ಎಟಿಎಂ ನಿಂದ ಬಂದ ಹರಿದ ನೋಟುಗಳನ್ನು ಇನ್ನು ಮುಂದೆ ಬ್ಯಾಂಕುಗಳಲ್ಲಿ ಬದಲಿಸಿಕೊಳ್ಳಬಹುದು | ಹೇಗಂತ ಇಲ್ಲಿ ನೋಡಿ !

ಎಟಿಎಂಗಳಿಂದ ಹರಿದ ನೋಟುಗಳು ಸಿಗುತ್ತಿರುವುದು ಇತ್ತೀಚಿಗಿನ ಸಾಮಾನ್ಯ ಸಮಸ್ಯೆಯಾಗಿದೆ. ಹಾಗೆಯೇ ಇದೊಂದು ಗಂಭೀರ ಸಮಸ್ಯೆ ಕೂಡಾ ಹೌದು . ಈ ಸಮಸ್ಯೆಯ ಪರಿಹಾರಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಸಿಸ್ಟಮ್ ಅನ್ನು ಸಿದ್ಧಪಡಿಸಿದೆ.

ಎಟಿಎಂನಿಂದ ಹರಿದ ನೋಟುಗಳು ಸಿಕ್ಕಿದರೆ ಮೊದಲು, ಆ ನೋಟು ಯಾವ ಎಟಿಎಂನಿಂದ ಪಡೆಯಲಾಗಿದೆಯೋ ಆ ಬ್ಯಾಂಕ್ ಅನ್ನು ಸಂಪರ್ಕಿಸಿ. ಬ್ಯಾಂಕ್ ನಿಮಗೆ ಒಂದು ಫಾರ್ಮ್ ಭಾರ್ತಿ ಮಾಡಲು ಹೇಳುತ್ತದೆ. ಇದರಲ್ಲಿ ನೀವು ಎಟಿಎಂನಿಂದ ಹಣವನ್ನು ತೆಗೆದುಕೊಂಡ ದಿನಾಂಕ, ಸಮಯ ಇವುಗಳ ವಿವರವನ್ನು ಭರ್ತಿ ಮಾಡಬೇಕು. ಎಟಿಎಂನಿಂದ ಹಣ ತೆಗೆದ ಸ್ಲಿಪ್ ಇದ್ದರೆ, ಅದನ್ನು ಅಪ್ಲಿಕೇಶನ್‌ನೊಂದಿಗೆ ಲಗತ್ತಿಸಿ. ಒಂದು ವೇಳೆ ಸ್ಲಿಪ್ ಇಲ್ಲದೆ ಹೋದರೆ, ಮೊಬೈಲ್ನಲ್ಲಿ ಸ್ವೀಕರಿಸಿದ ಎಸ್ಎಂಎಸ್ ಮಾಹಿತಿಯನ್ನು ನೀಡಬೇಕಾಗುತ್ತದೆ.

ನೀವು ಈ ಅರ್ಜಿಯನ್ನು ಸಲ್ಲಿಸಿದ ಕೂಡಲೇ, ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ, ನಿಮ್ಮಿಂದ ಹರಿದ ನೋಟುಗಳನ್ನು ತೆಗೆದುಕೊಂಡು ಪ್ರತಿಯಾಗಿ ಹೊಸ ನೋಟುಗಳನ್ನು ನೀಡುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ.

ಆರ್‌ಬಿಐನ ನಿಯಮಗಳ ಪ್ರಕಾರ, ಎಟಿಎಂನಿಂದ ಹರಿದ ನೋಟು ಸಿಕ್ಕಿದರೆ ನೇರವಾಗಿ ಬ್ಯಾಂಕ್‌ಗೆ ತೆಗೆದುಕೊಂಡು ಬ್ಯಾಂಕ್ ಸಿಬ್ಬಂದಿಯಲ್ಲಿ ಹರಿದ ನೋಟು ಎಟಿಎಂನಿಂದ ಹೊರಬಂದಿದ್ದು, ಅದನ್ನು ಬದಲಾಯಿಸುವಂತೆ ಕೇಳಬಹುದು. ರಿಸರ್ವ್ ಬ್ಯಾಂಕಿನ ಎಕ್ಸ್ಚೇಂಜ್ ಕರೆನ್ಸಿ ರೂಲ್ಸ್ 2017 ರ ಪ್ರಕಾರ, ಎಟಿಎಂನಿಂದ ಹರಿದ ನೋಟ್ ಬಂದರೆ, ಆ ನೋಟನ್ನು ಬದಲಾಯಿಸಿ ಕೊಡುವುದು ಬ್ಯಾಂಕ್ ನ ಜವಾಬ್ದಾರಿಯಾಗಿದೆ.

Leave A Reply

Your email address will not be published.