ಸತ್ತು ಹೋದ 20 ನಿಮಿಷದ ನಂತರ ಪರಲೋಕ ಕಂಡು ಬದುಕಿ ಬಂದವನೀತ | ಸಾವಿನಾಚೆಯಾ ಲೋಕ ಹೇಗಿತ್ತಂತೆ ಗೊತ್ತಾ ?!
ಸಾವಿನ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನಾಗುತ್ತದೆ? ಎರಡನೇ ಜನ್ಮ (Second Life) ಸಿಗುತ್ತದೆಯೇ? ಮರಣದ ನಂತರದ ಪ್ರಯಾಣವನ್ನು ಜನ್ಮ ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ?
ಇಂತಹ ಪ್ರಶ್ನೆಗಳು ಶತಶತಮಾನಗಳಿಂದ ಮನುಷ್ಯನನ್ನು ಕಾಡಿದೆ. ಈವರೆಗೂ ಅದಕ್ಕೆ ಉತ್ತರ ಕಂಡುಕೊಳ್ಳಲು ಆಗಿಲ್ಲ. ಸತ್ತು ಹೋದ ವ್ಯಕ್ತಿ ಮತ್ತೆ ಬದುಕಿ ಬಂದರೆ ಮಾತ್ರ ಆತ ಆ ಲೋಕದ ಕಥೆಯನ್ನು ನಮಗೆ ಹೇಳಬಲ್ಲ.
ಹಾಗಿರುವಾಗ ಇಲ್ಲೊಬ್ಬ ಸಾವಿನ ನಂತರ ಏನಾಯಿತೆಂದು ನೆನಪಿಟ್ಟುಕೊಂಡು, ಸಾವಿನಿಂದ ವಾಪಸ್ ಬದುಕಿನ ಲೋಕಕ್ಕೆ ಬಂದು ಹೇಳುತ್ತಿದ್ದಾನೆ. ಇಲ್ಲಿಯವರೆಗೆ ಯಾರೂ ಉತ್ತರಿಸಲು ಸಾಧ್ಯವಾಗದ್ದನ್ನು ಈತ ಸಾಧ್ಯ ಮಾಡಿದ್ದಾನೆ. ಹಾಗಂತ ಆತ ಹೇಳುತ್ತಿದ್ದಾನೆ. ಆ ಓರ್ವ ವ್ಯಕ್ತಿ ತನ್ನ ಸಾವಿನಾಚೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಾವು ಸಂಭವಿಸಿದ 20 ನಿಮಿಷಗಳ ಬಳಿಕ ತಾನು ಮತ್ತೆ ಜೀವ ಪಡೆದದ್ದಾಗಿ ಆತ ಹಕ್ಕು ಮಂಡಿಸಿರುವ ಈ 60 ವರ್ಷ ವಯಸ್ಸಿನ ವ್ಯಕ್ತಿ ಸ್ಕಾಟ್ ಡ್ರೂಮೊಂಡ್. ಆತನ 28ನೇ ವಯಸ್ಸಿನಲ್ಲಿ ತಮ್ಮ ಸಾವು ಸಂಭವಿಸಿತ್ತು. ಮತ್ತು ಆತ ಕೇವಲ 20 ನಿಮಿಷಗಳವರೆಗೆ ಮಾತ್ರ ಸತ್ತು ಬೇರೆ ಲೋಕದಲ್ಲಿದ್ದ ಎಂದು ಹೇಳಿದ್ದಾರೆ. 20 ನಿಮಿಷಗಳ ಬಳಿಕ ಪುನಃ ತಮ್ಮ ಪ್ರಾಣ ಮರಳಿ ದೇಹ ಸೇರಿತ್ತು ಎಂದು ಆತ ಹೇಳಿದ್ದಾರೆ. ಅಂದರೆ 20 ನಿಮಿಷಗಳ ಬಳಿಕ ತಮ್ಮ ಆತ್ಮ ಪುನಃ ತಮ್ಮ ಶರೀರಕ್ಕೆ ಮರಳಿತ್ತು ಎಂದು ಅವರು ಹೇಳಿದ್ದಾರೆ.
ವಾಪಸ್ ಕಳುಹಿಸಿಕೊಟ್ಟ ದೇವರು
ಸ್ಕಾಟ್ ಡ್ರಮ್ಮಂಡ್ ಅವರು 28 ವರ್ಷ ವಯಸ್ಸಿನವರಾಗಿದ್ದಾಗ, ಸ್ಕೈಯಿಂಗ್ ಮಾಡುವಾಗ ಅವರಿಗೆ ಅಪಘಾತ ಸಂಭವಿಸಿ ತೀರಿಕೊಂಡಿದ್ದರು. ಈ ಅಪಘಾತದಲ್ಲಿ ಅವನ ಕೈಯ ಹೆಬ್ಬೆರಳು ಮುರಿದಿದ್ದವು. ಆಪರೇಷನ್ ಸಮಯದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಆ ವೇಳೆ ನಾವು ನರ್ಸ್ ಓಡಿ ಹೋಗಿ ವೈದ್ಯರನ್ನು ಕರೆತರುವುದನ್ನು ಆಲಿಸಿದ್ದಾರೆ ಮತ್ತು ಘಟನೆಯ 20 ನಿಮಿಷಗಳ ಬಳಿಕ ತಮಗೆ ಜೀವ ಬಂದಿರುವುದಾಗಿ ಹೇಳುತ್ತಾರೆ.
ಎರಡನೇ ಬಾರಿಗೆ ಜೀವ ಬಂದಾಗ ತಾವು ಎರಡನೇ ವಿಶ್ವದ ಪ್ರಯಾಣ ಮಾಡಿರುವುದಾಗಿ ಸ್ಕಾಟ್ ಹೇಳುತ್ತಾರೆ. ಇನ್ನೂ ನಿಮ್ಮ ಸಮಯ ಬಂದಿಲ್ಲ ಎಂದು ದೇವರು ಅವರಿಗೆ ಹೇಳಿ ವಾಪಸ್ ಕಳುಹಿಸಿದ್ದಾರೆ ಎಂದು ಸ್ಕಾಟ್ ಹೇಳುತ್ತಾರೆ.
ಸಾವಿನ ಬಳಿಕ ಏನಾಗಿದೆ?
Prioritize Your Life ಪತ್ರಿಕೆಯ ಜೊತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿರುವ ಸ್ಕಾಟ್, ಮೊಟ್ಟಮೊದಲ ಬಾರಿಗೆ ಜಗತ್ತಿಗೆ ಸಾವಿನ ಬಳಿಕ ಏನಾಗುತ್ತದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ತಮ್ಮ ಪತ್ನಿ ಹಾಗೂ ಸ್ನೇಹಿತರ ಜೊತೆಗೆ ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಸ್ಕಾಟ್, “ನನ್ನ ಸಾವಿನ ಕುರಿತು ನರ್ಸ್ ಕಿರುಚುತ್ತಿರುವುದನ್ನು ಕೇಳಿದೆ, ಅದಾದ ಬಳಿಕ ನನ್ನ ಹತ್ತಿರದಲ್ಲಿ ಒಂದು ಅದೃಶ್ಯ ಶಕ್ತಿ ಇರುವುದನ್ನು ನಾನು ಅನುಭವಿಸಿದೆ. ಆ ಅದೃಶ್ಯ ಶಕ್ತಿ ಕಣ್ಣು ಪಿಳುಕಿಸುವುದರಲ್ಲಿ ನನ್ನನ್ನು ಒಂದು ಸುಂದರ ಮೈದಾನಕ್ಕೆ ತೆಗೆದುಕೊಂಡು ಹೋಯಿತು. ಬಳಿಕ ನಾನು ಆ ಅದೃಶ್ಯ ಶಕ್ತಿಯನ್ನು ಹಿಂಬಾಲಿಸಿದೆ. ಆ ಸುಂದರ ಮೈದಾನದಲ್ಲಿ ಬಣ್ಣಬಣ್ಣದ ಹೂವುಗಳಿದ್ದವು. ಸೊಂಟೆತ್ತರಕ್ಕೆ ಬೆಳೆದ ಹುಲ್ಲಿತ್ತು. ಬಿಳಿ ಬಣ್ಣದ ಆಗಸ ನನ್ನನ್ನು ಸ್ಪರ್ಶಿಸುತ್ತಿತ್ತು. ಆದರೆ, ಆ ಅದೃಶ್ಯ ಶಕ್ತಿ ನನಗೆ ಹಿಂತಿರುಗಿ ನೋಡದಿರಲು ಹೇಳಿತ್ತು. ತಮ್ಮ ಬಲಭಾಗದಲ್ಲಿ ನೀಳವಾಗಿ ಬೆಳೆದ ಸುಂದರ ಮರಗಳಿದ್ದವು. ಆ ಮರಗಳನ್ನು ನಾನು ಹಿಂದೆಂದು ನೋಡಿರಲಿಲ್ಲ. ಇನ್ನೊಂದೆಡೆ ಸುಂದರವಾದ ಹೂವುಗಳಿದ್ದವು. ಇಂದಿಗೂ ಕೂಡ ನನಗೆ ಆ ಹೂವುಗಳು ನೆನಪಿವೆ ಮತ್ತು ಆ ಎರಡನೇ ಪ್ರಪಂಚ (Second World) ತುಂಬಾ ಶಾಂತವಾಗಿತ್ತು’ ಎಂದಿದ್ದಾರೆ.
ಪುನಃ ಜೀವ ಬಂದಿದ್ದಾದರೂ ಹೇಗೆ?
‘ಅದೃಶ್ಯ ಶಕ್ತಿಯ ಹೇಳಿಕೆಯ ಮೇರೆಗೆ ನಾನು ಮೋಡಗಳತ್ತ ಪ್ರಯಾಣ ಬೆಳೆಸಿದ್ದೆ. ಆದರೆ, ಏತನ್ಮಧ್ಯೆ ಯಾರೋ ನನ್ನ ಕೈ ಹಿಡಿದು ಇನ್ನೂ ನಿನ್ನ ಸಮಯ ಬಂದಿಲ್ಲ ಎಂದು ಹೇಳಿದರು. ನೀನು ಮಾಡಬೇಕಾಗಿರುವುದು ಸಾಕಷ್ಟಿದೆ. ಈ ಧ್ವನಿ ಕೇಳಿದ ಬಳಿಕ ಪುನಃ ನಾನು ನನ್ನ ಶರೀರಕ್ಕೆ ಮರಳಿದೆ’ ಎಂದು ಸ್ಕಾಟ್ ಹೇಳಿದ್ದಾರೆ. ಸ್ಕಾಟ್ ತಾವು 20 ನಿಮಿಷಗಳ ಕಾಲ ಮೃತಪಟ್ಟಿರುವುದಾಗಿ ಹೇಳುತ್ತಾರೆ. ಈ ಘಟನೆಯ ಬಳಿಕ ಜೀವನದ ಪ್ರತಿ ತಮ್ಮ ದೃಷ್ಟಿಕೊನವೇ ಬದಲಾಯಿತು ಎಂದು ಸ್ಕಾಟ್ ಹೇಳುತ್ತಾರೆ.
ಆದರೆ ಮನಶಾಸ್ತ್ರಜ್ಞರ ಪ್ರಕಾರ ಒಂದು ಸಲ ಸತ್ತು ಹೋದ ಮೇಲೆ ವಾಪಸ್ಸು ಜೀವ ಬರುವುದು ಅಸಾಧ್ಯ. ವ್ಯಕ್ತಿ ಇದೀಗ ತಾನು ಸತ್ತು ಹೋಗಿ ವಾಪಸ್ಸು ಬಂದು ಅಲ್ಲಿ ನಡೆದದ್ದನ್ನೆಲ್ಲ ವಿವರಿಸುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಚಿತ್ತವಿಕಲತೆ ಅಥವಾ ನಂಜು ಎಂದು ಕರೆಯುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಶೃತಿ ಹೀನ ಸ್ಥಿತಿಯಲ್ಲಿ ಇಂತಹ ಅನುಭವಗಳು ಆಗುತ್ತವೆ ಎನ್ನುವುದು ವೈದ್ಯಲೋಕದ ಹೇಳಿಕೆ.