ಗಂಡ ಪಾನ್ ಪರಾಗ್ ತಿಂತಿದ್ದ, ಬಾಯಿಂದ ಗಬ್ಬು ವಾಸನೆ ಬರ್ತಿತ್ತು ಎಂದು ಬೇರೊಬ್ಬನ ಜೊತೆ ಓಡಿ ಹೋದ ಪತ್ನಿ | ಕೋರ್ಟು ಕೂಡಾ ಆಕೆಯನ್ನೇ ಬೆಂಬಲಿಸಿದೆ !

ಪಾಲಕ್ಕಾಡ್ (ಕೇರಳ): ಪ್ರೇಮಿಯೊಂದಿಗೆ ಓಡಿಹೋದ ವಿವಾಹಿತೆಯೊಬ್ಬಳು ಪೊಲೀಸರಿಗೆ ಶರಣಾಗಿ ತಾನು ಯಾತಕ್ಕಾಗಿ ಗಂಡನನ್ನು ಬಿಟ್ಟು ಹೋದೆ ಎಂಬ ಕಾರಣ ನೀಡಿದ್ದು, ಆ ಕಾರಣ ಕೇಳಿದ ಪೊಲೀಸರು ತಬ್ಬಿಬ್ಬಾಗಿದ್ದರು.

ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿ 22 ವರ್ಷದ ಗೃಹಿಣಿ ಕಥೆ ಇದಾಗಿದ್ದು, ಆಕೆ ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಓಡಿ ಹೋಗಿದ್ದಳು.
ಪೊಲೀಸರು ಹುಡುಕಾಟದಲ್ಲಿ ತೊಡಗಿದಾಗ ಪೊಲೀಸರಿಗೆ ಬಂದು ಶರಣಾಗಿದ್ದಾಳೆ. ನಂತರ ಪಾನ್ ಪರಾಗ್ ಪಾರ್ಟಿಯ ಜತೆ ಬಾಳಲು ಸಾಧ್ಯವಿರಲಿಲ್ಲ. ಗಂಡನ ಪಾನ್ ಪರಾಗ್ ನ ದುರ್ವಾಸನೆ ಬರುತ್ತಿತ್ತು. ಆದ್ದರಿಂದ ಲವರ್ ಜತೆ ಓಡಿಹೋದೆ ಎಂಬ ಹೇಳಿಕೆ ನೀಡಿದ್ದಾಳೆ.

ಆಕೆಯ ಗಂಡ ವಿಪರೀತ ಪಾನ್ ಪರಾಗ್ ಹಾಗೂ ಮದ್ಯ ಸೇವನೆ ಮಾಡುತ್ತಿದ್ದ. ಆ ಕಾರಣ ಆತನೊಂದಿಗೆ ಬಾಳ್ವೆ ಮಾಡುವುದು ಕಷ್ಟವಾಯಿತು. ವಿಪರೀತವಾಗಿ ಗುಟ್ಕಾ ತಿನ್ನುತ್ತ, ಮದ್ಯ ಸೇವನೆ ಮಾಡುತ್ತಾ ಇರುವವನಾದುದರಿಂದ ಆತನ ಬಾಯಿಂದ ಗಬ್ಬು ವಾಸನೆ ಹೊರ ಹೊಮ್ಮುತ್ತಿತ್ತು. ಅಂತಹ ಗಂಡನನ್ನು ನಾನು ಹೇಗೆ ಪ್ರೀತಿಸಲಿ ? ಆದುದರಿಂದ ನನಗೆ ಆತನ ಜತೆ ಮಲಗಲು ಕಷ್ಟವಾಗಿತ್ತು ಎಂದು ಆ ತರುಣಿ ಹೇಳಿದ್ದಾಳೆ.
ಅಲ್ಲದೆ ಆತ ಹಿಂಸೆ ನೀಡುತ್ತಿದ್ದ. ದೌರ್ಜನ್ಯ ಸಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಓಡಿಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ.

ಇಂತಹ ಸಂದರ್ಭದಲ್ಲಿ ಈ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಪಾಲಕ್ಕಾಡ್‌ನ ಮನ್ನಾಡ್‌ಕಾಡ್‌ನ ನಿವಾಸಿಯೊಬ್ಬನ ಪರಿಚಯವಾಗಿದ್ದು, ಆತನೊಟ್ಟಿಗೆ ಸಲುಗೆ ಬೆಳೆಸಿಕೊಂಡಿದ್ದಳು. ದಿನವೂ ಅವ ಸರಸ ಸಲ್ಲಾಪ ಫೋನ್‌ನಲ್ಲಿಯೇ ನಡೆಯುತ್ತಿತ್ತು. ಮೊನ್ನೆ ಒಂದು ದಿನ ನಸುಕಿನ 4 ಗಂಟೆಗೆ ಆಕೆ ಎದ್ದು ಪರಾರಿಯಾಗಿದ್ದಾಳೆ. ಈಕೆಯ ಪ್ರಿಯಕರ ಗೇಟ್ ಬಳಿ ಬಂದು ಕಾಯುತ್ತಿದ್ದು, ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ಇವಳಿಗೆ ಅನೈತಿಕ ಸಂಬಂಧ ಇರುವುದು ತಿಳಿದಿತ್ತು. ಇದೇ ಕಾರಣಕ್ಕೆ ಆಕೆಯ ಫೋನ್ ಕಸಿದುಕೊಂಡು ಸಿಮ್ ನಾಶ ಮಾಡಿದ್ದೆ. ಪ್ರಿಯಕರನೊಂದಿಗೆ ಓಡಿಹೋಗುವ ವೇಳೆ ಈ ನನ್ನ ಫೋನ್ ಮತ್ತು ಸಿಮ್ ತೆಗೆದುಕೊಂಡು ಹೋಗಿದ್ದಾಳೆ ಎಂದಿದ್ದಾನೆ. ಕಾಣೆಯಾದ ಕೂಡಲೇ ಆಕೆಯ ಗಂಡ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾನೆ.

ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡಿದ ಪೊಲೀಸರು ಆತನ ಮಡದಿ ಹಾಗೂ ಆಕೆಯ ಪ್ರಿಯಕರ ಎಲ್ಲಿದ್ದಾರೆ ಎಂದು ಪತ್ತೆ ಮಾಡಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಕಾರಣಕ್ಕೆ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವುದಾಗಿ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಿಳೆ ತಿಳಿಸಿದ್ದು, ಕುಡುಕ ಗಂಡನ ಬಗ್ಗೆ ಹೇಳಿಕೆ ನೀಡಿದ್ದಾಳೆ. ಮಾತ್ರವಲ್ಲದೇ, ತನ್ನ ಪ್ರಿಯಕರನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದು, ಆತನೊಂದಿಗೆ ತನ್ನ ಮುಂದಿನ ಜೀವ ನಡೆಸುತ್ತೇನೆ ಎಂದಿದ್ದಾಳೆ. ವಿಚಾರಣೆ ನಡೆಸಿದ ಕೋರ್ಟ್ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು, ಪರ್ಸನಲ್ ಹೈಜೀನ್ ನ ಮತ್ತು ದೌರ್ಜನ್ಯ ನಡೆಸುತ್ತಿರುವ ಕಾರಣ ಈ ರೀತಿ ಆಕೆ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದು, ಲವರ್ ಜತೆ ಬಾಳಲು ಅನುಮತಿ ನೀಡಿದೆ. ಈ ಆದೇಶದಿಂದ ಪಾನ್ ಮಸಾಲಾ ಜಗಿಯುವ ಪಾರ್ಟಿ (ಆಕೆಯ ಗಂಡ ) ತನ್ನ ಹೆಂಡತಿಯನ್ನು ಬೇರೊಬ್ಬ ಎತ್ತಾಕಿಕೊಂಡು ಹೋಗಿದ್ದರೂ, ಏನೂ ಮಾಡದ ಸ್ಥಿತಿಯಲ್ಲಿದ್ದಾನೆ.

Leave A Reply

Your email address will not be published.