ಫೋನ್ ಕಳೆದು ಹೋದರೆ ಅಥವಾ ಹಾನಿಯಾದರೆ ಅದರಲ್ಲಿರುವ ಫೋನ್ ನಂಬರ್ ಗಳನ್ನು ಪಡೆಯಲು ಏನು ಮಾಡಬೇಕು??ಇಲ್ಲಿದೆ ಕೆಲವು ಸಲಹೆಗಳು
ಫೋನ್ ಕಳೆದುಹೋದಾಗ ಅಥವಾ ಹಾನಿಗೊಳಗಾದಾಗ ಅದರಲ್ಲಿರುವ ನಮ್ಮವರ ಫೋನ್ ನಂಬರ್ ನ್ನು ಹೇಗೆ ಮರಳಿ ಪಡೆಯುವುದು ಎನ್ನುವುದೇ ದೊಡ್ಡ ಸವಾಲಾಗಿರುತ್ತದೆ. ಯಾಕೆಂದರೆ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಅಷ್ಟೂ ನಂಬರ್ ಗಳನ್ನು ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ಆದರೆ ಈಗ ಸಮಸ್ಯೆಗೂ ಪರಿಹಾರ ಇದೆ. ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಎಲ್ಲಾ ನಂಬರ್ ಗಳನ್ನು ಮತ್ತೆ ಪಡೆಯಬಹುದು.
*ಜೀಮೇಲ್ ಅಕೌಂಟ್ ಅಗತ್ಯ
ನಿಮ್ಮ ಸಂಪರ್ಕ ಸಂಖ್ಯೆಯನ್ನು ಮತ್ತೆ ಪಡೆಯಲು ಜೀಮೇಲ್ ಖಾತೆಯನ್ನು ಹೊಂದಿರಬೇಕು. ನೀವು ಒಂದು ವೇಳೆ, ಜೀಮೇಲ್ ಖಾತೆಯನ್ನು ಹೊಂದಿಲ್ಲದಿದ್ದರೆ, ಮೊದಲು ಜೀಮೇಲ್ ಖಾತೆಯನ್ನು ರಚಿಸಿ. ಇದರ ನಂತರ ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ನಿಮ್ಮ ಜೀಮೇಲ್ ಖಾತೆಗೆ ಲಾಗ್ ಇನ್ ಆಗಬೇಕು.
*ಜೀಮೇಲ್ ಕಾಂಟಾಕ್ಟ್ ಗೆ ಸಿಂಕ್ ಮಾಡಿ
ಜೀಮೇಲ್ ಕಾಂಟಾಕ್ಟ್ ಗಳನ್ನು ನಿರಂತರವಾಗಿ ಸಿಂಕ್ ಮಾಡಿ. ಇದರೊಂದಿಗೆ, ನೀವು ಸೇರಿಸುವ ಯಾವುದೇ ಹೊಸ ನಂಬರ್ ಗಳು ಫೋನ್‌ನಲ್ಲಿ ಅಪ್ ಡೆಟ್ ಆಗುತ್ತದೆ. ಇದಕ್ಕಾಗಿ ಫೋನ್‌ನ ಸೆಟ್ಟಿಂಗ್‌ಗೆ ಹೋಗಿ ಮತ್ತು ಕಾಂಟಾಕ್ಟ್ ಬ್ಯಾಕಪ್ ಆನ್ ಮಾಡಿ. ಸೆಟ್ಟಿಂಗ್‌ಗಳಲ್ಲಿ ಅಕೌಂಟ್ ಅಂಡ್ ಸಿಂಕ್ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಜೀಮೇಲ್ ಖಾತೆಯನ್ನು ಆಕ್ಟಿವೇಟ್ ಮಾಡಿ. ಇದರ ನಂತರ ನಿಮ್ಮ ಫೋನ್‌ನ ಎಲ್ಲಾ ಸಂಖ್ಯೆಗಳು ಜೀಮೇಲ್ ನಲ್ಲಿ ಬ್ಯಾಕಪ್ ಆಗುತ್ತದೆ.
*ಕಾಂಟಾಕ್ಟ್ ಗಳು ಎಲ್ಲಿ ಕಾಣಿಸುತ್ತವೆ ?
ಗೂಗಲ್ ನ ಹೋಂ ಪೇಜ್ ನ ಬಲಭಾಗದಲ್ಲಿರುವ ಜೀಮೇಲ್ ಬಳಿ ಇರುವ ಕಾಂಟಾಕ್ಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ಸ್ಕ್ರೀನ್ ಮೇಲೆ ಕಾಂಟಾಕ್ಟ್ ನಂಬರ್ ಕಾಣಿಸಲು ಆರಂಭವಾಗುತ್ತದೆ. ಈ ಎಲ್ಲಾ ನಂಬರ್ ಗಳನ್ನು ಬ್ಯಾಕಪ್ ಮಾಡಬಹುದು. ಇಲ್ಲಿ ನಿಮಗೆ ಕಾಂಟಾಕ್ಟ್ ನಬಂರ್ ಅನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುವುದು.