ಬೆಳ್ತಂಗಡಿ, ಧರ್ಮಸ್ಥಳ | ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪಿಗ್ಮಿ ಕಲೆಕ್ಟರ್

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಇಂದು ಸಂಜೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಜಗದೀಶ್ ಭಟ್ (39) ಎಂದು ಗುರುತಿಸಲಾಗಿದೆ.

ಧರ್ಮಸ್ಥಳದ ವಾಸಿಯಾಗಿರುವ ಜಗದೀಶ್ ಭಟ್ ಅವರು ವೃತ್ತಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದರು. ಅಲ್ಲದೆ ಅವರು ಕನ್ಯಾಡಿಯಲ್ಲಿ ವಾಹನ ವಾಯುಮಾಲಿನ್ಯ ತಪಾಸಣಾ ಕೇಂದ್ರವನ್ನು ತೆರೆದಿದ್ದರು.

ಮೃತರ ತಂದೆಯವರು ಹಿರಿಯ ಬಿಜೆಪಿ ಕಾರ್ಯಕರ್ತರಾಗಿದ್ದು, ಅವರು ಅಯೋಧ್ಯೆಯಲ್ಲಿ ರಾಮಮಂದಿರ ಕರಸೇವೆಯಲ್ಲಿ ಭಾಗವಹಿಸಿದ್ದರು. ಅವರು, ಉಜಿರೆಯ ಎಸ್ ಡಿ ಎಂ ಹೈಸ್ಕೂಲ್ ನಲ್ಲಿ ವೃತ್ತಿಯಲ್ಲಿರುವ ಪತ್ನಿ ಇಬ್ಬರು ಮಕ್ಕಳನ್ನು (12 ವ, 3 ವ) ಅಗಲಿದ್ದಾರೆ.

ಹಣದ ವ್ಯವಹಾರ, ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮೃತ ಜಗದೀಶ್ ಭಟ್ ಅವರು ಆನ್ ಲೈನ್ ಜುಗಾರಿ ಆಡುತ್ತಿದ್ದರು ಎನ್ನಲಾಗಿದೆ. ಒಂದೊಮ್ಮೆ ಕೋಟ್ಯಂತರ ರೂಪಾಯಿ ಅದರಿಂದ ಸಂಪಾದಿಸಿದ್ದ ಅವರು, ನಂತರ ಎಲ್ಲವನ್ನೂ ಕಳಕೊಂಡಿದ್ದರು. ಈಗ ತಲೆಯೇರಿ ಕುಳಿತಿತ್ತು. ಅಷ್ಟು ಸಾಲ ಮಾಡಿ ಕೊಂಡಿದ್ದರು. ಹಲವರು ಸಾಲ ತೀರಿಸುವಂತೆ ಪೀಡಿಸುತ್ತಿದ್ದರು. ಅಲ್ಲದೆ ಕ್ಲೀನ್ ವ್ಯವಹಾರಸ್ತ ಎಂದು ನಂಬಿಕೆ ಇರುವ ಸಜ್ಜನ ಜಗದೀಶ್ ಭಟ್ ಬಳಿ ಹೆಚ್ಚಿನವರು ಪಿಗ್ಮಿ ಹಾಕುತ್ತಿದ್ದರು. ಇದೀಗ ಡೈಲಿ ಪಿಗ್ಮಿಯ ಹಣವನ್ನು ಕೂಡಾ ತನ್ನ ಸಾಲಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಸಾಲದ ಶೂಲವೆ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

Leave A Reply

Your email address will not be published.