ಮಂಗಳೂರು, ಮೂಡಬಿದ್ರೆ | ತಡರಾತ್ರಿ 85 ಮಹಿಳೆಯರ ಸಾಗಾಟ, ಉದ್ದೇಶ ನಿಗೂಢ !

ಮಂಗಳೂರು: ವ್ಯಾಕ್ಸಿನ್ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಮಾಡಿರುವ ಭಯಾನಕ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ಇವರ ಸಾಗಾಟ ಮಾಡುತ್ತಿರುವುದಾಗಿ ಆರೋಪಿಸಲಾಗಿದ್ದು, ಆತನ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಕಾಲೇಜ್ ಬಸ್‌ನಲ್ಲಿ ಮಹಿಳೆಯರನ್ನು ತಮ್ಮ ಆಸ್ಪತ್ರೆಗೆ ಮ್ಯಾನೇಜರ್ ಕರೆದೊಯ್ಯುತ್ತಿದ್ದ. ಇನ್ಸ್‌ಪೆಕ್ಷನ್ ಮಾಡಬೇಕು ಎಂದು ಅವರಿಗೆ ಹೇಳಿ ಕರೆದುಕೊಂಡು ಹೋಗುತ್ತಿದ್ದರು. ತಡರಾತ್ರಿ ಯಾವ ವ್ಯಾಕ್ಸಿನ್ ಕೊಡುತ್ತೀರಿ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಊರಿನ ಬೇರೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಈ ಮ್ಯಾನೇಜರ್ ತಬ್ಬಿಬ್ಬಾಗಿದ್ದಾನೆ.

ವಿಚಾರಣೆ ವೇಳೆ ವ್ಯಾಕ್ಸಿನೇಷನ್ ನೆಪದಲ್ಲಿ ಮಹಿಳೆಯರ ಸಾಗಾಟ ಮಾಡುತ್ತಿರುವುದು ಬಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಂಚೂರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಬರೆದಿರುವ ಬಸ್ಸಿನಲ್ಲಿ ಮಹಿಳೆಯರನ್ನು ಸಾಗಾಟ ಮಾಡುತ್ತಿರುವುದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಸತ್ಯಾಸತ್ಯತೆ ತನಿಖೆಯಿಂದ ಬಯಲಾಗಬೇಕಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಕರಾವಳಿಗರನ್ನು ಬೆಚ್ಚಿಬೀಳಿಸಿದೆ.

Leave A Reply

Your email address will not be published.