ಗ್ರಾಮ ಪಂಚಾಯತ್ ಅಧ್ಯಕ್ಷೆಯ ಮನೆಯಲ್ಲಿ ಅಕ್ರಮ ಕಳ್ಳಭಟ್ಟಿ ಪತ್ತೆ | ಅಧ್ಯಕ್ಷೆ ಪತಿ ಅಂದರ್
ಮೂಡಿಗೆರೆ: ಕಳ್ಳಭಟ್ಟಿ ಸಂಗ್ರಹಿಸಿಟ್ಟದ್ದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿಯನ್ನು ಬಂಧಿಸಲಾಗಿದೆ.
ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಧ್ಯಾ ರವರ ಮನೆಯಲ್ಲಿ ಸುಮಾರು 60 ಲೀಟರ್ ಕಳ್ಳಭಟ್ಟಿ, 200 ಲೀಟರ್ ಬೆಲ್ಲದ ಕೊಳೆ ಸಂಗ್ರಹಿಸಿಟ್ಟಿದ್ದರು ಎಂದು ತಿಳಿದುಬಂದಿದೆ.
ಖಚಿತ ಮಾಹಿತಿಯನ್ನಾಧರಿಸಿ ಅಬಕಾರಿ ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಜಾವಳಿ ಗ್ರಾಮದ ಕಾಳಿಕಟ್ಟೆ ಮನೆಯ ಮೇಲೆ ದಾಳಿ ನಡೆಸಿದ್ದು, ಅಧ್ಯಕ್ಷೆಯ ಪತಿ ಸುರೇಶ್ ರವರನ್ನು ಬಂಧಿಸಲಾಗಿದೆ.
ಮೂಡಿಗೆರೆ ಅಬಕಾರಿ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.