ಮೋದಿಯನ್ನು ಮಣಿಸಬಲ್ಲ ಮತ್ತೊಬ್ಬ ಕ್ಯಾಂಡಿಡೇಟ್ ಸಿಕ್ಕಿಲ್ಲ | ಮೋದಿಯೇ 2024 ರಲ್ಲಿ ಪ್ರಧಾನಿ ಎಂದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

ಆತ ಜಗತ್ತು ಕಂಡ ಮಹಾನ್ ಚಕ್ರಾಧಿಪತಿ. ಆತ ಕೈ ಇಟ್ಟ ಕೆಲಸಗಳೆಲ್ಲ ಬಂಗಾರಮಯ. ಆತ ತನ್ನ 56 ಇಂಚಿನ ಎದೆ ಸೆಟೆದುಕೊಂಡು ಸುಮ್ಮನೆ ನಡೆದು ಹೋದರೆ ಸಾಕು, ಅವಕಾಶಗಳ ಬಾಗಿಲು ಆತನ ಮುಂದೆ ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. ಮಾತಿಗಿಂತಲೂ ಮೌನದಿಂದಲೇ ಆತ ಸಾಧಿಸಿದ್ದು ಹೆಚ್ಚು. ಒಂದೊಮ್ಮೆ ಮಾತಿಗೆ ನಿಂತರೆ, ವಿರೋಧಿಗಳನ್ನು ಕೂಡ ಕನ್ವಿನ್ಸ್ ಮಾಡಬಲ್ಲ ವ್ಯಕ್ತಿತ್ವ.
ತನ್ನ ಸ್ವಂತ ತಾಯಿಯನ್ನು ಕೂಡಾ ಅಧಿಕಾರದ ಅರಮನೆಗೆ ( ಪ್ರಧಾನಮಂತ್ರಿಗಳ ನಿವಾಸ) ಬಿಟ್ಟು ಕೊಳ್ಳದ ನಿಷ್ಠುರವಾದಿ.
ಆತನ ಕಟ್ಟರ್ ವಿರೋಧಿಗಳು ಕೂಡಾ, ‘ ನಾವು ಹಿಂದೆ ಅಂದುಕೊಂಡಂತೆ, ಕೆಲವು ಮಾಧ್ಯಮಗಳು ಬೊಬ್ಬೆ ಹೊಡೆದಂತೆ ಇಲ್ಲ ಈ ಮೋದಿ.’  ಎಂದು ಅವರ ಮನದಲ್ಲಿ ಮೋದಿಯೆಡೆಗೆ ಸಾಫ್ಟ್ ಕಾರ್ನರ್ ಹುಟ್ಟು ಹಾಕಿದ ಕೈ, ಬಾಯಿ, ಮೈ ಮತ್ತು ಪರಿಸರ ಶುಚಿಯಾಗಿ ಇಟ್ಟುಕೊಂಡು ಬದುಕುತ್ತಿರುವ ನರೇಂದ್ರ ದಾಮೋದರದಾಸ್ ಮೋದಿ ಬರುವ ಸಲ ಕೂಡ ಪ್ರಧಾನಮಂತ್ರಿ ಆಗುತ್ತಾರೆಯಾ ? ಇದು ಈಗ ಹುಟ್ಟಿ ನಿಂತಿರುವ ಪ್ರಶ್ನೆ.

2024ರ ಲೋಕಸಭೆ ಚುನಾವಣೆಯ ಬಗ್ಗೆ ಈಗಿನಿಂದಲೇ ಅಲ್ಲಲ್ಲಿ ಚರ್ಚೆಗಳು ಆರಂಭವಾಗಿವೆ. ಮೋದಿ ಎರಡು ಸಲ ಭಾರತದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಮುಂದಿನ ಬಾರಿಯೂ ಮೋದಿಯೇ ಪ್ರಧಾನಮಂತ್ರಿ ಆಗುತ್ತಾರಾ ? ವಯಸ್ಸಿನ ಕಾರಣ ನೀಡಿ ಮೋದಿಯನ್ನು ಹೊರಗಿಡಲಾಗುತ್ತದೆಯೇ ? ಮುಂದಿನ ಸಲ ಬಿಜೆಪಿ ಬಹುಮತ ಬರೋದಿಲ್ವಾ, ಕಾಂಗ್ರೆಸ್ ಬರ್ಬೋದಾ ಅಥವಾ ಮಿತ್ರಪಕ್ಷಗಳು ಕೈಜೋಡಿಸಿ ಬಲಿಷ್ಠ ಬಿಜೆಪಿಯನ್ನು ಸೋಲಿಸಬಹುದಾ ? ಮೋದಿ ಪ್ರಧಾನಮಂತ್ರಿ ಆಗದಿದ್ದರೆ, ಏನು ಯೋಗಿ ಇದ್ದರಲ್ವಾ- ಇಂತಹ ಹಲವು ಪ್ರಶ್ನೆಗಳು, ಆಲೋಚನೆಗಳು ಚಿಂತನೆಗಳಲ್ಲಿ ಇಡೀ ಭಾರತ ಮುಳುಗಿದೆ. ಮುಖ್ಯವಾಗಿ ಬಿಜೆಪಿ ಪಾಳಯ ಕಿಂತಲೂ ಬಿಜೆಪಿ ವಿರೋಧಿ ಬಣಗಳಲ್ಲಿ ಮತ್ತು ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಇದು ಬಹು ಚರ್ಚಿತ ವಿಷಯ.

ಕೊರೊನಾ ಬಿಕ್ಕಟ್ಟಿನಂಥ ಸವಾಲಿನ ದಿನಗಳನ್ನು ಹಾಲಿ ಪ್ರಧಾನಿ ನರೇಂದ್ರ ಮೋದಿ ಎದುರಿಸುತ್ತಿದ್ದಾರೆ. ಹೀಗಿರುವಾಗ ಅವರು ಮೂರನೇ ಬಾರಿಗೆ ಅಧಿಕಾರಕ್ಕೇರಲಿದ್ದಾರಾ? ಎರಡು ಬಾರಿ ಅಲೆಯಾಗಿ ಬೀಸಿ ಹೋದ, ಕೊರೋನಾ, ಮತ್ತೆ ಮೂರು ನಾಲ್ಕನೆಯ ಇನ್ಸ್ಟಾಲ್ ಮೆಂಟಿನಲ್ಲಿ ಬಂದು ಮೋದಿಯ ಅಲೆಯನ್ನು ಹಾಳು ಮಾಡಲಿದೆಯಾ ? ಅಥವಾ ಈಗಾಗಲೇ ಮೋದಿಯ ಅಲೆ ಪಾತಾಳಕ್ಕೆ ಕುಸಿದಿದೆಯಾ, ಅವರು ಇನ್ನೊಂದು ಬಾರಿ ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಸಿಂಹಾಸನದ ಮೇಲೆ ಕೂರಲು ಆಗುವುದಿಲ್ಲವೇ ?

ಇಂತಹ ಪ್ರಶ್ನೆಗಳ ಹೊತ್ತಿನಲ್ಲಿ, ಪ್ರಶ್ನಾ ಪ್ರವೀಣ, ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ ಮಾಡಿದ್ದಾರೆ. ಅದರ ವಿವರ ಇಲ್ಲಿದೆ.

ಏನ್ ಅಂದಿದ್ದಾರೆ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ?

2024 ರ ಚುನಾವಣೆಯನ್ನು ಈಗಿನ ವಿದ್ಯಾಮಾನದಲ್ಲಿ ನಿಂತು ನಾವು ಲೆಕ್ಕಹಾಕಲಾಗದು. ಆಗಿನ ಗ್ರಹಸ್ಥಿತಿಯೇ ನಮಗೆ  ಮುಖ್ಯ. ಆ ವರೆಗಿನ ಪ್ರಧಾನಿ ಮೋದಿಯವರ ಜಾತಕದ ಪ್ರಕಾರ ಮತ್ತೊಮ್ಮೆ ಆಯ್ಕೆ ಖಚಿತ. ಏನೇ ತಂತ್ರಗಾರಿಕೆ ಮಾಡಿದರೂ ಅವರನ್ನು ಸೋಲಿಸಲು ಕಷ್ಟವೆ.

ಮೋದಿಯವರ ಲಗ್ನ ಮತ್ತು ಚಂದ್ರ ರಾಶಿ ವೃಶ್ಚಿಕ. ಈ ರಾಶಿಗೆ ಹನ್ನೊಂದನೆಯ ಮನೆಗೆ ಗುರುವಿನ ಪೂರ್ಣ ದೃಷ್ಟಿಯ ಕಾಲ ಇದು. ಹನ್ನೊಂದನೆಯ ಮನೆಯು ರಾಜ ಪೀಠ ಕಿರೀಟ ಭಾಗ ಅಲ್ಲಿಗೆ ಗುರು ದೃಷ್ಟಿ ಇದ್ದಾಗ ಮತ್ತೊಮ್ಮೆ ಪ್ರಧಾನ ಮಂತ್ರಿ ಯೋಗ.

ಇದು ಒಂದು ಗ್ರಹಸ್ಥಿತಿಯ ಮಾನದಂಡ. ಇನ್ನೊಂದೆಡೆ ದಶೆಯೂ ಇದಕ್ಕೆ ಪೂರಕ ಆಗಿರಬೇಕು. ಪೂರಕ ಮಾರಕವೂ ಇದೆ. ಜಾತಕದಲ್ಲಿ ಅತ್ಯಂತ ಬಲಿಷ್ಟ ಯೋಗವೂ ಇರಬೇಕು. ಅಲ್ಲದೆ ಶನಿಯೂ ಬಲಿಷ್ಟನಾಗಿ ತನ್ನ ಮೂಲ ತ್ರಿಕೋಣದಲ್ಲೂ ಅಥವಾ ಮೂಲ ತ್ರಿಕೋಣ ವೀಕ್ಷಕನಾಗಿಯೂ ಇರಬೇಕು. ಮತ್ತೊಂದೆಡೆ ತಾನು ಸ್ಪರ್ಧಿಸುವ ಪಕ್ಷವೂ ಬಲಿಷ್ಟವಾಗಿರಲೇ ಬೇಕು.
ಇಂತಹ ಗೋಚರ ಗ್ರಹಸ್ಥಿತಿಯು ಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳಿಗೂ ಇರಬಾರದು ಎಂದೇನಿಲ್ಲ. ಆದರೆ ಅಂತಹ ಗ್ರಹಸ್ಥಿತಿಯ ಜತೆಗೆ ಅರ್ಹತೆಯೂ ಬೇಕಾಗುತ್ತದೆ. ಹಿಂದೆ ನಾನು ಸಂಸದೆ ಸುಮಲತಾ ಅವರಿಗೂ ಗೆಲುವಿನ ಬಗ್ಗೆ ಹೇಳಿದ್ದೆ. ಅವರ ಪ್ರತಿಸ್ಪರ್ಧಿಯ ಜಾತಕವೂ ಅಷ್ಟೇ ಬಲಿಷ್ಟವಿತ್ತು. ಆದರೆ ಯೋಗ ಪ್ರಾಪ್ತಿಯ ಕಾಲ ಮಾತ್ರ ಸುಮಲತ ಅವರಿಗೆ ಇದ್ದುದರಿಂದ ಅವರೇ ಗೆಲ್ಲುತ್ತಾರೆ ಎಂಬ ಧೈರ್ಯ ಹೇಳಿದ್ದೆ. ಇಲ್ಲಿ ಯಾವ ಮುಖಸ್ಥುತಿಯಾಗಲೀ, ಯಾವ ಪಕ್ಷದ ಪರವಾಗಲೀ, ಯಾವ ವ್ಯಕ್ತಿಯ ಅಭಿಮಾನದಿಂದಾಗಲೀ ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಜಾತಕ, ಗ್ರಹ ಗೋಚರ ಸ್ಥಿತಿಯ ಬಗ್ಗೆ ಮಾತ್ರ.

ಒಂದು ವೇಳೆ ಲಗ್ನ ಮತ್ತು ಅಥವಾ ಲಗ್ನಾಧಿಪತಿ ರಾಶ್ಯಾಧಿಪತಿ ಕುಜ ಬೇರೆ ಬೇರೆ ರಾಶಿಗತವಾಗಿದ್ದರೆ ಸ್ವಲ್ಪ ಯೋಚಿಸಬೇಕಿತ್ತು. ಆದರೆ ಮೋದಿಯವರ ಜಾತಕದಲ್ಲಿ ವೃಶ್ಚಿಕ ಲಗ್ನ, ವೃಶ್ಚಿಕ ರಾಶಿ, ವೃಶ್ಚಿಕ ಕುಜ ಇರುವುದರಿಂದ ಮತ್ತೊಮ್ಮೆ ಪ್ರಧಾನಿ ಯಾಗೋದು ಖಚಿತವೆ. ಇದು ಅಮ್ಮಣ್ಣಾಯ ಅವರ ಅಭಿಪ್ರಾಯ.

Leave A Reply

Your email address will not be published.