ಜನರಿಂದಲೇ ನಿರ್ಮಾಣವಾಯಿತು ಗ್ರಾಮ ಸೇತು
ಸುಳ್ಯ / ಗುತ್ತಿಗಾರು ಗ್ರಾಮದ ಮೋಗ್ರ ಎಂಬ ಪುಟ್ಟ ಹಳ್ಳಿಯ ವ್ಯಾಪ್ತಿಗೆ ಸೇರಿದ ಕಮೀಲ , ಎರಣಗುಡ್ಡೆ, ಮೆಲ್ಕಾಜೆ, ಬಳ್ಳಕ್ಕ ಸೇರಿದಂತೆ ಒಂದೆರಡು ಪುಟ್ಟ ಊರು ಗಳು ಬರುತ್ತದೆ. ಇಲ್ಲಿನ ಮತದಾನ ಕೇಂದ್ರವು ಮೊಗ್ರ ಶಾಲೆಯಾಗಿದೆ. ಆದರೆ ಕಳೆದ ವರ್ಷಗಳಿಂದ ಇಲ್ಲಿಗೆ ಸರಿಯಾದ ಸಂಪರ್ಕದ ವ್ಯವಸ್ಥೆ ಇರಲ್ಲಿಲ್ಲ. ಮೊಗ್ರಾ ಪ್ರದೇಶದಲ್ಲಿ ಶಾಲೆ, ಆರೋಗ್ಯ ಉಪ ಕೇಂದ್ರ, ಅಂಗನವಾಡಿ, ದೇವಸ್ಥಾನ, ಭಜನಾ ಮಂದಿರಕ್ಕೆ ಸಂಪರ್ಕ ಕಲ್ಪಿಸಲು ಕಷ್ಟಕರವಾಗಿದೆ. ಈ ಹೊಳೆಗೆ ಇದುವರೆಗೂ ಸಂಪರ್ಕ ಸೇತುವೆ ಆಗಿಲ್ಲ . ಇದೀಗ ಊರಿನ ಜನರು ಜನರೇ ಜನರಿಗೆಗಾಗಿ ಗ್ರಾಮ ಸೇತು ಎಂಬ ಕಿರು ಸೇತುವೆ ನಿರ್ಮಿಸಿದ್ದಾರೆ.
ಜನಪ್ರತಿನಿಧಿಗಳ ಭರವಸೆ ಗಳು ಕೂಡ ಕೊನೆಗೆ ಕನಸು ಮಾತ್ರ
ಜನರ ಮನವಿಗೆ ಪಂಚಾಯತ್ ವತಿಯಿಂದ ಅಡಿಕೆ ಮರದ ಕಾಲು ಸಂಕ
ಜನರಿಂದ ಜನರಿಗೆ ಗ್ರಾಮ ಸೇತುವೆ ಯೋಜನೆ
ದ್ವಿಚಕ್ರ ವಾಹನ ಸಹಿತ ಊರಿನ ಜನರು ಭದ್ರತೆಯಿಂದ ನಡೆದಾಡುವಂತೆ ಮಾಡಲು ಯೋಜನೆ ರೂಪಿಸಿದ್ದಾರೆ. ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ಪುತ್ರ ಪಂತಜಲಿ ಭಾರದ್ವಾಜ್ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನಗಳು ಓಡಲು ಸಾಧ್ಯವಾಗುವಂತೆ ಕಬ್ಬಿಣ ಕಾಲು ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ಪಕ್ಷ ಜಾತಿ ಮತ ಧರ್ಮ ಬೇಧ ಭಾವ ಇಲ್ಲದೆ ಬೆಂಬಲ
ಮೊಗ್ರದ ಗ್ರಾಮ ಭಾರತ ತಂಡದ ಯುವಕರು ಮತ್ತು ಪ್ರಮುಖರು ಸೇರಿಕೊಂಡು ಶ್ರಮದಾನದ ಮೂಲಕ ಸೇತುವೆ ಕೆಲಸ ಪೂರ್ಣಗೊಳ್ಳುತ್ತಿದೆ. ಸಮಾನ ಮನಸ್ಕರಾದ ಯುವಕರು ಮತ್ತು ಸ್ಥಳೀಯರು ಉತ್ಸಾಹದಿಂದ ಕೆಲಸ ಮಾಡುತ್ತಿದೆ ಹಾಗೂ ಊರ ಮತ್ತು ಪರ ಊರ ದಾನಿಗಳ ಸಹಕಾರದಿಂದ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿಯಾಗಿದೆ ಎಂದು ಶ್ರೀ ಮಹೇಶ್ ಪುಚಪಾಡಿ ಹೇಳಿದರು. ಜಾತಿ ಧರ್ಮ ಭೇದ ವಿಲ್ಲದೆ ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಿದರು. ಅದರಲ್ಲೂ ಗುತ್ತಿಗಾರು ಚರ್ಚಿನ ಧರ್ಮಗುರು ಫಾ. ಆದರ್ಶ್ ಜೋಸೆಫ್ ಊರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಊರವರೊಂದಿಗೆ ಸೇತುವೆ ಕೆಲಸಕ್ಕೂ ಕೈಜೋಡಿಸಿದರು.ಮೊಗ್ರದ ಜನರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ.