ಕೊರೋನಾ ಬಾಧಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಸಂಕಷ್ಟದಿಂದ ತತ್ತರಿಸಿರುವ
ಕ್ಷೇತ್ರಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಿರುವ ಕೇಂದ್ರ ಸರ್ಕಾರ ಕೊರೋನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಅನುದಾನ ಘೋಷಣೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘8 ಘೋಷಣೆಗಳಲ್ಲಿ 4 ಹೊಸ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದರು. ಕೊರೋನಾ ಬಾಧಿತ ವಲಯಕ್ಕೆ 1.1ಲಕ್ಷ ಕೋಟಿ ರೂ. ಘೋಷಿಸಲಾಗಿದೆ. ವೈದ್ಯಕೀಯ ಮೂಲಸೌಕರ್ಯಕ್ಕೆ 50 ಸಾವಿರ ಕೋಟಿ ಹಾಗೂ ಉಳಿದ ವಲಯಗಳಿಗೆ 60 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು.

ಕಳೆದ ವರ್ಷ ಘೋಷಿಸಿದ್ದ ತುರ್ತು ಕ್ರೆಡಿಟ್ ಲಿಂಕಿಂಗ್ ಸ್ಕೀಮ್ ಗೆ 1.5 ಲಕ್ಷ ಕೋಟಿ ಹೆಚ್ಚುವರಿ ಘೋಷಣೆ ಮೂಲಕ ಒಟ್ಟು 4.5 ಲಕ್ಷ ಕೋಟಿ ಅನುದಾನ ಘೋಷಿಸಲಾಗಿದೆ. ಶೇ.7.95ರ ಬಡ್ಡಿದರದಲ್ಲಿ 8 ಮಹಾನಗರ ಹೊರತುಪಡಿಸಿ ಉಳಿದೆಡೆ ಆರೋಗ್ಯ ಸೌಕರ್ಯಕ್ಕೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

ಪೋಷಣೆಯ ಪ್ರಮುಖ ಅಂಶಗಳು ಇಂತಿವೆ:

*25 ಲಕ್ಷ ಜನರಿಗೆ ಮೈಕ್ರೋ ಫೈನಾನ್ಸ್ ಮೂಲಕ ಸಾಲ ಹಾಗೂ ಸಾಲ ಮರುಪಾವತಿಗೆ 3 ವರ್ಷ ಅವಕಾಶ

*ಬ್ಯಾಂಕೇತರ ಸಂಸ್ಥೆ ಮೂಲಕ ತಲಾ 1.25 ಲಕ್ಷದವರೆಗೂ ಸಾಲ ಒದಗಿಸಲು ನಿರ್ಧಾರ

*ಟೂರಿಸ್ಟ್ ಏಜನ್ಸಿಗಳಿಗೆ 10 ಲಕ್ಷದವರೆಗೆ ಸಾಲ

*ಎಂಸಿಎಲ್ಆರ್ ಹೆಚ್ಚುವರಿ ಸಾಲ ಜೊತೆ ಶೇ.2ರಷ್ಟು ಬಡ್ಡಿದರದಲ್ಲಿ 5,00,000 ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ

*ನೋಂದಾಯಿತ ಟೂರಿಸ್ಟ್ ಗೈಡ್ ಗಳಿಗೂ ನೆರವು ನೀಡಲಾಗುತ್ತಿದ್ದು, 1 ಲಕ್ಷದವರೆಗೆ ಸಾಲ

*ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ

Leave A Reply

Your email address will not be published.