ಸಂಘದಲ್ಲಿ ಮಾಡಿದ ಸಾಲ ತೀರಿಸಲು ಮನೆ ದರೋಡೆ ಮಾಡಿದ |ಸಾಲ ತೀರಿಸಿ ಸೀದಾ ಕಾರಾಗೃಹ ಸೇರಿದ
ಖತರನಾಕ್ ಕಳ್ಳನ ಪ್ಲಾನ್ ನೋಡಿ ನಿಬ್ಬೆರಗಾದ ಜನತೆ

ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲವನ್ನು ತೀರಿಸಲು, ನೆರೆಮನೆಯಲ್ಲಿ ಕಳ್ಳತನ ಮಾಡಿದ್ದ ಖತರನಾಕ್ ಕಳ್ಳನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಛತ್ರದ ಹಳ್ಳಿ ನಿವಾಸಿ ಚಂದ್ರಪ್ಪ ಗಣೇಶಪ್ಪ ಬಂಧಿತ ಆರೋಪಿ. ಸಂಘದಲ್ಲಿ ಮಾಡಿದ ಸಾಲವನ್ನು ತೀರಿಸಲು ಮೈ ಬಗ್ಗಿಸಿ ದುಡಿಯುವ ಬದಲು, ತನ್ನ ನೆರೆ ಮನೆಯವರು ದೂರದೂರಿಗೆ ಹೋಗಿರುವ ವಿಷಯ ತಿಳಿದು ಮನೆ ಬೀಗ ಒಡೆದು ಅಪಾರ ಮೌಲ್ಯದ ಚಿನ್ನ ಹಾಗೂ ನಗದು ದೋಚಿದ್ದ.


ಕಳ್ಳತನದ ಬಗ್ಗೆ ನೆರೆ ಮನೆಯವರು ಪೊಲೀಸರಿಗೆ ದೂರು ನೀಡಿರುವ ವಿಚಾರ ಅರಿತಿದ್ದರೂ, ತನಗೇನೂ ಗೊತ್ತಿಲ್ಲದಂತೆ ಸಹಜವಾಗಿ ಇದ್ದ. ಆದರೆ ಇದ್ದಕ್ಕಿದ್ದಂತೆ ಸಂಘದಲ್ಲಿ ಮಾಡಿದ್ದ 60 ಸಾವಿರ ರೂಪಾಯಿ ಸಾಲವನ್ನು ಒಂದೇ ಸಲ ತೀರಿಸಿದ್ದುದರಿಂದ ಈತನ ಮೇಲೆ ಅನುಮಾನ ಬಂದು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಮಣ್ಣುತಿನ್ನುವ ಕೆಲಸ ಮಾಡಿದ್ದರು ಕೂಡಾ, ತನಗೇನೂ ಅರಿವಿಲ್ಲದಂತೆ ನಟಿಸಿದ್ದ ಚಂದ್ರಪ್ಪನ ಮೇಲೆ ಊರಿನ ಜನ ಕಿಡಿಕಾರಿದ್ದಾರೆ. ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂಬುವುದೇ ಎಲ್ಲರ ಬಯಕೆ.

Leave A Reply

Your email address will not be published.