ನಾಳೆ, ನಾಡಿದ್ದು ಎಂದಿನ ವೀಕೆಂಡ್ ಕರ್ಫ್ಯೂ ಇರಲ್ಲ | ನಾಳಿನ ವಿಶೇಷ ಕರ್ಫ್ಯೂ ನಲ್ಲಿ ಏನಿರುತ್ತದೆ, ಏನಿರಲ್ಲ ಇಲ್ಲಿದೆ ಫುಲ್ ಡೀಟೇಲ್ಸ್ !
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಲಾಕ್ ಡೌನ್ ನಲ್ಲಿ ರಿಲೀಫ್ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ವೀಕೆಂಡ್ ಕರ್ಫ್ಯೂ ಬಗ್ಗೆ ಜನರಲ್ಲಿ ಗೊಂದಲ ಹೆಚ್ಚಾಗಿದೆ. ಈ ಬಾರಿಯ ವೀಕೆಂಡ್ ಕರ್ಫ್ಯೂ ಹಿಂದಿನ ವೀಕೆಂಡ್ ಕರ್ಫ್ಯೂ ಥರ ಇಲ್ಲ. ಇದು ಒಂದು ರೀತಿಯಲ್ಲಿ ಮಾಮೂಲಿ ದಿನದ ರೀತಿಯಲ್ಲಿ ಇರುವ ವಿಶೇಷ ಕರ್ಫ್ಯೂ. ಅದರ ಬಗ್ಗೆ ಇಲ್ಲಿದೆ ಪಕ್ಕಾ ಮಾಹಿತಿ.
ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಸ್ಪೆಷಲ್ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ.
ವಾರಾಂತ್ಯ ಕರ್ಪ್ಯೂ ಸಮಯದಲ್ಲಿ ದ.ಕ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
*ಆಹಾರ, ದಿನಸಿ, ಹಣ್ಣುಗಳು, ತರಕಾರಿಗಳ ಅಂಗಡಿಗಳು ಓಪನ್ ಇರುತ್ತದೆ.
*ಮೀನು, ಮಾಂಸ ಮಾರಾಟಕ್ಕೆ ಅವಕಾಶವಿದೆ.
*ಹಾಲಿನ ಡೈರಿ ತೆರೆದಿರುತ್ತದೆ.
*ಮೇವನ್ನು ಮಾರಾಟ ಮಾಡುವ ಅಂಗಡಿಗಳು ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸಲಾಗಿದೆ.
*ಆಸ್ಪತ್ರೆಗಳು, ಮೆಡಿಕಲ್ ಗಳು ಎಂದಿನಂತೆ ತೆರೆದಿರುತ್ತವೆ.
*ಬಾರ್ ಗಳು ತೆರೆಯಲು ಅವಕಾಶವಿಲ್ಲ.
*ಸಲೋನ್, ಬ್ಯೂಟಿಪಾರ್ಲರ್ ಮುಂತಾದ ಅಂಗಡಿಗಳು ಮುಚ್ಚಿರುತ್ತವೆ.