ಮೂಗಿನಿಂದ ಹಾವು ತೂರಿಸಿ ಬಾಯಿಂದ ಹೊರಗೆ ತೆಗೆದ ವ್ಯಕ್ತಿ; ಹೌಹಾರಿದ ನೆಟ್ಟಿಗರು | Video ನೋಡಿ

ಈ ಬದುಕಿನಲ್ಲಿ ಅದೆಷ್ಟು ಥರಾವರಿ ಜನ ಇದ್ದಾರೆ, ಎಂಬುದಕ್ಕೆ ಈತ ಮತ್ತೊಂದು ಹೊಸ ಎಕ್ಸಾಂಪಲ್. ನಾವೆಲ್ಲಾ ದೂರದಿಂದ ನೋಡಲು ಭಯ ಪಡುವುದನ್ನು, ಆತ ಹೂಗಳ ಗೆ ಹಾಕಿ ಬಾಯಿಂದ ಹೊರ ತೆಗೆದಿದ್ದಾನೆ. ಬೆಚ್ಚಿ ಬೀಳಿಸುವ ಸಾಹಸಕ್ಕೆ ಕೈ ಹಾಕಿದ ಅನಾಮಧೇಯನ ಸಾಹಸವನ್ನು ವ್ಯಕ್ತಿಯೊಬ್ಬರು ತಮ್ಮ ಕೆಮರಾದಲ್ಲಿ ಸೆರೆಹಿಡಿದಿದ್ದಾರೆ.

ಈತ ತನ್ನ ಮೂಗಿನ ಒಳಗೆ ಹಾವಿನ ಮರಿಯೊಂದನ್ನು ತೂರಿಸಿಕೊಂಡು ಅದನ್ನು ಬಾಯಿಯಿಂದ ಹೊರ ತೆಗೆಯುವ ಸಾಹಸ ಮಾಡಿ ಗೆದ್ದಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಭಯದಿಂದ ತಮ್ಮ ಮೂಗಿನ ಎರಡೂ ಹೊಳ್ಳೆಗಳ ಮೇಲೆ ಬೆರಳಿಟ್ಟಿದ್ದಾರೆ !

ಈ ಸಾಹಸದ ವಿಡಿಯೋವನ್ನು ಬಾಲಿವುಡ್​ ನಟ ವಿದ್ಯುತ್​ ಜಮಾವಾಲ್​ ತಮ್ಮ ಇನ್​ಸ್ಟಾಗ್ರಾಂ ಪೇಜಿನಲ್ಲಿ ಪೋಸ್ಟ್​ ಮಾಡಿದ್ದಾರೆ. 
“ನೋಡುಗರೇ ಎರಡು ಮೂರು ಸಲ ಯೋಚನೆ ಮಾಡಿ ಏಕೆಂದರೆ ಹಾವು ಎನ್ನುವುದು ವಿಸ್ಮಯಕಾರಿ ಹಾಗೂ ಪ್ರಾಣಕ್ಕೆ ಕುತ್ತು ತರುವಂತಹ ಪ್ರಕೃತಿಯ ಒಂದು ಸೃಷ್ಟಿ. ನಿಮ್ಮ ಕೈಗೆ ಹಾವೇನಾದರೂ ಸಿಕ್ಕರೇ ತೂರಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಬೇಡಿ. ಇಂಥಾ ಸಾಹಸ ನಮ್ಮಗಳ ಕೈಯಿಂದ ಮಾಡಬಹುದೇ ಎನ್ನುವುದನ್ನು ಕಲ್ಪಿಸಿಕೊಳ್ಳಲು ಸಹ ಆಗಲ್ಲ. ಎಂದಿದ್ದಾರೆ ನಟ ವಿದ್ಯುತ್​ “. ‘ ಐ ಲವ್ ಇಂಡಿಯಾ ‘ ಎಂದು ತಲೆಬರಹ ನೀಡಿ ಹಾಕಿರುವ ಈ ವಿಡಿಯೋ ಎಲ್ಲಿಯದು, ಯಾರು ಮಾಡಿರುವುದು ಎಂಬುದನ್ನು ಮಾತ್ರ ನಟ ವಿದ್ಯುತ್​ ಹೇಳಿಲ್ಲ.

https://youtu.be/An5y_XjXjtM

ಈ ವಿಡಿಯೋಗೆ ಸಹಜವಾಗಿ ಭಾರಿ ಪ್ರಮಾಣದಲ್ಲಿ ವಿಧ ವಿಧ ಕಾಮೆಂಟ್​ಗಳು ಬಂದಿದ್ದು, ಪರ- ವಿರೋಧ ಚರ್ಚೆಗಳು ನೆಟ್ಟಿಗರ ಮಧ್ಯೆ ನಡೆಯುತ್ತಿವೆ.
ಈ ವಿಡಿಯೋವನ್ನು ಬರೋಬ್ಬರಿ 2 ಮಿಲಿಯನ್​ ಜನರು ನೋಡಿದ್ದು ಅಲ್ಲದೆ 8 ಸಾವಿರ ಕಾಮೆಂಟ್​ಗಳು ಬಂದಿವೆ.

Leave A Reply

Your email address will not be published.