ ಸಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ

ಮಂಗಳೂರಿನ ಹೆಸರಾಂತ ಪಂಪ್ ವೆಲ್ ಪ್ಲೈಓವರ್ ತನ್ನ ನಿಧಾನಗತಿಯ ನಿರ್ಮಾಣದಿಂದಾಗಿ ಕುಖ್ಯಾತಿ ಪಡೆದುಕೊಂಡದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಈ ಬಾರಿ ಮಳೆಗಾಲದಲ್ಲಿ ಮೊದಲ ಮಳೆಗೆ ಪಂಪ್ ವೆಲ್ ಪ್ಲೈಓವರ್ ಕೆಳ ರಸ್ತೆಯಲ್ಲಿ ನೀರು ನಿಂತು ಕೃತಕ ಕೆರೆ ನಿರ್ಮಾಣವಾಗಿ ಮತ್ತೆ ಸುದ್ದಿಯಾಗಿತ್ತು. ಈ ಸುದ್ದಿ ಟ್ರೋಲ್ ಪೇಜ್ ಗಳಲ್ಲಿ ಟ್ರೋಲ್ ಆಗಿ ಸಖತ್ ವೈರಲ್ ಆಗಿತ್ತು.

ಈಗ ಕೆಲವು ಟ್ರೋಲ್ ಪೇಜ್ ಗಳು ಗೂಗಲ್ ಮ್ಯಾಪ್ ನಲ್ಲಿ ಪಂಪ್‌ವೆಲ್ ಮೇಲ್ಸೇತುವೆಗೆ ‘ಪಂಪ್‌ವೆಲ್ – ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’ ಎಂದು ಬದಲಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ನೀರು ನಿಂತಿದ್ದ ಕೆಳ ರಸ್ತೆಯನ್ನು ನಳಿನ್ ಕಟೀಲ್‌ ಸೀಸನಲ್ ಲೇಕ್ ಎಂದು ಗೂಗಲ್ ಮ್ಯಾಪ್ ನಲ್ಲಿ ನಾಮಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

Leave A Reply

Your email address will not be published.