ರಕ್ತದಾನ -ಜೀವದಾನ |ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ
ಪಂಜ: ರಕ್ತ ದಾನ ಮಹಾ ದಾನ ಎಂಬ ಆಶಯ ದೂಂದಿಗೆ ಪಂಚಶ್ರೀ ಪಂಜ ಸ್ಪೋರ್ಟ್ ಕ್ಲಬ್ ಹಾಗೂ ಅಕ್ಷಯ ಚಾರಿಟಿ ಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ತುಳುನಾಡಿನ ಹಿರಿಮೆಯೇ ಅದ್ಬುತ. ಯಾವುದೇ ತುರ್ತು ಸಂದರ್ಭದಲ್ಲಿ ಅಪತ್ಕಾಲದಲ್ಲಿರುವವರಿಗೆ ಅಥವಾ ವಿವಿಧ ಆಸ್ಪತ್ರೆ ಗಳಿಂದ ಬರುವ ರಕ್ತದ ಬೇಡಿಕೆಗೆ ತಕ್ಷಣ ಸ್ಪಂದಿಸಿ ರಕ್ತದಾನವೆಂಬ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡು ಯಾವುದೇ ಸಮಯದಲ್ಲೂ ನೆರವಾಗುವ ಆಪದ್ಬಾಂಧವ ಯುವ ಜನತೆಗೆ ಒಂದು ಸಲಾಂ.
ಲೋಕದೆಲ್ಲೆಡೆ ಕೋರೊನಾ ಎಂಬ ಮಹಾಮಾರಿ ಆಕ್ರಮಿಸಿರುವ ಈ ಸಂದರ್ಭದಲ್ಲಿ ಅದೆಷ್ಟೋ ರೋಗಿಗಳು ಒಂದು ಹನಿ ರಕ್ತಕ್ಕಾಗಿ ಪರಿತಪಿಸುವ ಸಮಯದಲ್ಲಿ, ತಾಲೂಕಿನ ರಕ್ತದಾನಿಗಳ ಸಹಕಾರದಿಂದ ಮಹಾರಕ್ತದಾನ ಶಿಬಿರ ಯಶಸ್ವಿಯಾಗಿ ಅಯೋಜನೆಗೊಂಡಿತು.
ಕ್ರೀಡೆಗೂ ಸಿದ್ದ,ಸಮಾಜಸೇವೆಗೂ ಬದ್ದ ಎಂಬ ಮಾತಿಗೆ ತಕ್ಕಂತೆ ನಡೆವ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ.)
ನೇತೃತ್ವದಲ್ಲಿ ಹಾಗೂ ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ . ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವೆಲ್ಲದರ ಸಹಯೋಗದಲ್ಲಿ ಇಂದು 27/06/2021 ರಂದು ಗ್ರಾಮ ಪಂಚಾಯತ್ ಸಭಾಂಗಣ ಪಂಜದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಶಿಬಿರದಲ್ಲಿ 101 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಗಳಾಗಿದ್ದಾರೆ.
ಶಿಬಿರವನ್ನು ಪಂಜ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಇವರು ಉದ್ಘಾಟಿಸಿದರು. ಪಂಜ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಪದ್ಮಯ್ಯ ಕೆ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್® ಇದರ ಅಧ್ಯಕ್ಷರಾದ ಚಂದ್ರಶೇಖರ್ ಕರಿಮಜಲು, ಕಾರ್ಯದರ್ಶಿ ದಾಮೋದರ ನೇರಳ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ಇಬ್ರಾಹಿಂ ಕರೀಂ ಕೆದ್ಕಾರ್,ಝಕರಿಯಾ ನಾರ್ಷ ಅಧ್ಯಕ್ಷರು ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ
ಆಸಿಫ್ ಕೈೂಲ, ರಿಯಾಝ್ ನೆಕ್ಕಿಲ ಮತ್ತು
ಯುವ ತೇಜಸ್ಸು ರಕ್ತನಿಧಿಯ ಜನಾರ್ಧನ ನಾಗತೀರ್ಥ ಉಪಸ್ಥಿತರಿದ್ದರು ಬಿಪಿನ್ ಸಂಕಡ್ಕ ಸ್ವಾಗತಿಸಿ ಸಂದೀಪ್ ಪಲ್ಲೋಡಿ ವಂದನಾರ್ಪಣೆಗೈದರು.