ಕಡಬ : ಅಕ್ಷರ ದಾಸೋಹ ನೌಕರರ ಪ್ರತಿಭಟನೆ | ಕನಿಷ್ಟ ವೇತನಕ್ಕೆ ಆಗ್ರಹ, ಬಾಕಿ ವೇತನ ಪಾವತಿ ಮಾಡಿ-ಬಿ.ಎಂ ಭಟ್

ಕಡಬ: ರಾಜ್ಯ ಸರ್ಕಾರ ಬಿಸಿಯೂಟ ನೌಕರರಿಗೆ ಬದುಕಲು ತಕ್ಕುದಾದ ವೇತನವನ್ನು ನೀಡದೆ ಶೋಷಿಸುತ್ತಿರುವುದು ಖಂಡನೀಯ ಎಂದು ಹಿರಿಯ ಕಾರ್ಮಿಕ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.

ಅವರು ಸೋಮವಾರ ಕಡಬ ತಾಲೂಕು ಕಚೇರಿ ಮುಂಬಾಗ ಕಡಬ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಅಗತ್ಯ ವಸ್ತುಗಳ ದರ ವಿಪರೀತ ಏರಿಕೆಯಾಗಿರು ಈ ಸಂದರ್ಭದಲ್ಲಿ ಬಿಸಿಯೂಟ ನೌಕರರಿಗೆ ಸರ್ಕಾರ 5 ವರ್ಷಗಳ ಹಿಂದೆ ನಿಗದಿಪಡಿಸಿದ ಮಾಸಿಕ ರೂ 2500 ರಷ್ಟು ವೇತನ ಈಗಲೂ ಮುಂದುವರಿಯುತ್ತಿದೆ. ಅಕ್ಷರ ದಾಸೋಹ ನೌಕರರಿಗೆ ಮಾಸಿಕ ರೂ 15,000 ವೇತನ, ಕೆಲಸದ ಭದ್ರತೆ, ವಿಮೆ, ಪಿಂಚಿಣಿ ಮೊದಲಾದ ಸೇವಾ ನಿಯಮಾವಳಿ ಜಾರಿಗೊಳಿಸಬೇಕು. 202-21 ನೇ ಸಾಲಿನಲ್ಲಿ ಪಾವತಿಯಾಗದೆ ಬಾಕಿಯಾಗಿರುವ ವೇತವನ್ನು ತಕ್ಷಣ ನೀಡಬೇಕು. 10,000 ಕೊರೋನಾ ಪ್ಯಾಕೇಜು ನೀಡಬೇಕು, ಕೊರೊನಾ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಬೇಕು ಎಂದು ಆಗ್ರಹಿಸಿದರು. ಸಂಘದ ಮುಖಂಡರುಗಳಾದ ಮೀನಾಕ್ಷಿ ನೂಜಿಬಾಳ್ತಿಲ, ಕಾರ್ಮಿಕ ಮುಖಂಡರುಗಳಾದ ರಾಮಚಂದ್ರ, ಗಣೇಶ ಪ್ರಸಾದ, ವಿದ್ಯಾರ್ಥಿ ನಾಯಕ ವಿನುಶರಮಣ ಮೊದಲಾದವರು ಇದ್ದರು. ಪ್ರತಿಭಟನೆ ಬಳಿಕ ಕಡಬ ತಹಶೀಲ್ದಾರ್ ಅನಂತ ಶಂಕರ ಮುಖಾಂತರ ರಾಜ್ಯ ಮುಖ್ಯ ಮಂತ್ರಿಗಳಿಗೆ ಮನವಿ ನೀಡಲಾಯಿತು. ಸಂಘದ ತಾಲೂಕು ಅದ್ಯಕ್ಷೆ ರೇವತಿ ಸ್ವಾಗತಿಸಿದರು. ಕಾರ್ಯದರ್ಶಿ ನಳಿನಿ ವಂದಿಸಿದರು.

Leave A Reply

Your email address will not be published.