ಪುಣ್ಚತ್ತಾರು : ಬೈತಡ್ಕ ಹೊಳೆಯಲ್ಲಿ ಮುಳುಗಿ ಮಗು ಮೃತ್ಯು

ಸವಣೂರು: ಪುಣ್ಚತ್ತಾರು ಎಂಬಲ್ಲಿ ಹರಿಯುವ ಬೈತ್ತಡ್ಕ ಹೊಳೆಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ.

 

ಮೂಲತಃ ಮುರುಳ್ಯ ಗ್ರಾಮದ ಪೊಗ್ಗೊಳಿನಿವಾಸಿಗಳಾದ ಪ್ರಸ್ತುತ ಪುಣ್ಚತ್ತಾರಿನಲ್ಲಿ ವಾಸಿಸುತ್ತಿರುವ ಪ್ರೇಮ-ಚಂದ್ರ ಶೇಖರ ರೈ ಅವರ ಒಂದೂವರೆ ವರ್ಷ ಪ್ರಾಯದ ಮಗು ಗ್ರೀಷ್ಮಾಳು ಹೊಳೆ ಬದಿ ನೀರಿನಲ್ಲಿ ಆಟವಾಡುತ್ತಿರುವ ವೇಳೆ ಮಗು ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನ ಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ದವಳನ್ನು ಮಗುವಿನ ತಂದೆ ಚಂದ್ರಶೇಖರ ರೈ ಹಾಗೂ ಇತರರು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 17/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave A Reply

Your email address will not be published.