ಬೆಳ್ತಂಗಡಿ | ತಾಲೂಕಿನ ವಿವಿಧ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನಾಳೆ ಕೊರೋನ ಲಸಿಕಾ ಅಭಿಯಾನ

18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಳೆ ದಿನಾಂಕ 28/06/2021 ಸೋಮವಾರ ವ್ಯಾಕ್ಸಿನ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಕೆಳಗೆ ಹೆಸರಿಸಿರುವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯಾಯ ಕಾಲೇಜಿನಲ್ಲೇ ತಾಲೂಕು ಆರೋಗ್ಯ ಇಲಾಖೆಯಿಂದ ಲಸಿಕೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಬೆಳಿಗ್ಗೆ ಗಂಟೆ 10.00ರಿಂದ ಸಾಯಂಕಾಲ 4.00ರವೆರೆಗೆ ಲಸಿಕಾ ಅಭಿಯಾನ ನಡೆಯಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.

ವ್ಯಾಕ್ಸಿನೇಶನ್ ನಡೆಯುವ ಸ್ಥಳಗಳು ಇಂತಿವೆ:

• ಶ್ರೀ ಕ್ಷೇ.ಧ. ಪ್ರಥಮ ದರ್ಜೆ ಕಾಲೇಜು, ಉಜಿರೆ – 750 ಡೋಸ್

• ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೇಲಂತಬೆಟ್ಟು-771 ಡೋಸ್

• ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ- 525 ಡೋಸ್

ಸೈಂಟ್ ಆ್ಯಂಟನಿ ಪದವಿ ಪೂರ್ವ ಕಾಲೇಜು, ನಾರಾವಿ – 109 ಡೋಸ್

ವಿದ್ಯಾರ್ಥಿಗಳು ತರಬೇಕಾದ ದಾಖಲೆಗಳು ಇಂತಿವೆ:

*ಆಧಾರ್ ಕಾರ್ಡ್

*ಕಾಲೇಜ್ ಐಡಿಯ ಜೆರಾಕ್ ಪ್ರತಿ

*ಮೊಬೈಲ್ ಫೋನ್

ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಶಾಸಕ ಹರೀಶ್ ಪೂಂಜಾ ವಿನಂತಿ ಮಾಡಿಕೊಂಡಿದ್ದಾರೆ.

Leave A Reply

Your email address will not be published.