ಮೀಸೆ ತೆಗೆದು ಬಿಡುವಿನ ವೇಳೆ ಸಹೋದ್ಯೋಗಿಗೆ ಕಿಸ್ ಕೊಟ್ಟು ಕಿಕ್ ಔಟ್ ಆದ ಆರೋಗ್ಯ ಮಂತ್ರಿ !!
ಬಿಡುವಿನ ಸಮಯದಲ್ಲಿ ಸಹೋದ್ಯೋಗಿಯ ಅಧರಗಳ ಮಧುರ ಸವಿಯಲು ಹೋದ ಆರೋಗ್ಯ ಸಚಿವರೊಬ್ಬರು ತನ್ನ ಪದವಿಗೆ ಸಂಚಕಾರ ತಂದುಕೊಂಡಿರುವ ಘಟನೆ ಬ್ರಿಟನ್ನಲ್ಲಿ ನಡೆದಿದೆ.
ಮ್ಯಾಟ್ ಹಾನ್ಕಾಕ್ ಕಿಸ್ ಕೊಟ್ಟ ತಪ್ಪಿಗೆ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ ಮುತ್ತು ಕೊಟ್ಟಿದ್ದಕ್ಕೆ ಈ ಶಿಕ್ಷೆಯಲ್ಲ. ಅಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಕಿಸ್ ಎಂತ ದೊಡ್ಡ ವಿಷಯ ?! ಕಿಸ್ ಮಾಡಿದ್ದನ್ನು ಸ್ವತಃ ಆ ಸಹೋದ್ಯೋಗಿ ಮಹಿಳೆಯ ಪತಿಯೆ ಕ್ಷಮಿಸಿ ಬಿಡುತ್ತಿದ್ದರೇನೋ. ಆದರೆ ಶಿಕ್ಷೆ ಆದದ್ದು ಚುಂಬನಕ್ಕಲ್ಲ. ಬದಲಿಗೆ ಕೊರೋನಾ ನಿಯಮ ಉಲ್ಲಂಘನೆ ಮಾಡಿದರು ಎನ್ನುವ ಕಾರಣಕ್ಕೆ! ಆರೋಗ್ಯ ಸಚಿವರಾಗಿದ್ದಕೊಂಡು ಮಾಸ್ಕ್ ಕಳಚಿ ಬದಿಗಿಟ್ಟು ಮುತ್ತು ನೀಡಿ ಕೊರೋನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆಪಾದನೆ. ಮತ್ತೆ ಮಾಸ್ಕ್ ತೊಟ್ಟುಕೊಂಡು ಕಿಸ್ ಮಾಡುವುದಲ್ಲಿ ಏನಿದೆ ಸೌಭಾಗ್ಯ ಅಂದುಕೊಳ್ಳಬೇಡಿ.
ಅಲ್ಲಿ ಕಚೇರಿಯಲ್ಲಿ ತಮ್ಮನ್ನು ಯಾರೂ ನೋಡುತ್ತಿಲ್ಲ ಎಂದುಕೊಂಡಿದ್ದರು ಮಂತ್ರಿಗಳು. ಆದರೆ ಸಿಸಿ ಟಿವಿ ಸೇಸಮ್ಮಕ್ಕ ಎಂಬ ಮುದುಕಿ ಗೋಡೆಗೊರಗಿ ಕೂತುಕೊಂಡು ಕಣ್ಣು ಕಿವಿ ಬಾಯಿ ತೆರೆದಿಟ್ಟು ಕಾಯುತ್ತಾ ಕೂತಿದ್ದನ್ನು ಮಂತ್ರಿಗಳು ಮರೆತು ಬಿಟ್ಟಿದ್ದರು. ಸೇಸಮ್ಮಕ್ಕನ ಬಾಯಿ ಬೊಂಬಾಯಿ. ಸುದ್ದಿ ಮೊದಲು ಕಡಲು ದಾಟಿ, ಬೊಂಬಾಯಿ ಹಾದು ಊರಿಡೀ ನಾದಲು ಶುರುಮಾಡಿದಾಗ ಮಂತ್ರಿ ರಾಜೀನಾಮೆ ಕೊಡಲೇ ಬೇಕಾಯ್ತು.
ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲರಿಗೂ ಹೇಳುವ ಆರೋಗ್ಯ ಸಚಿವರು ಹೀಗೆ ಮಾಡಿದ್ದು ತಪ್ಪು ಎನ್ನುವುದು ಇದಕ್ಕೆ ಕಾರಣ. ಈ ಸಚಿವರು ಚುಂಬಿಸಿದ ಫೋಟೋಗಳು ಅದಾಗಲೇ ವೈರಲ್ ಆಗಿದ್ದವು.
ನಂತರ ಈ ಬಗ್ಗೆ ಅವರಿಗೆ ಸಮಜಾಯಿಷಿ ಕೇಳಿದಾಗ, ಕೊರೋನಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದನ್ನು ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ ಹಾಗೂ ನಂತರ ರಾಜೀನಾಮೆ ನೀಡಿದ್ದಾರೆ. ಇವರ ಜಾಗಕ್ಕೆ ಪಾಕಿಸ್ತಾನದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈ ವಿಷಯವನ್ನು ಅವರೇ ಬಹಿರಂಗವಾಗಿ ಒಪ್ಪಿಕೊಂಡಿರುವ ಕಾರಣ, ಸಂಪುಟದಿಂದಲೇ ಕಿಕ್ ಔಟ್ ಆಗಬೇಕಾಯಿತು. ಇದೀಗ ಕಿಸ್ ಮಾಡಿದ ತಪ್ಪಿಗೆ ತುಟಿ ಕಚ್ಚಿಕೊಳ್ಳುವಂತಾಗಿದೆ ಮಹಾ ಮಂತ್ರಿಗಳು!!