ಭಾರತಕ್ಕೆ ಬರ್ತಿದೆ ನಾಲ್ಕನೆಯ ಲಸಿಕೆ ಮಾಡೆರ್ನಾ | ಲಸಿಕೆ ಆಮದು ಮಾಡಿಕೊಳ್ಳಲು ಭಾರತದ ಸಿಪ್ಲಾ ಕಂಪನಿಗೆ ಡಿಜಿಸಿಐ ಅನುಮತಿ
ನವದೆಹಲಿ: ಭಾರತಕ್ಕೆ ಶೀಘ್ರದಲ್ಲೇ ಮತ್ತೊಂದು ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಮಾಡೆರ್ನಾ ಕೋವಿಡ್ ಲಸಿಕೆ ಆಮದು ಮಾಡಿಕೊಳ್ಳಲು ಸಿಪ್ಲಾ ಸಂಸ್ಥೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ಆ ಮೂಲಕ ಲಸಿಕೆ ಯಾತ್ರೆಗೆ ಮತ್ತಶ್ಟು ಬಲ, ಶೀಘ್ರ ಬರಲಿದೆ. ಆ ಮೂಲಕ ದೇಶಕ್ಕೆ ಸಿಕ್ಕ ನಾಲ್ಕನೇ ಕೋವಿಡ್ ಲಸಿಕೆ ಇದಾಗಿದೆ.
ಭಾರತದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಸಂಸ್ಥೆಯ ಕೋವಿಡ್-19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ ಮಾಡರ್ನಾ ಲಸಿಕೆಯ ಆಮದು ಮತ್ತು ಮಾರುಕಟ್ಟೆ ಹಕ್ಕುಗಳಿಗಾಗಿ ದೇಶೀಯ ಔಷಧ ಕಂಪನಿ ಸಿಪ್ಲಾ ಸೋಮವಾರ ಮನವಿ ಸಲ್ಲಿಸಿತ್ತು. ಈ ಮನವಿಗೆ ಶೀಘ್ರವಾಗಿ ಸ್ಪಂದಿಸಿರುವ ಡಿಸಿಜಿಐ ಇದೀಗ ಲಸಿಕೆ ಆಮದಿಗೆ ಅನುಮತಿ ನೀಡಿದೆ.
ದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ನಿಯಂತ್ರಿತ ಬಳಕೆಗಾಗಿ ಮಾಡರ್ನಾ ಕೋವಿಡ್–19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾಗೆ ಡಿಸಿಜಿಐ ಅನುಮತಿ ನೀಡಿದೆ. ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ಹೊಸ ಔಷಧಗಳು ಮತ್ತು ಕ್ಲಿನಿಕಲ್ ಟ್ರಯಲ್ ನಿಯಮಗಳು, 2019 ರ ಅನ್ವಯ ಅನುಮತಿ ನೀಡಲಾಗಿದೆ.
ಅದರಂತೆ 18 ವರ್ಷ ಮೇಲ್ಪಟ್ಟವರಲ್ಲಿ ಮಾಡರ್ನಾ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಕೊವ್ಯಾಕ್ಸ್ ಮೂಲಕ ಭಾರತಕ್ಕೆ ಸ್ವಲ್ಪ ಪ್ರಮಾಣದ ಮಾಡರ್ನಾ ಕೋವಿಡ್–19 ಲಸಿಕೆ ಡೋಸ್ಗಳನ್ನು ಪೂರೈಸಲು ಅಮೆರಿಕ ಸರ್ಕಾರ ಸಮ್ಮತಿಸಿದೆ ಎಂದು ಜೂನ್ 27ರಂದು ಮಾಡೆರ್ನಾ ಕಂಪನಿಯು ಡಿಸಿಜಿಐಗೆ ತಿಳಿಸಿತ್ತು.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇದೀಗ ಭಾರತಕ್ಕೆ ನಾಲ್ಕನೇ ಕೋವಿಡ್ ಲಸಿಕೆ ಲಭ್ಯವಾದಂತಾಗಿದ್ದು, ದೇಶದಲ್ಲಿ ಸದ್ಯ ಆಸ್ಟ್ರಾಜೆನೆಕಾ- ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೋವಿಶೀಲ್ಡ್, ಭಾರತ್ ಬಯೋಟೆಕ್-ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗಳನ್ನು ನೀಡಲಾಗುತ್ತಿದೆ. ನಾಲ್ಕನೆಯ ಲಸಿಕೆ ಮಾರುಕಟ್ಟೆಗೆ ಲಗ್ಗೆ ಈಗ ಇಡಲಿದೆ.